ಸಿಗಂದೂರು ದೇವಿ ದರ್ಶನ ಅವಧಿ ಹೆಚ್ಚಳ!
– ಸೇತುವೆ ಆಗ್ತಿದ್ದಂತೆ ಸಾವಿರಾರು ಭಕ್ತರ ಆಗಮನ
– ಎಲ್ಲಿ ನೋಡಿದರೂ ಜನ.. ಸೆಳೆಯುತ್ತಿದೆ ಎಲ್ಲರ ಮನ
NAMMUR EXPRESS NEWS
ಶಿವಮೊಗ್ಗ: ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡ ಬೆನ್ನಲ್ಲೇ, ಸಾಗರ ತಾಲೂಕಿನ ಐತಿಹಾಸಿಕ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭಕ್ತರ ದಟ್ಟಣೆ ಹೆಚ್ಚಾಗಿದೆ. ಭಕ್ತರ ಅನುಕೂಲಕ್ಕಾಗಿ ಇದೀಗ ದೇವಿಯ ದರ್ಶನದ ಸಮಯವನ್ನು ವಿಸ್ತರಣೆ ಮಾಡಲಾಗಿದೆ
ಹೌದು, ಈ ಮೊದಲು ರಾತ್ರಿ 7:30ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿತ್ತು. ಈಗ ಇದನ್ನು ರಾತ್ರಿ 9 ಗಂಟೆಯವರೆಗೆ ವಿಸ್ತರಿಸಲಾಗಿದೆ!.ಇದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಯಾವುದೇ ಆತಂಕವಿಲ್ಲದೆ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಬಹುದು.
ಹೊಸ ದರ್ಶನದ ಸಮಯ ಹೀಗಿದೆ:
ಬೆಳಗ್ಗೆ: 5 ಗಂಟೆಯಿಂದ ಮಧ್ಯಾಹ್ನ 2:30ರವರೆಗೆ
* ಸಂಜೆ: 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ
ಆಡಳಿತ ಮಂಡಳಿ ಹೇಳಿದ್ದೇನು..?
ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಅವರು ಮಾಹಿತಿ ನೀಡಿದ್ದು, ಮೂರು ಹೊತ್ತಿನ ಪ್ರಸಾದ ವ್ಯವಸ್ಥೆಯೂ ಇರಲಿದೆ ಎಂದು ತಿಳಿಸಿದ್ದಾರೆ. ಸಿಗಂದೂರು ಸೇತುವೆ ನಿರ್ಮಾಣವಾಗುವ ಮೊದಲು, ಭಕ್ತರು ಶರಾವತಿ ಹಿನ್ನೀರು ದಾಟಲು ಲಾಂಚ್ಗಳನ್ನೇ ಆಶ್ರಯಿಸಬೇಕಿತ್ತು. ಲಾಂಚ್ ಸೇವೆ ಸಂಜೆ 6 ಗಂಟೆಗೆ ನಿಲ್ಲುತ್ತಿತ್ತು. ಇದರಿಂದ ದೂರದಿಂದ ಬರುವ ಭಕ್ತರಿಗೆ ರಾತ್ರಿ ತಂಗಲು ಸಮಸ್ಯೆಯಾಗುತ್ತಿತ್ತು. ಸೇತುವೆ ನಿರ್ಮಾಣದಿಂದಾಗಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಈಗ ಭಕ್ತರು ಸುಲಭವಾಗಿ ದೇವಸ್ಥಾನ ತಲುಪುತ್ತಿದ್ದಾರೆ. ಇದೇ ಕಾರಣಕ್ಕೆ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ.