ಟಾಪ್ 5 ನ್ಯೂಸ್ ಕರ್ನಾಟಕ
ಹುಬ್ಬಳ್ಳಿ : ಅಂಜಲಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.
– ಕೊಪ್ಪಳ: ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆಯಾಗಿ ಕಾರ್ಮಿಕ ಸಾವು..!
– ಚಿಕ್ಕೋಡಿ: ಜಾತ್ರೆಲಿ ಪ್ರಸಾದ ಸೇವಿಸಿದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ
– ಧಾರವಾಡ: ಆಸ್ತಿ ವಿಚಾರಕ್ಕೆ ನಡುರಸ್ತೆಯಲ್ಲಿ ಯುವತಿಯನ್ನು ಮನಸೋ ಇಚ್ಛೆ ಥಳಿಸಿದ ಗ್ರಾಪಂ ಸದಸ್ಯ
-ಕೋಲಾರ: ಯುವಕರು ಬಿಯರ್ ಬಾಟೆಲ್‌ಗಳಲ್ಲಿ ಬಡಿದಾಟ
NAMMUR EXPRESS NEWS
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು. ಅಂಜಲಿ ಹತ್ಯೆಯ ಹಿಂದೆ ಪೋಕೋ ಆರೋಪಿಯ ಕೈವಾಡದ ಶಂಕೆ ಇರುವುದು ಪತ್ತೆಯಾಗಿದೆ. ನೇಹಾ ಹತ್ಯೆಯಿಂದ ನೊಂದಿದ್ದ ಹುಬ್ಬಳ್ಳಿ ಜನರಿಗೆ ಅಂಜಲಿ ಹತ್ಯೆ ಮತ್ತೊಂದು ಆಘಾತ ನೀಡಿತ್ತು. ಅಂಜಲಿ ಕೊಂದ ಆರೋಪಿ ಗಿರೀಶ್ ಕಂಬಿ ಹಿಂದೆ ಬಂಧಿಯಾಗಿದ್ದಾನೆ. ಆದರೆ ಇದೀಗ ಈ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ವಿಜಯ್ ಹಿರೇಮಠ ಎಂಬ ಪೋಕೋ ಆರೋಪಿ ಕೊಲೆಗಾರ ಗಿರೀಶ್‌ಗೆ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆ ಆರೋಪಿ ಗಿರೀಶ್ ಅಲಿಯಾಸ್ ವಿಶ್ವನ ಜೊತೆ ವಿಜಯ್ ಹಿರೇಮಠ ನಿರಂತರವಾಗಿ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ವಿಜಯ ಕೈವಾಡವೂ ಇದೆಯೋ ಅನ್ನೋ ಅನುಮಾನ ಶುರುವಾಗಿದೆ..
ಅಂಜಲಿ ಹತ್ಯೆಗೆ ಈ ವಿಜಯ್ ಹಿರೇಮಠ ಕುಮ್ಮುಕ್ಕು ನೀಡಿದ್ದಾನೋ ಅನ್ನೋ ಶಂಕೆ ಪೊಲೀಸರಿಗೆ ಕಾಡತೊಡಗಿದೆ. ಈ ವಿಜಯ್ ಹಿರೇಮರ್ ವಿರುದ್ಧ 2022 ಫೆಬ್ರುವರಿ 16ರಂದು ಪೋಕೋ ಪ್ರಕರಣ ದಾಖಲಾಗಿತ್ತು. ಕೇಸ್‌ಗೆ ಸಂಬಂಧಿಸಿಂದಂತೆ ವಿಜಯ್‌ನನ್ನ ಪೊಲೀಸರು ಬಂಧಿಸಿದ್ದರು. ಸದ್ಯ ಈ ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿದೆ. ಈ ಮಧ್ಯೆ ವಿಜಯ್ ಮೇಲೆ ಅಂಜಲಿ ಹತ್ಯೆಗೆ ಸಹಾಯ ಮಾಡಿರುವ ಆರೋಪವೂ ಕೇಳಿ ಬಂದಿದೆ. ಮೈಸೂರಿನಿಂದ ನಸುಕಿನ ಜಾವ ಹುಬ್ಬಳಿಗೆ ಬಂದಿದ್ದ ಗಿರೀಶ್ ಅಂಜಲಿ ಜೀವ ತೆಗೆದು ಪರಾರಿಯಾಗಿದ್ದ. ಆದರೆ, ಅಂಜಲಿ ಹತ್ಯೆಯಾದ ದಿನದವರೆಗೂ ವಿಜಯ್ ಹಿರೇಮಠ ಗಿರೀಶ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಆದರೆ, ಅಂಜಲಿ ಕೊಲೆಯಾದ ಬಳಿಕ ವಿಜಯ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಹೀಗಾಗಿ ಗಿರೀಶ್‌ಗೆ ವಿಜಯ್ ಸಹಾಯ ಮಾಡಿರುವ ಅನುಮಾನವಿದೆ.
ಮೃತ ಅಂಜಲಿ ಸಹೋದರಿ ಯಶೋದ ವಿಜಯ್ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಅಕ್ಕನ ಹತ್ಯೆ ಹಿಂದೆ ವಿಜಯ್ ಕೈವಾಡವಿದೆ ಅಂತ ಆರೋಪ ಮಾಡಿದ್ದಾರೆ. ಹೀಗಾಗಿ ನಾಪತ್ತೆಯಾದ ಅಜಯ್‌ನ ಪತ್ತೆ ಹಚ್ಚುವಂತೆ ದಲಿತ ಸಂಘಟನೆ ಆಗ್ರಹಿಸಿದ್ದು, ಸಿಐಡಿ ಡಿಜಿಜಿ ಡಾ.ಎಂ.ಎ ಸಲೀಂ ಅವರಿಗೆ ಮನವಿ ಸಲ್ಲಿಸಿದೆ., ಈ ವಿಜಯ್ ಅಂಜಲಿ ಹತ್ಯೆಗೆ ಸಹಾಯ ಮಾಡಿದ್ದಾ? ಗಿರೀಶ್‌ಗೆ ಕುಮ್ಮಕ್ಕು ನೀಡಿದ್ಯಾ ಅನ್ನೋದು ತನಿಖೆ ಬಳಿಕವಷ್ಟೆ ಗೊತ್ತಾಗಲಿದೆ.
– ಕೊಪ್ಪಳ: ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆಯಾಗಿ ಕಾರ್ಮಿಕ ಸಾವು..!
ಕೊಪ್ಪಳ: ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥಗೊಂಡಿದ್ದ ಕಾರ್ಮಿಕ ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಗಿಣಿಗೇರಾ ಸಮೀಪ ಇರುವ ಸ್ಟೀಲ್ ಫ್ಯಾಕ್ಟರಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ರಾಘವೇಂದ್ರ ಗೊಂದಳಿ(40) ಎಂದು ಗುರುತಿಸಲಾಗಿದೆ. ಅವರು ಕೊಪ್ಪಳ ತಾಲೂಕಿನ ಹಿಟ್ನಾಳ ನಿವಾಸಿಯಾಗಿದ್ದು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ BFG ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥಗೊಂಡಿದ್ದರು. ಅವರನ್ನು ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಚಿಕ್ಕೋಡಿ: ಜಾತ್ರೆಲಿ ಪ್ರಸಾದ ಸೇವಿಸಿದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಬಾಳುಮಾಮಾ ಜಾತ್ರೆಯಲ್ಲಿ ಊಟ ಮಾಡಿದವರು ಅಸ್ವಸ್ಥಗೊಂಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಮಧ್ಯಾಹ್ನ ಉಳಿದಿದ್ದ ಅಡುಗೆಯನ್ನೇ 200ಕ್ಕೂ ಹೆಚ್ಚು ಮಂದಿ ಸಂಜೆ ಊಟ ಮಾಡಿದ್ದರು. ಸಂಜೆ ಊಟ ಮಾಡಿದವರಿಗೆ ಏಕಾಏಕಿ ವಾಂತಿ ಭೇದಿ ಶುರುವಾಗಿತ್ತು. ಕೂಡಲೇ ಅಸ್ವಸ್ಥಗೊಂಡವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಮಾರು 30 ಮಂದಿ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಉಳಿದ 10 ಮಂದಿಗೆ ಕೇರೂರ ಗ್ರಾಮದ ಅಂಗವಾಡಿ ಹಾಗೂ 15 ಮಂದಿಗೆ ಯಕ್ಸಂಭಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗ್ರಾಮದಲ್ಲೇ ವೈದ್ಯಕೀಯ ತಂಡ ಬೀಡು ಬಿಟ್ಟಿದೆ.
– ಧಾರವಾಡ: ಆಸ್ತಿ ವಿಚಾರಕ್ಕೆ ನಡುರಸ್ತೆಯಲ್ಲಿ ಯುವತಿಯನ್ನು ಮನಸೋ ಇಚ್ಛೆ ಥಳಿಸಿದ ಗ್ರಾಪಂ ಸದಸ್ಯ
ಧಾರವಾಡ: ಆಸ್ತಿ ವಿಚಾರವಾಗಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ನಡುರಸ್ತೆಯಲ್ಲೇ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ಧಾರವಾಡ ತಾಲೂಕಿನ ಕನಕೂರ ಗ್ರಾಮದಲ್ಲಿ ಘಟನೆ ನಡೆದಿದೆ. ಮಾರುತಿ ಪವಾರ್ ಎಂಬ ಗ್ರಾಮ ಪಂಚಾಯತಿ ಸದಸ್ಯನೇ ಯುವತಿ ಮೇಲೆ ಹಲ್ಲೆ ಮಾಡಿದವನು. ಹಲ್ಲೆ ಮಾಡುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾರುತಿ ತನ್ನ ಅಕ್ಕನ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಮಾರುತಿ ಜತೆಗೆ ಮತ್ತೊಬ್ಬ ಸಂಬಂಧಿ ಸಹೋದರ ರಾಮಚಂದ್ರ ಕೂಡ ಸಾಥ್ ನೀಡಿದ್ದಾನೆ. ಆಸ್ತಿ ವಿಚಾರವಾಗಿ ಯುವತಿ ಪ್ರಶ್ನೆ ಮಾಡಿದ್ದಕ್ಕೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧದಿಂದ ನಿಂದಿಸಿದ ಹಲ್ಲೆ ಮಾಡಿದ್ದಾರೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಕೋಲಾರ: ಯುವಕರು ಬಿಯರ್ ಬಾಟೆಲ್‌ಗಳಲ್ಲಿ ಬಡಿದಾಟ
ಕೋಲಾರ : ಕ್ಷುಲ್ಲಕ ಕಾರಣಕ್ಕೆ ಯುವಕರು ಬಿಯರ್ ಬಾಟೆಲ್‌ಗಳಿಂದ ಬಡಿದಾಡಿಕೊಂಡಿದ್ದಾರೆ. ಕೋಲಾರದ ಗಾಂಧಿನಗರ ಮತ್ತು ಶ್ರೀನಿವಾಸಪುರ ತಾಲೂಕಿನ ಮೊಗಿಲಹಳ್ಳಿ ಗ್ರಾಮಕ್ಕೆ ಸೇರಿದ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ. ಶ್ರೀನಿವಾಸಪುರ ಪಟ್ಟಣದ ತಾಲೂಕು ಕಚೇರಿ ಎದುರು ಬಿಯರ್ ಬಾಟೆಲ್‌ನಿಂದ ಕಿತ್ತಾಡಿಕೊಂಡಿದ್ದಾರೆ.ಇವರ ಬಡಿದಾಟಕ್ಕೆ ಸ್ಥಳೀಯರು ಮೂಕ ಪ್ರೇಕ್ಷಕರಾಗಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭಂಗ ಪ್ರಕರಣ ದಾಖಲಿಸಿ, ಇಬ್ಬರ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮಂಜುನಾಥ್ ಹಾಗೂ ಹರೀಶ್ ಬಂಧಿತ ಆರೋಪಿಗಳಾಗಿದ್ದಾರೆ.