ತೀರ್ಥಹಳ್ಳಿ ಪಟ್ಟಣದಲ್ಲಿ ಅಪಘಾತ!
– ಕಾರು – ಮಿನಿ ಟಿಪ್ಪರ್ ಅಪಘಾತ: ಅಪಾಯದಿಂದ ಪಾರು
– ಪಟ್ಟಣದಲ್ಲಿ ದಿನೇ ದಿನೇ ಹೆಚ್ಚಿದ ಅನಾಹುತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಬಾಳೆಬೈಲು ಸಮೀಪ ಹೆಗಡೆ ಪೆಟ್ರೋಲ್ ಬಂಕ್ ಸಮೀಪ ಮಾರುತಿ ಬಲೆನೋ ಕಾರು ಹಾಗೂ ಮಿನಿ ಟಿಪ್ಪರ್ ನಡುವೆ ಶನಿವಾರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಟಿಪ್ಪರ್ ಗುದ್ದಿದ ರಭಸಕ್ಕೆ ಮಾರುತಿ ಬಲೆನೋ ಕಾರ್ ಹಿಂಭಾಗ ನುಚ್ಚುಗುಜ್ಜಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾರುತಿ ಬಲಿನೋ ಕಾರು ಯು ಟರ್ನ್ ತೆಗೆದುಕೊಂಡ ಕಾರಣ ಸಂಭವಿಸಿದ ಅಪಘಾತ ಮಿನಿ ಟಿಪ್ಪರ್ ಬಂದು ಕಾರಿನ ಹಿಂಭಾಗಕ್ಕೆ ಗುದ್ದಿದೆ.
ಹೈವೇ, ವಾಹನ ಹೆಚ್ಚಾಗಿ ಅಪಘಾತ!
ಹೊಸ ರಸ್ತೆ ಬಳಿಕ ವಾಹನ ಅಪಘಾತ ಹೆಚ್ಚುತ್ತಿದೆ. ಇನ್ಮು ಈ ರಸ್ತೆಯಲ್ಲಿ ವಾಹನ ಸಂಖ್ಯೆ ಕೂಡ ಹೆಚ್ಚಿದೆ. ಮರಳು ಸಾಗಣೆ ವಾಹನ ಸಂಖ್ಯೆ ಕೂಡ ಹೆಚ್ಚಿದೆ.