Categories
ರಾಜ್ಯ

ಕರ್ನಾಟಕದ ಟಾಪ್ ನ್ಯೂಸ್

ಲೈಂಗಿಕ ಕಿರುಕುಳ: ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ!
– ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರದ ಬಾಳೆಹೊನ್ನೂರಲ್ಲಿ ಘಟನೆ
– ರಾಯಭಾಗ: ರಸ್ತೆಗೆ ಎಸೆದು 4 ತಿಂಗಳ ಮಗು ಕೊಲೆ!
– ಸಿನಿಮಾ ಅನೌನ್ಸ್ ಮಾಡಿದ್ದ ಅಭಿನವ ಹಾಲಶ್ರೀ!

NAMMUR EXPRESS NEWS
ಎನ್. ಆರ್. ಪುರ: ಬಾಳೆಹೊನ್ನೂರಿನ ಪೇಟೆಗೆರೆಯಲ್ಲಿರುವ ಸರ್ಕಾರಿ ವೈದ್ಯರ ವಸತಿ ಗೃಹದಲ್ಲಿ ಮಹಿಳೆಯೊಂದಿಗೆ ಏಕಾಂತದಲ್ಲಿ ಇರುವಾಗ ಮಹಿಳೆಯ ಪತಿ ಹಾಗೂ ಸಂಬಂಧಿಗಳಿಗೆ ಸಿಕ್ಕಿಬಿದ್ದ ವೈಧ್ಯಾಧಿಕಾರಿಗೆ ಧರ್ಮದೇಟು ನೀಡಿದ ಘಟನೆ ನಡೆದಿದೆ. ಈ ವೈದ್ಯನ ಮೇಲೆ ಈ ಹಿಂದಿನಿಂದಲೂ ಇಂತಹ ಆರೋಪಗಳು ಕೇಳಿ ಬಂದಿತು. ಈಗ ಸಿಬ್ಬಂದಿಯೊಬ್ಬರನ್ನು ಬೆದರಿಸಿ ವಸತಿಗೃಹಕ್ಕೆ ಕರೆಸಿಕೊಂಡಿದ್ದ ಎನ್ನಲಾಗಿದೆ.

ಏನಿದು ಕೇಸ್?:

ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ಎನ್. ಆರ್. ಪುರ ತಾಲೂಕು ವೈಧ್ಯಾಧಿಕಾರಿಗೆ ಮಹಿಳೆಯ ಸಂಬಂಧಿಗಳು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಡಿ ಗ್ರೂಪ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಅರೋಪಿಸಲಾಗಿದೆ. ಡಾ.ಎಲ್ಡೋಸ್ ಎಂಬುವರ ಮೇಲೆ ಬಾಳೆಹೊನ್ನೂರಲ್ಲಿ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ದಾಖಲಾಗಿದೆ

ರಸ್ತೆಗೆ ಎಸೆದು 4 ತಿಂಗಳ ಮಗು ಕೊಲೆ!

ಪೊಲೀಸ್ ಪೇದೆಯೊಬ್ಬ ರಸ್ತೆ ಮೇಲೆ 4 ತಿಂಗಳ ಮಗು ಎಸೆದು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗದ ಚಿಂಚಲಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಏರ್ ಪೋರ್ಟ್ ಅಲ್ಲಿ ಬಸಪ್ಪ ಎಂಬಾತ ತನ್ನ ಮಗುವನ್ನೇ ಎಸೆದು ಕೊಲೆ ಮಾಡಿದ್ದಾನೆ. ಕುಡಚಿ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಸಿನಿಮಾ ಅನೌನ್ಸ್ ಮಾಡಿದ್ದ ಅಭಿನವ ಹಾಲಶ್ರೀ!

ಅಭಿನವ ಹಾಲಶ್ರೀ ಪೂಜಾರಿ ಎಂಬ ಹೆಸರಿನ ಸಿನಿಮಾವನ್ನು ಅನೌನ್ಸ್​ ಮಾಡಿದ್ದರು, ಈ ಸಿನಿಮಾ ಉದ್ಯಮಿ ಗೋವಿಂದಬಾಬು ಪೂಜಾರಿ ಜೀವನಾಧಾರಿತವಾಗಿದೆ. ಮಂಜು ಕೋಟ್ಯಾನ್ ನಿರ್ದೇಶನದಲ್ಲಿ ಸ್ಕ್ರಿಫ್ಟ್​ ವರ್ಕ್​​ ನಡೀತಿತ್ತು, ಚೆಫ್​​ ಟಾಕ್​​ 15ನೇ ವಾರ್ಷಿಕೋತ್ಸವದಲ್ಲೇ ಸಿನಿಮಾ ಅನೌನ್ಸ್ ಆಗಿತ್ತು. ಅಭಿನವ ಹಾಲಶ್ರೀ ಈ ಕಾರ್ಯಕ್ರಮಕ್ಕೆ ಚೀಫ್​​ ಗೆಸ್ಟ್​ ಆಗಿ ಬಂದಿದ್ದರು. ಬಂಡೆಪಾಳ್ಯದ ಪೂಜಾರಿ ಒಡೆತನದ ಚೆಫ್ ಟಾಕ್ ಕಚೇರಿಯಲ್ಲಿ ಕಾರ್ಯಕ್ರಮ ನಡೆದಿತ್ತು. ಕಾರ್ಪೊರೇಟ್​ ಕಂಪನಿಗಳಿಗೆ ಫುಡ್ ಸಪ್ಲೈ & ಹಾಸ್ಪಿಟಾಲಿಟಿ ಒದಗಿಸುವ ಚೆಫ್ ಟಾಕ್ ಕಂಪನಿಯಾಗಿದೆ. ಹಾಲಶ್ರೀ ಪೂಜಾರಿ ಕುರಿತ ಸಿನಿಮಾ ಮಾಡ್ತಿರೋ ಬಗ್ಗೆ ಅನೌನ್ಸ್ ಮಾಡಿದ್ದರು. ದೈವಸುತಂ ಅಥವಾ ಮನಸಾವಾಚ ಕರ್ಮಣ ಅನ್ನೊ ಹೆಸರಿಡಲು ಚಿಂತನೆ ಇತ್ತು, ಫಿಲಂ ಚೇಂಬರ್​​​ 100 ಜಿಬಿ ಪ್ರೊಡಕ್ಷನ್​​ ಅಂತಾ ರಿಜಿಸ್ಟರ್​ ಮಾಡಲಾಗಿತ್ತು. ಆರ್​​.ಆರ್​​.ನಗರದಲ್ಲಿ ಪ್ರೊಡಕ್ಷನ್​​ ಹೌಸ್​ ಕೂಡಾ ನಿರ್ಮಾಣ ಆಗಿತ್ತು, ಹಾಲಶ್ರೀ ಕೈನಲ್ಲೇ ಮೊದಲ ಸೀನ್​​ ಕ್ಲಾಪ್​ ಮಾಡಿಸೋ ಪ್ಲಾನ್​ ಕೂಡಾ ಆಗಿತ್ತು. ಹಾಲಶ್ರೀ ಟೀಂ ಅಷ್ಟೊತ್ತಿಗೆ ತನ್ನದೇ ಸ್ಕ್ರಿಪ್ಟ್​ ಮಾಡಿ ಉದ್ಯಮಿಯನ್ನೇ ಯಾಮಾರಿಸಿದ್ದರು. ಇದೀಗ ಹಾಲಶ್ರೀಗೆ 10 ದಿನ ನ್ಯಾಯಾಂಗ ಬಂಧನ ಆಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.