ದೇವಂಗಿಯಲ್ಲಿ 97ನೇ ವರ್ಷದ ಗಣಪತಿ!
– ತೀರ್ಥಹಳ್ಳಿ ತಾಲೂಕಿನಲ್ಲೇ ಅತೀ ಹಳೆಯ ಗಣಪತಿ ಉತ್ಸವ
– 5ನೇ ದಿನ ತಾಲೂಕಿನಲ್ಲೇ ವಿಜೃಂಭಣೆಯ ಉತ್ಸವ
NAMMUR EXPRESS NEWS
ತೀರ್ಥಹಳ್ಳಿ: ದೇವಂಗಿ ಶ್ರೀ ಗಜಾನನ ನಾಟ್ಯ ಸಂಘದ 97ನೇ ವರ್ಷದ ಗಣೇಶೋತ್ಸವ ಅತ್ಯಂತ ಸಂಭ್ರಮದಿಂದ ನಡೆಯುತ್ತಿದೆ. ತೀರ್ಥಹಳ್ಳಿ ತಾಲೂಕಿನಲ್ಲೇ ಅತ್ಯಂತ ಹಳೆಯ ಗಣಪತಿ ಇದಾಗಿದ್ದು, ಇಲ್ಲಿನ ಗಣೇಶ ವಿಸರ್ಜನೆ
ತೀರ್ಥಹಳ್ಳಿ ತಾಲೂಕಿನಲ್ಲೇ ಪ್ರಸಿದ್ದಿ ಪಡೆದಿದೆ. 18-09-2023ರಿಂದ 22-09-2023 ರವರೆಗೆ ಗಣಪತಿ ಉತ್ಸವ ನಡೆಯಲಿದೆ.
ಗುರುವಾರ ರಾತ್ರಿ ಯಕ್ಷಪ್ರಿಯ ಗೆಳೆಯರ ಬಳಗ, ದೇವಂಗಿ ಮತ್ತು ಮಂದಾರ್ತಿ ಮೇಳದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಹಾಸ್ಯಮಯ ಯಕ್ಷಗಾನ ಪ್ರದರ್ಶನ ಶೂರ್ಪನಖ ವಿವಾಹ-ರಾಜರುದ್ರಕೋಡ ನಡೆಯಲಿದೆ. ಶುಕ್ರವಾರ ಸಂಜೆ 4-00 ಗಂಟೆಗೆ ವಿವಿಧ ವೇಷ-ಭೂಷಣ ಹಾಗೂ ಆಕರ್ಷಕ ಸಿಡಿಮದ್ದಿನಿಂದ ಕೂಡಿದ ರಾಜಬೀದಿ ಉತ್ಸವದೊಂದಿಗೆ ಶ್ರೀ ವಿದ್ಯಾಗಣಪತಿ ಸ್ವಾಮಿಯ ವಿಸರ್ಜನೆ ನಡೆಯಲಿದೆ.
ದೇವಂಗಿ ಮಾನಪ್ಪ ಅವರ ನೇತೃತ್ವದಲ್ಲಿ 1926ರಲ್ಲಿ ದೇವಂಗಿಯಲ್ಲಿ ಗಣೇಶ ಹಬ್ಬ ಆಚರಣೆ ಮಾಡಲಾಗುತ್ತಿದ್ದು ಇದು 97ನೇ ವರ್ಷದ ಗಣಪತಿಯಾಗಿದೆ. ತಾಲೂಕಿನಲ್ಲಿ ಈ ಮೂಲಕ ದೇವಂಗಿ ಹಿರಿಮೆ ಪಡೆದಿದೆ. ಗಣಪತಿ ವಿಸರ್ಜನೆ ದಿನದ ಪಟಾಕಿ, ಮೆರವಣಿಗೆ ಭಾರೀ ಆಕರ್ಷಣೆ ಇರಲಿದೆ. ಸರ್ವರನ್ನು ಗಣೇಶೋತ್ಸವ ಸಮಿತಿ ಆಹ್ವಾನಿಸಿದೆ.
