ಆಧಾರ್ ಕಾರ್ಡ್ ತಿದ್ದುಪಡಿಗೆ ತೀರ್ಥಹಳ್ಳಿಯಲ್ಲಿ ಅವಕಾಶ
– ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲೇ ತಿದ್ದುಪಡಿ
– ಅಂಚೆ ಕಚೇರಿಯಲ್ಲೂ ತಿದ್ದು ಪಡಿ ಮಾಡಬಹುದು
– ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಲಭ್ಯ
NAMMUR EXPRESS NEWS
ತೀರ್ಥಹಳ್ಳಿ: ಆಧಾರ್ ಕಾರ್ಡ್ ತಿದ್ದು ಪಡಿ ಈಗ ತಾಲೂಕು ಕಚೇರಿಯಲ್ಲಿಯೇ ಅವಕಾಶ ನೀಡಲಾಗಿದೆ. ತಾಲ್ಲೂಕು ಕಚೇರಿಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಆಧಾರ್ ತಿದ್ದುಪಡಿ ಕೇಂದ್ರ ತಾಂತ್ರಿಕ ದೋಷಗಳಿಂದ ವರ್ಷಗಳಿಂದ ಸ್ಥಗಿತಗೊಂಡಿತ್ತು. ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡಿದ್ದು ಇದೀಗ ತೀರ್ಥಹಳ್ಳಿಯ ಮುಖ್ಯ ಅಂಚೆ ಕಚೇರಿ ಅಲ್ಲದೇ ತಾಲ್ಲೂಕು ಕಚೇರಿಯಲ್ಲಿಯೂ ಆಧಾರ್ ತಿದ್ದುಪಡಿಗೆ ಅವಕಾಶ ಲಭ್ಯವಾಗಿದೆ. ಬಯೋಮೆಟ್ರಿಕ್, ಡೆಮೋಗ್ರಾಫಿಕ್ ಸೇವೆಗಳು ಕೂಡ ತಾಲ್ಲೂಕು ಕಚೇರಿಯಲ್ಲಿಯೇ ಆರಂಭಗೊಂಡಿದೆ. ಆಧಾರ್ ಕಾರ್ಡ್ ಫೋನ್ ನಂಬರ್ ಬದಲಾವಣೆ, ವಿಳಾಳ, ಹೆಸರು ಬದಲಾವಣೆ, ಮುಂತಾದವುಗಳು ತಾಲ್ಲೂಕು ಕಚೇರಿ ಸಮೀಪ ತೆರೆದಿರುವ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಲಭ್ಯವಿದೆ. ಆಧಾರ್ ಕಾರ್ಡ್ ತಿದ್ದುಪಡಿಮಾಡಿಸಿಕೊಳ್ಳುವವರಿಗೆ ಇದೀಗ ಉತ್ತಮ ಅವಕಾಶ ಲಭಿಸಿದ್ದು ಮೂರು ಸ್ಥಳಗಳ ಸೇವಾ ಕೇಂದ್ರ ಬಳಕೆ ಮಾಡಿಕೊಳ್ಳಬಹುದು.