Categories
ತೀರ್ಥಹಳ್ಳಿ

ಹಬ್ಬದ ದಿನವೇ ತೀರ್ಥಹಳ್ಳಿಯಲ್ಲಿ ಭಾರೀ ಅಪಘಾತ!

ಹಬ್ಬದ ದಿನವೇ ತೀರ್ಥಹಳ್ಳಿಯಲ್ಲಿ ಭಾರೀ ಅಪಘಾತ!

– ಆಗುಂಬೆ ಘಾಟ್ ತಿರುವಿನಲ್ಲಿ ಕಾರ್ ಪಲ್ಟಿ: ಬಚಾವ್!
– ತೀರ್ಥಹಳ್ಳಿ: ಟಯರ್ ಬ್ಲಾಸ್ಟ್, ನಿಯಂತ್ರಣ ತಪ್ಪಿ ಕಾರ್ ಅಪಘಾತ!

NAMMUR EXPRESS NEWS
ಆಗುಂಬೆ: ರೆನಾಲ್ಟ್ ಟ್ರೈಬರ್ ಕಾರೊಂದು ಆಗುಂಬೆ ಘಾಟಿನ ಏಳನೇ ತಿರುವಿನಲ್ಲಿ ಇದ್ದಂತೆ ಪಲ್ಟಿಯಾಗಿದ್ದು, ದಂಪತಿ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ಬಚಾವಾದ ಅಪರೂಪದ ಘಟನೆ.
ದಂಪತಿ ಉಡುಪಿಯಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡುತ್ತಿದ್ದಾಗ ಎದುರುಗಡೆ ಟಿಪ್ಪರ್ ಬಂದಿತ್ತು. ಸಂಭವಿಸಬಹುದಾಗಿದ್ದ ದುರಂತ ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಈ ಸಂದರ್ಭ ಕಾರಿನ ಮೇಲ್ಛಾವಣಿಗೆ ಹಾನಿ ಸಂಭವಿಸಿದೆ ದಂಪತಿಗೆ ಮಾತ್ರ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

– ತೀರ್ಥಹಳ್ಳಿ: ಟಯರ್ ಬ್ಲಾಸ್ಟ್, ನಿಯಂತ್ರಣ ತಪ್ಪಿ ಕಾರ್ ಅಪಘಾತ!

ತೀರ್ಥಹಳ್ಳಿ: ಟಯರ್ ಬ್ಲಾಸ್ಟ್ ಆಗಿ ಚಾಲಕರ
ನಿಯಂತ್ರಣ ತಪ್ಪಿ ಕಾರೊಂದು ಅಪಘಾತವಾಗಿರುವ ಘಟನೆ ಬೊಬ್ಬಿ ಸಮೀಪದಲ್ಲಿ ನಡೆದಿದೆ.
ತಾಲೂಕಿನ ನಗರ ರಸ್ತೆಯ ಬೊಬ್ಬಿ ಸಮೀಪ ಕಿಯಾ ಕಾರೊಂದು ಟಯ‌ರ್ ಬಸ್ಟ್ ಆಗಿ ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿಯಾಗಿದೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಕಾರಿನಲ್ಲಿ ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರಿಗೆ ಯಾವುದೇ ರೀತಿ ಗಾಯಗಳಾಗಿಲ್ಲ. ಕಾರಿನ ಮುಂಭಾಗ ಮಾತ್ರ ಜಖಂಗೊಂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.