Categories
ರಾಜ್ಯ ಶಿವಮೊಗ್ಗ

ಕರ್ನಾಟಕ ಟಾಪ್ 5 ನ್ಯೂಸ್..!

– ಶಿವಮೊಗ್ಗ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ.!
– ತಾಯಿಯನ್ನು ಚುಡಾಯಿಸಿದವನ ಮನೆಗೆ ನುಗ್ಗಿ ಹೊಡೆದು ಕೊಂದ ಮಗ!
– ನಶೆಗೆ ಹಾವಿನ ವಿಷವನ್ನು ಆರ್ಡರ್ ಮಾಡಿದ್ದ ಎಲ್ವಿಶ್ ಯಾದವ್!
– ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್‌ ಹಾಕ್ತಿಯಾ ಅಂತಾ ಯುವಕನಿಗೆ ಥಳಿತ : ಎಫ್ ಐ ಆರ್ ಗೆ ಪೊಲೀಸ್ ಹಿಂದೇಟು!
– ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗುಬ್ಬಿ ಶಾಸಕ; ವಿಡಿಯೊ ವೈರಲ್

NAMMUR EXPRESS NEWS
ಶಿವಮೊಗ್ಗ: ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಗರದ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಶಾಂತ್ ಗಾಯಾಳು ಯುವಕ ಹಲ್ಲೆ ಮಾಡಿದಾಗ ತಲೆಯಲ್ಲಿ ಲಾಂಗ್ ಸಿಕ್ಕಿಹಾಕಿಕೊಂಡಿದ್ದು, ನರಳಾಡುತ್ತಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಾಯಿಯನ್ನು ಚುಡಾಯಿಸಿದವನ ಮನೆಗೆ ನುಗ್ಗಿ ಹೊಡೆದು ಕೊಂದ ಮಗ:

ಬೆಳಗಾವಿ: ತಾಯಿಯನ್ನು ಚುಡಾಯಿಸಿದ್ದಕ್ಕೆ ಸಿಟ್ಟಾದ ಮಗನೊಬ್ಬ, ಯುವಕನ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿ ಆಗಿದ್ದಾನೆ. ಬೆಳಗಾವಿ ನಗರದ ತೆಲಗು ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗಣೇಶ ಕಾಂಬಳೆ (25) ಕೊಲೆಯಾದವನು. ತರುಣ್ ನಾಯ್ಕ ಆರೋಪಿಯಾಗಿದ್ದಾನೆ. ತರುಣ್ ನಾಯ್ಕ ತಾಯಿಯನ್ನು ಗಣೇಶ ಕಾಂಬಳೆ ಚುಡಾಯಿಸಿದ್ದ. ಈ ವಿಷಯ ತಿಳಿದು ಸಿಟ್ಟಾದ ತರುಣ್ ಕೈಯಲ್ಲಿ ದೊಣ್ಣೆ ಹಿಡಿದು ಗಣೇಶನ ಮನೆಗೆ ನುಗ್ಗಿದ್ದ. ದೊಣ್ಣೆಯಿಂದ ಗಣೇಶನ ತಲೆಗೆ ಬಡಿದು ತೀವ್ರವಾಗಿ ಹಲ್ಲೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಗಣೀಶ ಸ್ಥಳದಲ್ಲೇ ಮೃತಪಟ್ಟಿದ್ದ.

ಗಣೇಶ ಮೃತಪಟ್ಟ ನಂತರ ತರುಣ್ ನಾಯ್ಕ ಘಟನಾ ಸ್ಥಳದಿಂದ ಪರಾರಿ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಣೇಶ ಕಾಂಬಳೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಕೊಲೆ ನಡೆದು 12 ಗಂಟೆಯಲ್ಲೆ ಆರೋಪಿಗಳನ್ನು ಬಂಧಿಸಿದ್ದಾರೆ. ತರುಣ್‌ಗೆ ಸಹಾಯ ಮಾಡಿದ ಓರ್ವ ಬಾಲಾಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತುರಣ್ ನಾಯ್ಕನ ತಾಯಿಯನ್ನು ಗಣೇಶ ಕಾಡಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಮನಗೆ ನುಗ್ಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ತಲೆ ಮರೆಸಿಕೊಂಡಿದ್ದ ತರುಣ್ ನಾಯ್ಕ ಬಂಧಿಸಿರುವ ಬೆಳಗಾವಿಯ ಪ್ಯಾಂಪ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ನಶೆಗೆ ಹಾವಿನ ವಿಷವನ್ನು ಆರ್ಡರ್ ಮಾಡಿದ್ದ ಎಲ್ವಿಶ್ ಯಾದವ್;
ಕೊನೆಗೂ ಪೊಲೀಸರ ಮುಂದೆ ತಪ್ರೊಪ್ಪಿಕೊಂಡ ನಟ!:

ಬೆಂಗಳೂರು: ಬಿಗ್ ಬಾಸ್ ಒಟಿಟಿ 2 ವಿಜೇತ ಮತ್ತು ಯೂಟ್ಯೂಬ‌ರ್ ಎಲ್ವಿಶ್ ಯಾದವ್‌ ಪೊಲೀಸರ ವಿಚಾರಣೆ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಎಲ್ವಿಶ್ ಹಾವಿನ ವಿಷವನ್ನು ಆರ್ಡರ್ ಮಾಡಿರುವ ಬಗ್ಗೆ ಪೊಲೀಸರ ಬಳಿ ತಪೊಪ್ಪಿಕೊಂಡಿದ್ದಾರೆ. ಈ ಯೂಟ್ಯೂಬ‌ರ್ ಅನ್ನು ಭಾನುವಾರ ಬಂಧಿಸಲಾಯಿತು. ನಂತರ ಅವರನ್ನು 14 ದಿನಗಳ ರಿಮಾಂಡ್‌ಗೆ ಕಳುಹಿಸಲಾಗಿದೆ.

ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್‌ ಹಾಕ್ತಿಯಾ ಅಂತಾ ಯುವಕನಿಗೆ ಥಳಿತ;
ಎಫ್‌ಐಆರ್‌ಗೆ ಪೊಲೀಸರು ಹಿಂದೇಟು?:

ಬೆಂಗಳೂರು: ಭಕ್ತಿಗೀತೆ ಹಾಡುಗಳನ್ನು ಹಾಕಿದ್ದಕ್ಕೆ ಐದಾರು ಮುಸ್ಲಿಂ ಯುವಕರಿಂದ ಯುವಕನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ. ಮುಖೇಶ್, ಹಲ್ಲೆಗೊಳಗಾಗಿರುವ ಯುವಕ.’ವರ್ಧಮಾನ್ ಟೆಲಿಕಾಮ್’ ಎಂಬ ಮೊಬೈಲ್‌ ಶಾಪ್ ನಡೆಸುತ್ತಿದ್ದ ಮುಖೇಶ್ ಸಂಜೆ ಸಮಯ ಮೊಬೈಲ್ ಶಾಪ್‌ನಲ್ಲಿ ಭಕ್ತಿಗೀತೆ ಹಾಡುಗಳನ್ನು ಹಾಕಿದ್ದ ಯುವಕ. ಈ ವೇಳೆ ಅಂಗಡಿಗೆ ಬಂದಿದ್ದ ನಾಲೈದು ಮುಸ್ಲಿಂ ಯುವಕರು. ಸಂಜೆ ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕ್ತಿಯ ಅಂತಾ ಕಿರಿಕ್ ಮಾಡಿರುವ ಪುಂಡರು. ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿಯಿಂದ ಹೊರ ಎಳೆದು ಯುವಕನ ಮೇಲೆ ಹಲ್ಲೆ ನಡೆಸಿರುವ ಪುಂಡರು. ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿ ಹೋಗಿದ್ದಾರೆ.

ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗುಬ್ಬಿ ಶಾಸಕ; ವಿಡಿಯೊ ವೈರಲ್:

ತುಮಕೂರು: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್‌ ವಿರುದ್ಧ ಎಫ್‌ಐಆ‌ರ್ ದಾಖಲಾದ ಬೆನ್ನಲ್ಲೇ ಸರ್ಕಾರಿ ಅಧಿಕಾರಿಯನ್ನು ಶಾಸಕ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೊ ವೈರಲ್ ಆಗಿದೆ. ಮಾ. 4ರಂದು ಗುಬ್ಬಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಡೆದ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.