ಅಡಿಕೆ ಗಿಡಗಳನ್ನೇ ಮುರಿಯುತ್ತಿರುವ ಕಾಡು ಕೋಣಗಳ ಹಿಂಡು!
– ತೀರ್ಥಹಳ್ಳಿ : ಹೆಚ್ಚಾಯ್ತು ಕಾಡು ಕೋಣಗಳ ಕಾಟ!
– ಹೆಗ್ಗೋಡು, ಬೊಬ್ಬಿ, ಕುಂದಾದ್ರಿ, ದೇವಂಗಿ ಬಳಿ ಪತ್ತೆ
NAMMUR EXPRESS NEWS
ತೀರ್ಥಹಳ್ಳಿ: ಕಾಡಿನಲ್ಲಿರಬೇಕಾದ ಕಾಡು ಕೋಣಗಳ ಹಿಂಡು ಇದೀಗ ಊರಿಗೆ ಬಂದಿವೆ. ಅಲ್ಲದೆ ಬೆಳೆದು ನಿಂತಿರುವ ಅಡಿಕೆ ಗಿಡಗಳನ್ನು ಮುರಿದು ಹಾಕುತ್ತಿವೆ. ಹೆಗ್ಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಗೊಳ್ಳಿ ನಾಗಪ್ಪಣ್ಣ ಇವರ ತೋಟವನ್ನು ಕಾಡು ಕೋಣಗಳು ಸುಮಾರು ಮರಗಳನ್ನು ಬುಡಸಮೇತ ಮುರಿದು ಹಾಕಿವೆ.ಸ್ಥಳಕ್ಕೆ ಇಂ ಬಾಳೆಹಳ್ಳಿ ಪ್ರಭಾಕರ್, ಕೋಡ್ಲು ಭಾಸ್ಕರ್, ಹಾಗೂ ಹೆಗ್ಗೋಡು ಭಾರತೀಶ್ ಭೇಟಿ ಕೊಟ್ಟು, ಸೂಕ್ತ ಪರಿಹಾರ ಕೊಡಲು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಇತ್ತೀಚಿಗೆ ದೇವಂಗಿ ಬಳಿ ಪತ್ತೆ!
ಇತ್ತೀಚಿಗೆ ದೇವಂಗಿ ಬಳಿ ಕಾಡು ಕೋಣಗಳು ಪತ್ತೆಯಾಗಿದ್ದವು. ಅಲ್ಲದೆ ಬೊಬ್ಬಿ ಭಾಗದಲ್ಲಿ ಕೂಡ ಅಡಿಕೆ ಗಿಡ ಮುರಿದು ಹಾಕಿವೆ. ಅರಣ್ಯ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು, ರೈತರು ಅಗ್ರಹಿಸಿದ್ದಾರೆ.