Categories
ತೀರ್ಥಹಳ್ಳಿ

ಪಂಪ್ ಸೆಟ್ ಹಾಕಲು ಹೋಗಿ ಕೆರೆಗೆ ಬಿದ್ದು ಯುವಕ ಸಾವು

ಪಂಪ್ ಸೆಟ್ ಹಾಕಲು ಹೋಗಿ ಕೆರೆಗೆ ಬಿದ್ದು ಯುವಕ ಸಾವು
– ತೀರ್ಥಹಳ್ಳಿ ತಾಲೂಕಿನ ಉಬ್ಬುರು ಬಳಿ ಘಟನೆ
– ಕಾಲೇಜು ಮುಗಿಸಿ ಸೆಕ್ಯೂರಿಟಿ ಆಗಿದ್ದ ಯುವಕ

NAMMUR EXPRESS NEWS
ತೀರ್ಥಹಳ್ಳಿ: ಮೋಟಾರಿಗೆ ನೀರು ಹಾಕಲು ಹೋಗಿ ಆಯ ತಪ್ಪಿ ಕಾಲುಜಾರಿ ಕೆರೆಗೆ ಬಿದ್ದು 19 ವರ್ಷದ ಬಾಲಕ, ಪೃತ್ವಿನ್ಮೃ ತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕು ಉಬ್ಬೂರಿನ ಸಮೀಪದ ಹಾರ್ಕೋಡಲ್ಲಿ ಗುರುವಾರ ಸಂಭವಿಸಿದೆ. ಕೆರೆಯ ಮೋಟರಿಗೆ ನೀರು ಹಾಕಲು ಹೋಗಿ ಆಯಾ ತಪ್ಪಿ ಕಾಲುಜಾರಿ ಬಿದ್ದಿದ್ದು ಈತ ದಿ. ಸುಬ್ರಹ್ಮಣ್ಯ ಮತ್ತು ವೀಣಾ ದಂಪತಿಗಳ ಪುತ್ರ. ಇತ್ತೀಚಿಗೆ ಓದು ಮುಗಿಸಿ ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ಅಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಪೃಥ್ವಿನ್ ಗುರುವಾರ ಜಮೀನಿಗೆ ನೀರು ಬಿಡಲು ಹೋದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತರಾಗಿರುತ್ತಾರೆ. ದೇವರು ಅವರ ಕುಟುಂಬಕ್ಕೆದು:ಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಅಂತ್ಯ ಸಂಸ್ಕಾರ ಶುಕ್ರವಾರ ಮಧ್ಯಾಹ್ನ 03.00 ಗಂಟೆಗೆ ಉಬ್ಬೂರಿನ ಹಾರ್ಕೋಡುನಲ್ಲಿ ನೆರವೇರಲಿದೆ. ಮೃತರ ದೇಹ ಮರಣೊತ್ತರ ಪರೀಕ್ಷೆ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ.

ಮಲ್ನಾಡ್ ಕ್ಲಬ್ ಸಂತಾಪ

ಮಲ್ನಾಡ್ ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಮೃತನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕ್ಲಬ್ ನ ಬಾರ್ ವಿಭಾಗ ಮತ್ತು ಕ್ಯಾಂಟೀನ್ ವಿಭಾಗವು ಸಂಜೆ 6:00 ಘಂಟೆಯವರೆಗೆ ತೆರೆದಿರುವುದಿಲ್ಲ. ಮಾನ್ಯ ಸದಸ್ಯರುಗಳು ಸಹಕರಿಸಬೇಕಾಗಿ ಕೋರಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.