Categories
ತೀರ್ಥಹಳ್ಳಿ

ಊರಿಗೊಂದು ರೋಡು…ದಾರಿಗೊಂದು ಬೋರ್ಡು!

ಊರಿಗೊಂದು ರೋಡು…ದಾರಿಗೊಂದು ಬೋರ್ಡು!

– ರಾಮಕೃಷ್ಣಪುರದ ಸಮರ್ಪಣಾ ತಂಡದ ಮಿತ್ರರ ಮತ್ತೊಂದು ಹೆಜ್ಜೆ
– ಪ್ರತಿ ಊರಿಗೂ ದಾನಿಗಳ ಸಹಕಾರದಿಂದ ಬೋರ್ಡ್
– 14 ಊರು, ಪೇಟೆಯ ಸರ್ಕಲ್ ಮಾರ್ಗಸೂಚಿ ಬೋರ್ಡ್ ಉದ್ಘಾಟನೆ

NAMMUR EXPRESS NEWS
ತೀರ್ಥಹಳ್ಳಿ: ಊರಿಗೊಂದು ರೋಡು…ದಾರಿಗೊಂದು ಬೋರ್ಡು!. ಹೌದು. ಸದಾ ವಿನೂತನ ಕಾರ್ಯಕ್ರಮ, ಸಮಾಜ ಸೇವೆ ಮೂಲಕ ಮಾದರಿಯಾಗಿರುವ ರಾಮಕೃಷ್ಣಪುರದ ಸಮರ್ಪಣಾ ತಂಡದ ಮಿತ್ರರು ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ರಾಮಕೃಷ್ಣ ಪುರ ಗ್ರಾಮ ವ್ಯಾಪ್ತಿಯ ಪ್ರತಿ ಊರಿಗೂ ದಾನಿಗಳ ಸಹಕಾರದಿಂದ ಬೋರ್ಡ್ ಹಾಕಿದ್ದು 14 ಊರು, ಪೇಟೆಯ ಸರ್ಕಲ್ ಮಾರ್ಗಸೂಚಿ ಬೋರ್ಡ್ ಬುಧವಾರ ಉದ್ಘಾಟನೆ ಮಾಡಲಾಗಿದೆ.

ಇಷ್ಟೆಲ್ಲ ಮುಂದುವರೆದ ಆಧುನೀಕತೆ ನಡುವೆಯೂ ಎಷ್ಟೋ ಊರುಗಳಿಗೆ ಇಂದಿಗೂ ಸರಿಯಾದ ರಸ್ತೆ ಇಲ್ಲ. ಆ ಊರಿನ ಹೆಸರಿನ ಬೋರ್ಡ್ ಕೂಡಾ ಇಲ್ಲ. ಅಪರಿಚಿತರು ಹಳ್ಳಿ ಊರಿಗೆ ಹೋಗುವಾಗ ಪಡುವ ಪಾಡು ಅಷ್ಟಿಷ್ಟಲ್ಲ. ಇದನ್ನೆಲ್ಲ ಗಮನಿಸಿದ ರಾಮಕೃಷ್ಣಪುರದ ಸಮರ್ಪಣಾ ತಂಡದ ಮಿತ್ರರು ತೀರ್ಥಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುತ್ತುವಳ್ಳಿ ಗ್ರಾಮದ ಸುಮಾರು 14 ಊರುಗಳಿಗೆ ಹಾಗೂ ಪೇಟೆಯ ಸರ್ಕಲ್ ಮಾರ್ಗಸೂಚಿಯನ್ನು ಹಾಕಿದ್ದಾರೆ. ಆಯಾ ಊರಿನ ದಾನಿಗಳ ಸಹಯೋಗದೊಂದಿಗೆ ನಾಮಫಲಕವನ್ನು ನಿರ್ಮಿಸಿ ದಾನಿಗಳಿಂದ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯದ ಮೂಲಕ ಪ್ರತಿಯೊಬ್ಬ ಗ್ರಾಮಸ್ಥರಿಗೂ ತನ್ನ ಹುಟ್ಟೂರಿನ ಬಗ್ಗೆ ಪ್ರೀತಿ ಮೂಡಿಸಿ ತಾವು ಕೂಡಾ ತಮ್ಮೂರಿಗೆ ಕೈಲಾದ ಸಹಕಾರ ಮಾಡಲು ಪ್ರೇರಣೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಉಷಾ ಸುಬ್ರಮಣ್ಯ, ಉಪಾಧ್ಯಕ್ಷರಾದ ಗಿರೀಶ್ ಬಾವಣಿ ಹಾಗೂ ಸದಸ್ಯರಾದ ಕೊಡಿಗೆಬೈಲು ಪೂರ್ಣೇಶ್ ರವರು ಹಾಜರಿದ್ದು ಶುಭಾಶಯಗಳನ್ನು ಸಲ್ಲಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸುಧೀರ್ ಅವರು ತಂಡದ ವಿವಿಧ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸಿದರು.

ದಾನಿಗಳ ಹೆಸರು.

1.ಪ್ರಶಾಂತ್ s\o ವಾಸಪ್ಪನಾಯ್ಕ್ ಅಜ್ಜಿಗೊಡಿಗೆ
2.ಸತೀಶ್ B ಚಿಪ್ಪಳಕಟ್ಟೆ ಹಾಗೂ ಗಣೇಶ್ ಚಿಪ್ಪಳಕಟ್ಟೆ.(ಉಡುಪಿ)
3. ಎಂ.ಎಸ್ ಸಕೇಶ್ ಮತ್ತು ಎಂ.ಜಿ. ಮಂಜಪ್ಪ. ಮುತ್ತುವಳ್ಳಿ.
4.ಜೀವನ್ ಗೌಡ ಮುತ್ತುವಳ್ಳಿ.(ಶಿವಮೊಗ್ಗ)
5.ಮಂಜುನಾಥ್ ವಿ.ಎಸ್ s\o ಸೀನಾಚಾರ್ ವಾರಳಿ
6. ಕೇಶವಮೂರ್ತಿ V D ವಾರಳಿ ( ಬೆಂಗಳೂರು)
7.ಸಂತೋಷ್ s\o ಮಂಜಪ್ಪಗೌಡರು ಹಾಗಲಗೋಡು
8. ಕಾರ್ತಿಕ್ s\o ರಾಮಮೂರ್ತಿ ಹೊಸಳ್ಳಿ ಬೈಲು
9. ಸುಜಯ ನಾಗಪ್ಪ ಜೆಡ್ಡು.
10. ಕೃಪಾಲ s\oಪಾಪಣ್ಣಭಟ್ ಹೊಸಳ್ಳಿಬೈಲು
11. ರಾಜೇಂದ್ರs\o ರಾಮಪ್ಪ ಕೋಟೆತೋಟ
12.M.S ಶ್ರೀವತ್ಸs\o ಶ್ರೀನಿವಾಸ ಮೂರ್ತಿ ಎಂ. ಎನ್,ರಾಮಕೃಷ್ಣಪುರ.
13.ಕಾರ್ತಿಕ್ s\o ಮಂಜುನಾಥ್ ವಾರಳಿ
14. ಶಶಿಕಿರಣ s\oಗೋಪಾಲಕೃಷ್ಣ. ಹಾಗಲಗೋಡು.

ಸರ್ಕಲ್ ಮಾರ್ಗಸೂಚಿಯ ದಾನಿಗಳು

1.ನಾಗೇಶ್ ಸಿ.ಎಸ್ ಚಿಪ್ಪಳಕಟ್ಟೆ
2.ಆಟೋ ರಜಿತ್ ಕೊಡಿಗೆಬೈಲು
3.ವಿಶ್ವಾಸ್ ರಾಮಕೃಷ್ಣಪುರ.
4.ಪಾರೂಕ್ ವೆಲ್ಡಿಂಗ್ ಶಾಪ್, ರಾಮಕೃಷ್ಣಪುರ

ಎಲ್ಲ ಬೋರ್ಡ್ ಗಳ ಶೀಟ್ ದಾನಿಗಳು.

ಶ್ರೀಯುತ ಗಣೇಶ್ ಚಿಪ್ಪಳಕಟ್ಟೆ (ಉಡುಪಿ)

ಜೊತೆಗೂಡಿದ ಮಿತ್ರರು

1. ವಸಂತ್ ವಾರಳಿ.
2. ಮನೋಹರ್ ಭಂಡಾರಿ ರಾಮಕೃಷ್ಣಪುರ
3. ಸವಿನ್ ಕೂಡುಗೊಳ್ಳಿ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.