Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಹಾಸನದಲ್ಲಿ ವಿದ್ಯಾರ್ಥಿನಿ ಮರ್ಡರ್!
– ಪ್ರೀತಿಸಲಿಲ್ಲ ಎಂದು ಬೆಟ್ಟಕ್ಕೆ ಕರೆದೊಯ್ದು ಕತ್ತು ಸೀಳಿ ಕೊಲೆ
– ದಕ್ಷಿಣ ಕನ್ನಡ: ಪುತ್ತೂರು ಮಾಜಿ ಶಾಸಕರಿಗೆ ಹಾವು ಕಡಿತ
– ಮಂಡ್ಯ: ಪತ್ನಿಯನ್ನು ದಿಂಬಲ್ಲೆ ಕೊಂದ ಗಂಡ!

NAMMUR EXPRESS NEWS
ಹಾಸನ: ಆಲೂರು ತಾಲ್ಲೂಕಿನ ಕವಳಗೆರೆ ಗ್ರಾಮದ ಸುಚಿತ್ರಾ (20) ಕೊಲೆಯಾದ ಯುವತಿಯಾಗಿದ್ದು ಹಾಸನ ತಾಲ್ಲೂಕಿನ, ಕುಂತಿಗುಡ್ಡದಲ್ಲಿ ಘಟನೆ ನಡೆದಿದೆ. ತೇಜಸ್ (23) ಕೊಲೆ ಮಾಡಿರುವ ಆರೋಪಿ. ಮೊಸಳೆಹೊಸಳ್ಳಿ ಇಂಜಿನಿಯರ್ ಕಾಲೇಜಿನಲ್ಲಿ ಬಿಇ ಮ್ಯಾಕಾನಿಕಲ್ ಓದುತ್ತಿದ್ದ ಸುಚಿತ್ರಾಳನ್ನು ಲವ್ ಮಾಡುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಒಪ್ಪಿರಲಿಲ್ಲ ಎನ್ನಲಾಗಿದೆ. ಇದೀಗ ಸುಚಿತ್ರಾಳ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಗ್ರಾಮಾಂತರ ಪೊಲೀಸರು ಯುವತಿ ಕೊಂದಿದ್ದ ಇಂಜಿನಿಯರಿಂಗ್ ಪದವಿಧರ ತೇಜಸ್ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಪ್ರೇಮ ವೈಫಲ್ಯದಿಂದ ಗೆಳತಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಪ್ರೀತಿಸಲು ನಿರಾಕರಿಸಿದ್ದಕ್ಕೆ ಕುಂತಿ ಬೆಟ್ಟಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ. ಗುರುವಾರ ಮುಂಜಾನೆ ಯುವತಿಯನ್ನು ತನ್ನೊಟ್ಟಿಗೆ ಕರೆದೊಯ್ದಿದ್ದ ತೇಜಸ್, ಒಂಟಿಯಾಗಿ ಕರೆದೊಯ್ದು ಕುತ್ತಿಗೆ ಸೀಳಿ ಹತ್ಯೆಮಾಡಿದ್ದಾನೆ.

ಪುತ್ತೂರು ಮಾಜಿ ಶಾಸಕರಿಗೆ ಹಾವು ಕಡಿತ: ಅಪಾಯದಿಂದ ಪಾರು

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಾವು ಕಡಿತಕ್ಕೊಳಗಾದ ಘಟನೆ ನ.16ರಂದು ನಡೆದಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ರಾತ್ರಿಯ ಹೊತ್ತು ತನ್ನ ಮನೆಯ ಬಳಿ ವಾಕಿಂಗ್ ನಡೆಸುವಾಗ ಅವರಿಗೆ ಕಡಂಬಳ (ಕಟ್ಟಮಳಕ್ಕರಿ) ಕಡಿದಿದ್ದು, ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಹಾವಿನ ಕಡಿತದಿಂದ ತರಚಿದಂತ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮಲಗಿದ್ದ ಪತ್ನಿಯನ್ನು ದಿಂಬಲ್ಲೆ ಕೊಂದ!

ಪತ್ನಿ ಮಲಗಿದ್ದ ವೇಳೆ ದಿಂಬು ಹಾಗೂ ಬೆಡ್ ಶೀಟ್ ನಿಂದ ಉಸಿರುಗಟ್ಟಿಸಿ ಕೊಂದ ಪತಿಯೋರ್ವ ಬಳಿಕ ಪತ್ನಿ ಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದು ನಾಟಕವಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ವಿವಿ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಪ್ರೊಫೆಸರ್ ಆಗಿರುವ ಟಿ.ಎನ್. ಸೋಮಶೇಖರ್(41) ಹಣದ ದಾಹಕ್ಕೆ ಬಿದ್ದು ತನ್ನ ಪತ್ನಿ ಎಸ್.ಶೃತಿ(32) ಎಂಬವರನ್ನು ಅಮಾನುಷವಾಗಿ ಕೊಂದಿದ್ದಾನೆ. ಶೃತಿಯ ತಂದೆ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆಕೆಯ ತಂಗಿ ಅಪಘಾತದಲ್ಲಿ ಮೃತಪಟ್ಟಿದ್ದಳು. ಹೀಗಾಗಿ ಅವರ ಇಡೀ ಕುಟುಂಬದ ಆಸ್ತಿ 10 ಕೋಟಿ ರೂ. ಶೃತಿ ಹೆಸರಿಗೆ ಬಂದಿತ್ತು. ಇವರಿಗೆ ಮೈಸೂರನ ಪ್ರಮುಖ ನಗರಗಳಲ್ಲಿ ಕಮರ್ಷಿಯಲ್ ಕಟ್ಟಡಗಳು ಮನೆ ಹಾಗೂ ಸೈಟ್ ಗಳಿದ್ದವು. ಈ ಆಸ್ತಿಯನ್ನು ಮಾರಾಟ ಮಾಡಿ ಬೇರೆ ಸ್ಥಳಗಳಲ್ಲಿ ಆಸ್ತಿ ಮಾಡಬೇಕು ಎಂದು ಸೋಮಶೇಖರ್ ಪತ್ನಿಯನ್ನು ಪೀಡಿಸುತ್ತಿದ್ದ. ಆದ್ರೆ ಇದಕ್ಕೆ ಆಕೆ ಒಪ್ಪದ ಕಾರಣ, ಶನಿವಾರ ಆಕೆ ಮಲಗಿದ್ದ ವೇಳೆ ಮಾನವೀಯತೆ ಮರೆತು ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಪತ್ನಿಯನ್ನು ಹತ್ಯೆ ಮಾಡಿದ ಬಳಿಕ, ಆಕೆ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಸೋಮಶೇಖರ್ ಮೃತ ಶೃತಿಯ ಚಿಕ್ಕಪ್ಪನಿಗೆ ಕರೆ ಮಾಡಿದ್ದಾನೆ. ಆದರೆ, ಇದರಿಂದ ಅನುಮಾನಗೊಂಡ ಶೃತಿ ಚಿಕ್ಕಪ್ಪ ಕುಮಾರಸ್ವಾಮಿ ಅವರು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ವೇಳೆ ಶೃತಿಯದ್ದು ಸಹಜ ಸಾವಲ್ಲ, ಬಲವಂತವಾಗಿ ಉಸಿರುಗಟ್ಟಿಸಿದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.