Categories
ತೀರ್ಥಹಳ್ಳಿ

ದೇವಂಗಿ ಬಳಿ ಆಕ್ಸಿಡೆಂಟ್: ಓರ್ವ ಬಲಿ!

ದೇವಂಗಿ ಬಳಿ ಆಕ್ಸಿಡೆಂಟ್: ಓರ್ವ ಬಲಿ!
– ತೀರ್ಥಹಳ್ಳಿಯಲ್ಲಿ ಪದೇ ಪದೇ ಅಪಘಾತ!

NAMMUR EXPRESS NEWS
ತೀರ್ಥಹಳ್ಳಿ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಒಬ್ಬನಿಗೆ ಬೈಕ್ ಡಿಕ್ಕಿ ಹೊಡೆದು ಆತ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕು ದೇವಂಗಿ ಸರ್ಕಲಿನಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಶುಕ್ರವಾರ ಸಂಜೆ ಕೆಲಸ ಮಾಡಿ ನಡೆದುಕೊಂಡು ಬರುತ್ತಿದ್ದ ಕೂಲಿ ಕಾರ್ಮಿಕ ನರಸಿಂಹ( 55 ವರ್ಷ) ಎಂಬುವರಿಗೆ ಬೈಕ್ ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನರಸಿಂಹ ಎಂಬಾತ ಮೋರಿಗೆ ಹೋಗಿ ಆತನ ತಲೆ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಅವರನ್ನ ತೀರ್ಥಹಳ್ಳಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಬಳಿಕ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇವಂಗಿಯಲ್ಲಿ ಶನಿವಾರ ಸಂಜೆ ಅವರ ಅಂತ್ಯಕ್ರಿಯೆ ನಡೆಯಿತಿ.

ತೀರ್ಥಹಳ್ಳಿಯಲ್ಲಿ ಪದೇ ಪದೇ ಅಪಘಾತ!

ಇತ್ತೀಚಿಗೆ ತೀರ್ಥಹಳ್ಳಿ ಎಲ್ಲಾ ಭಾಗದಲ್ಲಿ ರಸ್ತೆ ಅಚ್ಚುಕಟ್ಟಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಿದೆ. ವಾಹನಗಳ ವೇಗ ಹೆಚ್ಚಾಗಿರುವುದರಿಂದ ಪ್ರತಿದಿನ ಒಂದಲ್ಲ ಒಂದು ಕಡೆ ಅಪಘಾತಗಳ ಜೊತೆಗೆ ಸಾವು ಸಂಭವಿಸುತ್ತಿದೆ. ಪೋಲಿಸ್ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಆಡಳಿತ ಈ ಬಗ್ಗೆ ಜಾಗೃತಿ ವಹಿಸಬೇಕಿದೆ. ಬೇಗ ಮುಕ್ತಿಯನ್ನು ಅನೇಕ ಕಡೆ ಅಳವಡಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಗಮನ ಹರಿಸಬೇಕಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.