ಸರಿಗಮಪ ಖ್ಯಾತಿಯ ಸುಹಾನಾ ಸೈಯ್ಯದ್ ಹಾಗೂ ನಿತಿನ್ ಶಿವಾಂಶ್ ಮದುವೆ
* ಈಗಾಗಲೇ ತಮ್ಮ ಪ್ರೀತಿಯ ವಿಷಯ ಹಂಚಿಕೊಂಡಿದ್ದ ಸುಹಾನ
* ನೀನೆ ರಾಮ,ನೀನೆ ಅಲ್ಲಾ,ನೀನೆ ಯೇಸು ಹಾಡಿನ ಮೂಲಕ ಸುದ್ದಿಯಾಗಿದ್ದ ಗಾಯಕಿ
NAMMMUR EXPRESS NEWS
ಕನಕಪುರ: ನೀನೇ ರಾಮಾ, ನೀನೇ ಅಲ್ಲಾ, ನೀನೇ ಯೇಸು ಎಂದು ಸರಿಗಮಪ 13 ಶೋನಲ್ಲಿ ಹಾಡು ಹಾಡಿ, ದೊಡ್ಡ ವಿವಾದಕ್ಕೆ ಸಿಲುಕಿದ್ದ ಶಿವಮೊಗ್ಗದ ಸಾಗರ ಮೂಲದ ಸುಹಾನಾ ಸೈಯದ್ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಏಂಬುವವರನ್ನು ಲವ್ ಮಾಡುತ್ತಿರುವುದಾಗಿ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು. ತಮ್ಮ 16 ವರ್ಷಗಳ ಪ್ರೀತಿ ಇಂದು ಕುವೆಂಪುರವರ ಆಶಯದಂತೆ ಅವರು ಮಂತ್ರ ಮಾಂಗಲ್ಯ ಸಂಪ್ರದಾಯದಂತೆ ಗಣ್ಯರ ಸಮ್ಮುಖದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
* ಗಣ್ಯರ ಸಮ್ಮುಖದಲ್ಲಿ ವಿವಾಹ,ಆಪ್ತರಷ್ಟೇ ಭಾಗಿ,ಫಾನ್ಸ್‌ಗಳಿಂದ ವಿಷ್
16 ವರ್ಷಗಳ ಕಾಲ ಪ್ರೀತಿಸಿದ ಸುಹಾನಾ ಸೈಯದ್ ಮತ್ತು ನಿತಿನ್ ಶಿವಾಂಶ್, ಎರಡು ಮನೆಯವರನ್ನ ಒಪ್ಪಿಸಿ ಕುಟುಂಬದವರು, ಗಣ್ಯರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅಂತರ್‌ಧರ್ಮೀಯ ಸರಳ ವಿವಾಹ ಕಾರ್ಯಕ್ರಮದಲ್ಲಿ ಆಪ್ತ ವರ್ಗದವರಷ್ಟೇ ಪಾಲ್ಗೊಂಡಿದ್ದರು.
ಮದುವೆಯ ಸಮಯದಲ್ಲಿ ಸುಹಾನಾ ಗೋಲ್ಡನ್ ಬಾರ್ಡರ್ ಇರುವ ರೆಡ್ ಸೀರೆಯಲ್ಲಿ ಕಂಗೊಳಿಸಿದರೆ, ನಿತಿನ್ ಶಿವಾಂಶ್ ಶೇರ್ವಾನಿ ಧರಿಸಿದ್ದರು. ಫೋಟೋಗೆ ಸುಹಾನಾ ಅಭಿಮಾನಿಗಳು ʻಸೂಪರ್ ಜೋಡಿʼ ಎಂದೆಲ್ಲಾ ಹರಸಿ ಹಾರೈಸಿದ್ದಾರೆ.
* ಮದುವೆ ಆಹ್ವಾನ ಪತ್ರಿಕೆ ಹೇಗಿತ್ತು?
ಅಂದಹಾಗೆ ಇಂದು ಅ.17ರಂದು ಮದುವೆ ನಡೆಯಲಿದ್ದು, ಕನಕಪುರದ ಖಾಸಗಿ ರೆಸಾರ್ಟ್‌ನಲ್ಲಿ ಈ ಮದುವೆ ನಡೆದಿದ್ದು. ಮಂತ್ರ ಮಾಂಗಲ್ಯಕ್ಕೆ ಇಷ್ಟೇ ಜನರು ಭಾಗಿ ಆಗಬೇಕು ಎಂಬ ನಿಯಮಗಳು ಕೂಡ ಇರುತ್ತವೆ. ಸುಹಾನಾ ಸೈಯದ್ ಅವರ ಮದುವೆ ಆಹ್ವಾನ ಪತ್ರಿಕೆಯಲ್ಲಿ, “ಪ್ರೀತಿ ವಿಶ್ವದ ಭಾಷೆ. ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಜೊತೆಯಾಗಲಿರುವ ಸುಹಾನಾ ಹಾಗೂ ನಿತಿನ್. ನಮ್ಮ ನಡೆ ವಿಶ್ವ ಮಾನವತ್ವದೆಡೆ. ಸಹೃದಯಿಗಳೇ, ಬನ್ನಿ ಹರಸಿ. ಆಶೀರ್ವದಿಸಿ” ಎಂದು ತಮ್ಮ ಮದುವೆ ಆಮಂತ್ರಣವನ್ನು ಹಂಚಿಕೊಂಡಿದ್ದರು.