Categories
ತೀರ್ಥಹಳ್ಳಿ

ನಮಾಜಿಗೆ ಹೋದವರ ಲಾರಿಯಲ್ಲಿದ್ದ 30 ಲಕ್ಷ ಕಳ್ಳತನ!

ನಮಾಜಿಗೆ ಹೋದವರ ಲಾರಿಯಲ್ಲಿದ್ದ 30 ಲಕ್ಷ ಕಳ್ಳತನ!
– ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆಯಲ್ಲಿ ಘಟನೆ
– ಶಿವಮೊಗ್ಗ ಕಡೆಯಿಂದ ಉಡುಪಿ ಹೋಗುತ್ತಿದ್ದ ಲಾರಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆಯಲ್ಲಿ ಲಾರಿಯಲ್ಲಿ ಇದ್ದ ಸುಮಾರು 30 ಲಕ್ಷ ಹಣವನ್ನು ಕಳ್ಳರು ದೋಚಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಶಿವಮೊಗ್ಗ ಕಡೆಯಿಂದ ಮಂಗಳೂರು ಕಡೆಗೆ ಹೊರಟಿದ್ದ ಲಾರಿ ಯಲ್ಲಿದ್ದವರು ಶುಕ್ರವಾರ ನಮಾಜು ಸಮಯ ಆದ್ದರಿಂದ ರಂಜದಕಟ್ಟೆ ಮಸೀದಿ ಬಳಿ ಲಾರಿ ನಿಲ್ಲಿಸಿ ನಮಾಜು ಮಾಡಲು ಹೋಗಿದ್ದಾರೆ. ಈ ವೇಳೆ ಕಳ್ಳರು ಕೈಚಳಕ ತೋರಿಸಿದ್ದು ಲಾರಿಯನ್ನು ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಅದರಲ್ಲಿದ್ದ ಹಣ ದೋಚಿದ್ದಾರೆ. ನಮಾಜು ಮಾಡಿ ಬಂದು ನೋಡಿದಾಗ ಲಾರಿ ನಾಪತ್ತೆಯಾಗಿದ್ದರಿಂದ ಲಾರಿ ಮಾಲೀಕ ಗಾಬರಿ ಯಾಗಿ ನೋಡಿದಾಗ ಲಾರಿ ಸ್ವಲ್ಪ ಮುಂದೆ ಹೋಟೆಲ್ ಬಳಿ ನಿಲ್ಲಿಸಲಾಗಿದೆ. ಲಾರಿ ಬಳಿ ನೋಡಿದಾಗ ಹಣ ನಾಪತ್ತೆಯಾಗಿತ್ತು. ಕಳೆದುಕೊಂಡವರು ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.