Categories
ತೀರ್ಥಹಳ್ಳಿ

ತೀರ್ಥಹಳ್ಳಿ ವೈಭವದ ದಸರಾಕ್ಕೆ ವರ್ಣರಂಜಿತ ತೆರೆ..!

ತೀರ್ಥಹಳ್ಳಿ ವೈಭವದ ದಸರಾಕ್ಕೆ ವರ್ಣರಂಜಿತ ತೆರೆ..!
– 20 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ
– ದಸರಾ ಮೆರವಣಿಗೆಯಲ್ಲಿ ಇಡೀ ಪಟ್ಟಣದಲ್ಲಿ ಜನ
– ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್, ಹುಲಿವೇಷ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ವೈಭವದ ದಸರಾ ಅದ್ದೂರಿಯಾಗಿ ತೆರೆ ಕಂಡಿದ್ದು, ದಸರಾದಲ್ಲಿ ಸುಮಾರು 20 ಸಾವಿರ ಮಂದಿ ಭಾಗಿಯಾಗಿದ್ದರು. ವೈಭವದ ಮೆರವಣಿಗೆಯು ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಸ್ಥಾನದಿಂದ ಮಧ್ಯಾಹ್ನ ಮೆರವಣಿಗೆಗೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ತಹಸೀಲ್ದಾರ್ ಲಿಂಗರಾಜ್, ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಸೇರಿದಂತೆ ಪಟ್ಟಣ ಪಂಚಾಯತ್ ಸದಸ್ಯರು, ದಸರಾ ಸಮಿತಿ ಸದಸ್ಯರು, ಪ್ರಮುಖರು ಹಾಜರಿದ್ದರು.

ಗಮನ ಸೆಳೆದ ಟ್ಯಾಬ್ಲೋಗಳು… ಜನರ ಶಿಳ್ಳೆ..!

ಶ್ರೀ ರಾಮೇಶ್ವರ ದೇವರ ಉತ್ಸವ ಮೂರ್ತಿಯೊಂದಿಗೆ 17 ಕ್ಕೂ ಹೆಚ್ಚು ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಇನ್ನು ಜಾನಪದ ಕಲೆಗಳಾದ ಡೊಳ್ಳು ಕುಣಿತ, ಪೂಜಾ ಕುಣಿತ, ನಗಾರಿ, ಹುಲಿವೇಶ, ತಟ್ಟಿರಾಯ ಸೇರಿದಂತೆ ಹತ್ತಾರು ಜಾನಪದ ಪ್ರಕಾರಗಳು ಗಮನ ಸೆಳೆದವು. ಸುಮಾರು 3 ಗಂಟೆಗಳ ಕಾಲ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ಸಾಗಿತು.

ಕುಶಾವತಿ ಪಾರ್ಕಲ್ಲಿ ಧಾರ್ಮಿಕ,. ಸಾಂಸ್ಕೃತಿಕ ಸಮಾಗಮ

ಸಂಜೆ ತೀರ್ಥಹಳ್ಳಿಯ ಕುಶಾವತಿ ಪಾರ್ಕ್ ನಲ್ಲಿ ಬನ್ನಿ ಮೂಡಿವ ಕಾರ್ಯಕ್ರಮ, ರಾಮೇಶ್ವರ ದೇವರ ಪೂಜೆ ನಡೆದಿದ್ದು, ಬಳಿಕ ನಡೆದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಮೂಲದ ಇಸ್ರೋ ವಿಜ್ಞಾನಿಗಳಾದ ಸುಬ್ರಹ್ಮಣ್ಯ ಉಡುಪ ಹಾಗೂ ಶಿವಾನಿ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಡಾನ್ಸ್, ಹಾಡು ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ಹುಲಿವೇಷ ಸ್ಪರ್ಧೆಯ ರಂಗು.. ಭಾರೀ ಜೋಷ್!

ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಅರ್. ಮದನ್ ನೇತೃತ್ವದಲ್ಲಿ ಹುಲಿ ವೇಷ ಸ್ಪರ್ಧೆ ನಡೆಯಿತು. 20ಕ್ಕೂ ಹೆಚ್ಚು ಕಲಾವಿದರು ಸ್ಪರ್ಧೆಯಲ್ಲಿ ಭಾಗಿಯಾದರು.

ತೀರ್ಥಹಳ್ಳಿ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಜಾಮ್!

ತೀರ್ಥಹಳ್ಳಿ ಪಟ್ಟಣದಲ್ಲಿ ದಸರಾ ಮೆರವಣಿಗೆ ಹಿನ್ನೆಲೆ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಒಂದು ಕಡೆ ಅತೀ ಹೆಚ್ಚು ವಾಹನ ಪಟ್ಟಣಕ್ಕೆ ಬಂದಿದ್ದವು. ಇನ್ನೊಂದು ಕಡೆ ಹಬ್ಬಕ್ಕೆ ಬಂದವರು ಬೆಂಗಳೂರು ಸೇರಿ ವಿವಿಧ ಭಾಗಗಳಿಗೆ ಹೋಗುವ ತಯಾರಿ ಅಲ್ಲಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.