Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಬಸವಾನಿಯಲ್ಲಿ ಬಾಲಕಿ ಆತ್ಮಹತ್ಯೆ!

ತೀರ್ಥಹಳ್ಳಿಯ ಬಸವಾನಿಯಲ್ಲಿ ಬಾಲಕಿ ಆತ್ಮಹತ್ಯೆ!
– ಮನೆಯಲ್ಲಿ ನೇಣಿಗೆ ಶರಣಾದ ಬಾಲಕಿ
– ಆಸ್ಪತ್ರೆಗೆ ತರುವ ಮುನ್ನ ಸಾವು: ಕಾರಣ ನಿಗೂಢ

NAMMUR EXPRESS NEWS
ತೀರ್ಥಹಳ್ಳಿ: 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀರ್ಥಹಳ್ಳಿ ತಾಲೂಕು ಬಸವಾನಿಯಲ್ಲಿ ನಡೆದಿದೆ.
ರಾಘವೇಂದ್ರ ಪುತ್ರಿ ಇಂಚನ (13 ವರ್ಷ ) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಇಂದು ಶಾಲೆಯಲ್ಲಿ ತಂದೆ ತಾಯಿಯ ಜತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹೋದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈಕೆಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬಸವಾನಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಂಚನ ತಂದೆ ತಾಯಿ ತೀರ್ಥಹಳ್ಳಿಗೆ ಹೋದ ಬಳಿಕ ವೇಲ್ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪೋಷಕರಿಗೆ ಎರಡು ಹೆಣ್ಣು ಮಕ್ಕಳು. ಒಬ್ಬಳು ಬಾಯಿ ಬರಲ್ಲ. ಬಸವಾನಿ ಪ್ರಾಥಮಿಕ ಶಾಲೆಯಲ್ಲಿ ಈಕೆ ಓದುತ್ತಿದ್ದು ಬುದ್ದಿ ವಂತೆ ಆಗಿದ್ದಳು. ವೇಲ್ ಅಲ್ಲಿ ನೇಣು ಹಾಕಿಕೊಂಡು ಗಂಭೀರವಾಗಿದ್ದ ಆಕೆಯನ್ನು ಪೋಷಕರು ಆಸ್ಪತ್ರೆ ತರುವಾಗ ಮೃತಪಟ್ಟಿದ್ದಾಳೆ.
ಮಕ್ಕಳ ಮನಸ್ಸು ಇದೀಗ ದುರ್ಬಲಗೊಳ್ಳುತ್ತಿದ್ದು, ಇದೊಂದು ನಿದರ್ಶನವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.