ಟಾಪ್ 4 ನ್ಯೂಸ್ ಕರ್ನಾಟಕ
ಉತ್ತರ ಕನ್ನಡ: ಜೋಗಿಕೊಪ್ಪ ಗ್ರಾಮದಲ್ಲಿ ಇಲಿಜ್ವರ ಪತ್ತೆ..!!
– ಬೆಂಗಳೂರು: ತಿಗಣೆ ಔಷಧದ ವಾಸನೆಗೆ ಪದವೀಧರ ಸಾವು..!!
– ಬಂಗಾರಪೇಟೆ : 3 ವರ್ಷದ ಮಗಳ ಮೇಲೆ ತಂದೆ ಲೈಂಗಿಕ ದೌರ್ಜನ್ಯ!
– ರಸ್ತೆಯಲ್ಲೇ ಹೊತ್ತಿ ಉರಿದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್.!
NAMMUR EXPRESS NEWS
ಉತ್ತರ ಕನ್ನಡ: ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಕೊಪ್ಪ ಗ್ರಾಮದಲ್ಲಿ ಒಂದು ಇಲಿಜ್ವರ (ಲೆಪ್ಟೊಸ್ಪೈರೋಸಿಸ್) ಪ್ರಕರಣ ವರದಿಯಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ತಿಳಿಸಿದ್ದಾರೆ. ‘ಈ ವರ್ಷ ಒಟ್ಟು 7 ಪ್ರಕರಣಗಳು ವರದಿಯಾಗಿವೆ. ಇದು ಒಂದು ಬ್ಯಾಕ್ಟೀರಿಯಾ ಸೋಂಕು. ಸೋಂಕಿತ ಇಲಿಗಳು ಮತ್ತು ಇತರ ದಂಶಕಗಳ (ರೊಡೆಂಟ್ಸ್) ಮೂತ್ರದ ಮೂಲಕ ಹರಡುತ್ತದೆ. ಜ್ವರ, ತಲೆ ನೋವು, ಸುಸ್ತು, ಮೈ-ಕೈ ನೋವುಗಳಂತಹ ಲಕ್ಷಣಗಳು ಇರುತ್ತದೆ. ಇಂಥ ಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ತಿಳಿಸಿದ್ದಾರೆ.
– ಬೆಂಗಳೂರು: ತಿಗಣೆ ಔಷಧದ ವಾಸನೆಗೆ ಪದವೀಧರ ಸಾವು..!!
ಬೆಂಗಳೂರು : ಪಿಜಿಯಲ್ಲಿ ಸಿಂಪಡಿಸಲಾಗಿದ್ದ ತಿಗಣೆ ಔಷಧಿ ವಾಸನೆ ತಾಳಲಾರದೆ ಬಿ.ಟೆಕ್ ಪದವೀಧರ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದು ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ತಿರುಪತಿಂತು ನಿವಾಸಿಯಾದ ಪವನ್ (21) ಮೃತ ಪದವೀಧರ. ಕಳೆದ 3 ತಿಂಗಳಿಂದ ಅಶ್ವತ್ ನಗರದ ಬಿಎಂಆರ್ ಪಿ.ಜಿ.ಯೊಂದರಲ್ಲಿ ನೆಲೆಸಿದ್ದರು. ಇವರು ನಗರದ ಐಟಿ ಕಂಪನಿಗಳಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ತೆರಳಿದ್ದರು.
ಪಿ.ಜಿಯಲ್ಲಿ ತಿಗಣೆ ಸಮಸ್ಯೆ ಹೆಚ್ಚಾಗಿದ್ದರಿಂದ ಔಷಧಿ ಸಿಂಪಡಿಸಲು ಪಿ.ಜಿ.ಮಾಲೀಕರು ಪವನ್ ಉಳಿದುಕೊಂಡಿದ್ದ ಕೊಠಡಿಯ ಮಾಸ್ಟರ್ ಕೀ ಬಳಸಿ ಆತನ ರೂಮಿಗೆ ಔಷಧಿ ಸಿಂಪಡಿಸಿದ್ದರು. ಊರಿಗೆ ಹೋಗಿದ್ದ ಪವನ್ ಅ.19ರಂದು ಪಿಜಿಗೆ ವಾಪಸ್ಸಾಗಿದ್ದಾರೆ. ಎಂದಿನಂತೆ ರಾತ್ರಿ ಮಲಗಿದ್ದು, ಮಾರನೇ ದಿನ ಬೆಳಗ್ಗೆ ಅಸ್ವಸ್ಥಗೊಂಡಿದ್ದರು. ವಿಷಯ ತಿಳಿದು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಪವನ್ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಪವನ್ ಸಾವಿನ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
– ಬಂಗಾರಪೇಟೆ : 3 ವರ್ಷದ ಮಗಳ ಮೇಲೆ ತಂದೆ ಲೈಂಗಿಕ ದೌರ್ಜನ್ಯ!
ಬಂಗಾರಪೇಟೆ: ಮೂರು ವರ್ಷದ ಹೆತ್ತ ಮಗಳ ಮೇಲೆಯೇ ತಂದೆ ಲೈಂಗಿಕ ದೌರ್ಜನ್ಯ ಎಸಗಿರುವ ರಾಕ್ಷಸ ಕೃತ್ಯ ಪಟ್ಟಣದ ಸಿ. ರಹೀಂ ಕಾಂಪೌಂಡ್ ಬಡಾವಣೆಯಲ್ಲಿ ನಡೆದಿದೆ. 32 ವರ್ಷದ ಆರೋಪಿಯನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಬೂದಿಕೋಟೆ ಹೋಬಳಿ ಯಳೇಸಂದ್ರದ ಈ ದುರುಳ ಸದ್ಯಕ್ಕೆ ಪಟ್ಟಣದ ಸಿ.ರಹೀಂ ಕಾಂಪೌಂಡ್ ಬಡಾವಣೆಯಲ್ಲಿ ವಾಸವಾಗಿದ್ದಾನೆ. ಅ. 19ರಂದು ಮಧ್ಯಾಹ್ನ 3-30ರ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ 3 ವರ್ಷದ ಮಗಳ ಮೇಲೆಯೇ ಈ ಕೃತ್ಯ ಎಸಗಿದ್ದಾನೆಂದು ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ನಿರೀಕ್ಷಕ ಆರ್. ದಯಾನಂದ್, ಎಎಸ್ಐ ಶ್ರೀನಿವಾಸ್, ಮುಖ್ಯಪೇದೆ ನಾಗೇಶ್ ನೇತೃತ್ವದ ತಂಡ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
– ರಸ್ತೆಯಲ್ಲೇ ಹೊತ್ತಿ ಉರಿದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್
ಆಂಧ್ರಪ್ರದೇಶದ ಕರ್ನೂಲ್ ಬಳಿ ಖಾಸಗಿ ಬಸ್ ವೊಂದು ಹೊತ್ತಿ ಉರಿದಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕರ್ನೂಲ್ ಜಿಲ್ಲೆಯ ಉಲ್ಲಿಂದಕೊಂಡ ಕ್ರಾಸ್ ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಹೈದರಾಬಾದ್ ಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಪ್ರಯಾಣಿಕರು ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಪಘಾತದ ಸಮಯದಲ್ಲಿ ಬಸ್ ನಲ್ಲಿ 40 ಪ್ರಯಾಣಿಕರು ಇದ್ದರು ಎಂದು ವರದಿಯಾಗಿದೆ. 12 ಪ್ರಯಾಣಿಕರು ಇಳಿದು ಉಳಿದ ಪ್ರಯಾಣಿಕರು ಬಸ್ ನಲ್ಲೇ ಇದ್ದರು ಎಂದು ತೋರುತ್ತದೆ. ಬೆಳಗಿನ ಜಾವ 3:30 ಕ್ಕೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಹಲವಾರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದಾಗ್ಯೂ, ಬಸ್ ಚಾಲಕ ಮತ್ತು ಸಹಾಯಕ ಇಬ್ಬರೂ ಅಪಘಾತದಿಂದ ಪಾರಾಗಿದ್ದಾರೆ. ಬೆಳಗಿನ ಜಾವ 3.30 ಕ್ಕೆ ಅಪಘಾತ ಸಂಭವಿಸಿದೆ. ಆ ಸಮಯದಲ್ಲಿ ಭಾರೀ ಮಳೆಯಾಗುತ್ತಿತ್ತು. ಆ ಸಮಯದಲ್ಲಿ, ಒಬ್ಬ ಬೈಕ್ ಸವಾರ.. ಬಸ್ಸಿನ ದಾರಿಯಲ್ಲಿ ಬಂದಿದ್ದಾನೆ ಎಂದು ತಿಳಿದುಬಂದಿದೆ. ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದಿದೆ ಮತ್ತು ಬಸ್ ನೊಳಗೆ ಹೋಯಿತು. ಡೀಸೆಲ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದಾಗ ಬಸ್ಸಿನ ಮುಂಭಾಗ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ. ಬೆಂಕಿ ಕ್ರಮೇಣ ಬಸ್ಸಿನಾದ್ಯಂತ ವೇಗವಾಗಿ ಹರಡಿತು ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪುವ ಹೊತ್ತಿಗೆ.. ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಬಸ್ ಚಾಲಕ ಮತ್ತು ಸಹಾಯಕ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿ ಬದುಕುಳಿದಿದ್ದಾರೋ ಅಥವಾ ಸತ್ತಿದ್ದಾರೋ ಎಂಬುದು ಇನ್ನೂ ತಿಳಿದಿಲ್ಲ. ಆದಾಗ್ಯೂ ಬಸ್ಸಿನ ಕೆಳಗಿರುವ ಲಗೇಜ್ ವಿಭಾಗದ ಬಳಿ ಶವ ಪತ್ತೆಯಾಗಿದೆ. ಅದು ಬೈಕ್ ಸವಾರನಾಗಿರಬಹುದು ಎಂಬ ಅನುಮಾನವಿದೆ.