Categories
ತೀರ್ಥಹಳ್ಳಿ

ಬೀದಿ ನಾಯಿಗಳ ಜೀವ ಉಳಿಸಿದ ಸಮರ್ಪಣಾ ತಂಡ!

ಬೀದಿ ನಾಯಿಗಳ ಜೀವ ಉಳಿಸಿದ ಸಮರ್ಪಣಾ ತಂಡ!
– ರಾಜ್ಯಕ್ಕೆ ಮಾದರಿ ಆಯ್ತು ತೀರ್ಥಹಳ್ಳಿಯ ರಾಮಕೃಷ್ಣಪುರದ ಈ ತಂಡ
– ಬೀದಿ ನಾಯಿಗಳ ಉಚಿತ ಸಂತಾನ ಹರಣ ಚಿಕಿತ್ಸೆ
– ಗ್ರಾಮದಲ್ಲಿ ಪ್ಲಾಸ್ಟಿಕ್ ನಿಷೇಧ, ಹತ್ತಾರು ಸಾಮಾಜಿಕ ಕೆಲಸ

NAMMUR EXPRESS NEWS
ತೀರ್ಥಹಳ್ಳಿ: ಬೀದಿ ನಾಯಿಗಳ ಸುರಕ್ಷತೆ ಮತ್ತು ಸಂತಾನಹರಣ ಚಿಕಿತ್ಸೆ ಮೂಲಕ ತೀರ್ಥಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮಕೃಷ್ಣಪುರದ ಪಶು ಆಸ್ಪತ್ರೆಯಲ್ಲಿ ಶುಕ್ರವಾರ ಸಮರ್ಪಣಾ ತಂಡದ ಸದಸ್ಯರು ಮಾದರಿಯಾದರು.
ಶುಕ್ರವಾರ ದೇಸಿಯ ನಾಯಿಗಳು ಹಾಗೂ ಬೀದಿ ನಾಯಿಗಳ ಉಚಿತ ಸಂತಾನ ಹರಣ ಚಿಕಿತ್ಸಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು. ತಂಡದ ಕ್ರಿಯಾಶೀಲ ಸದಸ್ಯರು ಹಾಗೂ ಪಶು ಆಸ್ಪತ್ರೆಯ ವೈದ್ಯರಾದಂತಹ ಡಾ.ಅರವಿಂದ ಅವರು ಅತ್ಯಂತ ಕಳಕಳಿಯಿಂದ ಊರಿನ ಸುಮಾರು ಹತ್ತಕ್ಕೂ ಹೆಚ್ಚಿನ ನಾಯಿಗಳನ್ನು ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಿದರು.

ಈ ಶಸ್ತ್ರಚಿಕಿತ್ಸೆಗೆ ತಗಲುವ ಸುಮಾರು ಎರಡು ಸಾವಿರ ರೂಪಾಯಿಗಳನ್ನು ಉಳಿಸಿದ್ದಲ್ಲದೇ ನಾಯಿ ಮರಿಗಳ ಸಂತತಿಯನ್ನು ನಿಯಂತ್ರಿಸುವಲ್ಲಿ ಹಾಗೂ ಬೀದಿ ಬದಿಗಳಲ್ಲಿ ಮರಿಗಳನ್ನು ಬಿಟ್ಟು ಹೋಗುವುದರಿಂದ ವಾಹನಗಳ ಚಕ್ರಕ್ಕೆ ಸಿಕ್ಕಿ ಸಾಯುವ ಎಷ್ಟೋ ಜೀವಗಳನ್ನು ಉಳಿಸುವ ಪ್ರಯತ್ನ ಈಡೇರಿದೆ. ಈ ಕಾರ್ಯದಲ್ಲಿ ಪಶು ಇಲಾಖೆಯಿಂದ ಕೂಡಾ ಮೇಲಾಧಿಕಾರಿಗಳು ಸ್ಪಂಧಿಸಿ ಅಗತ್ಯವಾಗಿ ಬೇಕಾಗಿದ್ದ ಶಸ್ತ್ರಚಿಕಿತ್ಸಾ ಸಾಮಗ್ರಿಗಳನ್ನು ನೀಡಿ ಈ ಪುಣ್ಯ ಕಾರ್ಯದಲ್ಲಿ ಸಹಕರಿಸಿರುತ್ತಾರೆ.

ಎಲ್ಲಾ ಊರಲ್ಲೂಇಂತಹ ಕಾರ್ಯಕ್ರಮ ನಡೆಯಬೇಕು!

ಬೀದಿ ನಾಯಿಗಳ ರಕ್ಷಣೆಯಲ್ಲಿ ಸಮರ್ಪಣಾ ತಂಡದ ಈ ಒಂದು ಪ್ರಯತ್ನವಾಗಿ ಹಮ್ಮಿಕೊಂಡಂತಹ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಸಮರ್ಪಣಾ ತಂಡ ಈಗಾಗಲೇ ಊರಿನಲ್ಲಿ ಇಂತಹ ಅನೇಕ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದು ಊರಿನ ಹಸುಗಳಿಗೆ ರೇಡಿಯಂ ಬೆಲ್ಟ್ ಹಾಕಿದ್ದಲ್ಲದೇ ಮನೆಮನೆಗೆ ತೆರಳಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುವ ಬಗ್ಗೆ ಗಮನ ಸೆಳೆದು ಬಟ್ಟೆ ಚೀಲಗಳ ಬಳಕೆ ಮಾಡಲು ಉಚಿತವಾಗಿ ಹಂಚಿರುತ್ತಾರೆ. ಇಡೀ ಊರಿನ ಸ್ವಚ್ಚತೆಯೇ ಗುರಿಯಾಗಿರಿಸಿಕೊಂಡು ತಿಂಗಳಿಗೊಮ್ಮೆ ಸ್ವಚ್ಚತೆಗೆ ತೆರಳುತ್ತಾರೆ. ಅಲ್ಲದೇ ಪರಿಸರ ಸಂರಕ್ಷಣೆಗಾಗಿ ಗ್ರಾಮದ ರಸ್ತೆಯ ಅಕ್ಕ ಪಕ್ಕದಲ್ಲಿ ಗಿಡ ಮರಗಳನ್ನು ಬೆಳೆಸಿ ಬೇಲಿ ನಿರ್ಮಿಸಿದ್ದಾರೆ.

ಅತ್ಯಂತ ಹಿಂದುಳಿದ ಬಡ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಮನೆಗೆ ತೆರಳಿ ಪ್ರತಿಭಾ ಪುರಸ್ಕಾರ ಮಾಡಿರುತ್ತಾರೆ.. ಹೀಗೆ ಅನೇಕ ಕನಸನ್ನು ಹೊತ್ತ ಈ ತಂಡಕ್ಕೆ ತಮ್ಮ ಶುಭ ಹಾರೈಕೆ ಇರಲಿ. ಈ ತಂಡದಲ್ಲಿರುವ ಏಳು ಜನ ಸದಸ್ಯರು ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ತೆಗೆದಿರಿಸಿದ್ದು ಸುಮಂತ್,ಅರುಣ್ ಆರ್. ಎಸ್, ನಾಗರಾಜ್ ಆರ್.ಎ. ಡಾ.ಅರವಿಂದ್, ಯೋಗೇಶ್, ನಾಗರಾಜ್.ಹೆಚ್.ಎಂ. ನವೀನ್.ಆರ್ ಅವರು ಈ ತಂಡದ ಸಕ್ರೀಯ ಸದಸ್ಯರಾಗಿದ್ದಾರೆ.
ಇಂತಹ ಸಮಾಜ ಮುಖಿ ಯುವ ಮನಸುಗಳು ಪ್ರತೀ ಊರುಗಳಲ್ಲಿಯೂ ರಚನೆಯಾದರೆ ಊರಿನ ಅಭಿವೃದ್ಧಿ ಖಂಡಿತವಾಗಿ ಆಗುತ್ತದೆ. ನಮ್ಮೂರ್ ಎಕ್ಸ್ ಪ್ರೆಸ್ ಈ ತಂಡದ ಸೇವೆಗೆ ನಮನ ಸಲ್ಲಿಸುತ್ತದೆ.

ನಮ್ಮೂರ್ ಸಾಧಕರು

ಯೋಗದಲ್ಲಿ ಅಖಿಲ ಸೇತು ಮಾಧವರಾವ್ ಸಾಧನೆ
– ತೀರ್ಥಹಳ್ಳಿಯ ಅಖಿಲಾಗೆ ಯೋಗದಲ್ಲಿ ಬೆಸ್ಟ್ ಟ್ರೇನಿಂಗ್ ಅವಾರ್ಡ್

ತೀರ್ಥಹಳ್ಳಿಯ ರಥಬೀದಿ ನಿವಾಸಿಯಾದ *ಅಖಿಲ ಸೇತು ಮಾಧವ ರಾವ್ ಅವರು ಯೋಗದಲ್ಲಿ ಸಾಧನೆ ಮಾಡಿದ್ದಾರೆ.
ಇವರು ‘ಬೋಧಿ ಯೋಗ ಶಾಲೆ’ಯಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಲ್ಲದೇ ಅನೇಕರಿಗೆ ಯೋಗ ತರಬೇತಿ ನೀಡುವುದರ ಮೂಲಕ ಬೆಸ್ಟ್ ಟ್ರೇನಿಂಗ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ತೀರ್ಥಹಳ್ಳಿಯ ಭಾರತೀಯ ಯೋಗ ಶಿಕ್ಷಣ ಸಮಿತಿಯಲ್ಲಿ ಪ್ರತಿ ನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ಅಖಿಲ ಅವರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಸಮಿತಿಯ ಸದಸ್ಯರೆಲ್ಲರೂ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ : ಶಿವಮೊಗ್ಗ ಅಡಿಕೆ ಮಾರುಕಟ್ಟೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.