ತೀರ್ಥಹಳ್ಳಿಯಲ್ಲಿ ಯುವ ಉದ್ಯಮಿ ಆತ್ಮಹತ್ಯೆ!
– ಮನೆಯಲ್ಲೇ ವಿಷ ಸೇವಿಸಿ ಸಾವು: ಕಾರಣ ನಿಗೂಢ
– ಸಾಲದ ಕಾರಣವೋ…? ವೈವಾಹಿಕ ಸಮಸ್ಯೆಯೋ..?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಯುವ ಯುವ ಉದ್ಯಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಕಾರಣ ನಿಗೂಢವಾಗಿದೆ.
ಮನೆಯಲ್ಲಿ ನೇಣು ಬಿಗಿದುಕೊಳ್ಳಲು ಪ್ರಯತ್ನ ಪಟ್ಟು ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀರ್ಥಹಳ್ಳಿ ಬೆಟ್ಟಮಕ್ಕಿಯಲ್ಲಿ ನಡೆದಿದೆ.
ಬೆಟ್ಟಮಕ್ಕಿಯ ನಿವಾಸದಲ್ಲಿ ವಿಖ್ಯಾತ್ ( 38 ) ಮೃತ ಯುವಕ. ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತ ಇತ್ತೀಚಿಗೆ ಮನೆಗೆ ಬಂದಿದ್ದ. ಈತನ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮೃತದೇಹವನ್ನು ಜಯ ಚಾಮರಾಜೇಂದ್ರ ಆಸ್ಪತ್ರೆಗೆ ರವಾನಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
ಹಣ ಸಮಸ್ಯೆ, ಡೈವೋರ್ಸ್ ಕಾರಣವೇ..?
ಉದ್ಯಮದಲ್ಲಿ ಹಣಕಾಸು ನಷ್ಟ ಅಥವಾ ವೈವಾಹಿಕ ಜೀವನದ ಏರುಪೇರು ಈ ಆತ್ಮಹತ್ಯೆಗೆ ಕಾರಣವೇ ಎಂಬ ಅನುಮಾನ ಮೂಡಿದೆ.
ಘಟನೆ ಮುನ್ನ ಸ್ನೇಹಿತರು ಇದ್ದರು ಎಂಬ ಚರ್ಚೆ ಕೂಡ ಇದೆ. ಪೊಲೀಸರು ತನಿಖೆ ನಡೆಸಬೇಕಿದೆ.