ಅಂತರಾಷ್ಟ್ರೀಯ ಕರಾಟೆಯಲ್ಲಿ ವಾಗ್ದೇವಿ ವಿದ್ಯಾರ್ಥಿನಿ ಸಾಧನೆ!
– ಚಿನ್ನದ ಪದಕ ಪಡೆದ ವಾಗ್ದೇವಿಯ ಸಾನ್ವಿ ಜೋಯ್ಸ್
– ಓದು, ಕ್ರೀಡೆ, ಸಾಂಸ್ಕೃತಿಕ ಎಲ್ಲದರಲ್ಲೂ ಸಾಧನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಅಂತರಾಷ್ಟ್ರೀಯ ಕರಾಟೆಯಲ್ಲಿ ವಾಗ್ದೇವಿ ವಿದ್ಯಾರ್ಥಿನಿ ಸಾನ್ವಿ ಸಾಧನೆ ಮಾಡಿದ್ದಾಳೆ. ಚಿನ್ನದ ಪದಕ ಪಡೆದ ವಾಗ್ದೇವಿಯ ಸಾನ್ವಿ ಜೋಯ್ಸ್ ಅವರು ಓದು, ಕ್ರೀಡೆ, ಸಾಂಸ್ಕೃತಿಕ ಎಲ್ಲದರಲ್ಲೂ ಸಾಧನೆ ಮಾಡಿದ್ದಾರೆ.
14.02.2026 ಮತ್ತು 15.02.2026 ರಂದು ಥೈಲ್ಯಾಂಡಿನ ರತನ್ನ ಬುಂದಿತ್ ಯುನಿವರ್ಸಿಟಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಯಲ್ಲಿ, ಕರ್ನಾಟಕ ಕರಾಟೆ ಅಸೋಸಿಯೇಷನ್ ವತಿಯಿಂದ ಭಾರತವನ್ನು ಪ್ರತಿನಿಧಿಸಿ, ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 8 ನೆಯ ತರಗತಿಯ ಕು|| ಸಾನ್ವಿ ಜೋಯ್ಸ್ ಕುಮಿಟೆ ವಿಭಾಗದಲ್ಲಿ ಪ್ರಥಮಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ಹಾಗೂ ಕಟ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ತಾಲ್ಲೂಕಿಗೆ, ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾಳೆ.
ಈಕೆ ತೀರ್ಥಹಳ್ಳಿಯ MJ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ ನಲ್ಲಿ ಸತತ 10 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾಳೆ. ಇವಳು ಸೊಪ್ಪುಗುಡ್ಡೆಯ ಶ್ರೀಮತಿ ಅರ್ಚನಾ ಮಹಾಬಲ ಜೋಯ್ಸ್ ಹಾಗೂ ಶ್ರೀಮಹಾಬಲ ಜೋಯ್ಸ್ ದಂಪತಿಗಳ ಪುತ್ರಿ. ಇವಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕವೃಂದ ಮತ್ತು ಪೋಷಕರು ಅಭಿನಂದಿಸಿದ್ದಾರೆ.
