ಅಬಾಕಸ್ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ಮಕ್ಕಳ ಸಾಧನೆ!
– ರಾಜ್ಯ ಮಟ್ಟದಲ್ಲಿ ತೀರ್ಥಹಳ್ಳಿ ಮಕ್ಕಳ ವಿಜಯ ಮಾಲೆ
– ರಾಷ್ಟ್ರ ಮಟ್ಟದಲ್ಲೂ ಸಾಧನೆ ಮಾಡಿದ್ದ ಸಂಸ್ಥೆ
NAMMUR EXPRESS NEWS
ತೀರ್ಥಹಳ್ಳಿ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 18ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ವೇದಿಕ್ ಮ್ಯಾಥ್ಸ್ ಸ್ಪರ್ಧೆ ಹಾಸನದಲ್ಲಿ ನಡೆಯಿತು. ರಾಜ್ಯ ವಿವಿಧ ಪ್ರದೇಶದಿಂದ ಸುಮಾರು 1600 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ತೀರ್ಥಹಳ್ಳಿ ಸೆಂಟರ್ ನ 5 ವಿದ್ಯಾರ್ಥಿಗಳಲ್ಲಿ ಶ್ರೇಷ್ಠ ಕೆ.ಆರ್ ದ್ವಿತೀಯ ಸ್ಥಾನ, ಬ್ರಾಹ್ಮೀ ಆರ್ ಶೆಟ್ಟಿ ಮತ್ತು ತೇಜಶ್ರೀ ತೃತಿಯ ಬಹುಮಾನ ಹಾಗೂ ಅದಿತಿ ಗೌಡ ಮತ್ತು ಅಭಯ ಪ್ರಸಾದ್ ಚತುರ್ಥ ಸ್ಥಾನ ಪಡಿದ್ದಾರೆ. ಇವರು ಐಡಿಯಲ್ ಪ್ಲೇ ಅಬಾಕಸ್ ತೀರ್ಥಹಳ್ಳಿ ಸೆಂಟರಿನ ಬೋಧಕರಾದ ವೀಣಾ ಮತ್ತು ನವ್ಯಾ ತರಬೇತಿ ನೀಡಿರುತ್ತಾರೆ.
ರಾಷ್ಟ್ರ ಮಟ್ಟದಲ್ಲೂ ಸಾಧನೆ ಮಾಡಿದ್ದ ಸಂಸ್ಥೆ
ಐಡಿಯಲ್ ಪ್ಲೇ ಅಬಾಕಸ್ ಅಂತಾರಾಷ್ಟ್ರೀಯ ಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥಮೇಟಿಕ್ ಕಾಂಪಿಟಿಷನ್ ‘world city cup-23’ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದಿದ್ದು, ಅಲ್ಲಿ ತೀರ್ಥಹಳ್ಳಿ ವಿದ್ಯಾರ್ಥಿನಿ ಅಮೃತ ಈ ಹಿಂದೆ ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದು ಸಾಧನೆ ಮಾಡಿದ್ದಳು. 19 ದೇಶಗಳಿಂದ ಸುಮಾರು 3000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ತೀರ್ಥಹಳ್ಳಿ ಅಭಾಕಸ್ ಸೆಂಟರ್ ಯಿಂದ ಪ್ರತಿನಿಧಿಸಿ ಅಮೃತ ಇ.ಕೆ ಬೆಳ್ಳಿ ಪದಕ ಪಡೆದು ನಾಡಿಗೆ ಕೀರ್ತಿ ತಂದಿದ್ದಳು. ಈಕೆ ಇಕ್ಕೇರಿ ಬೆಳ್ಳೂರು ಕೇಶವಮೂರ್ತಿ ಮತ್ತು ರಂಜಿತಾ ಅವರ ಪ್ರಥಮ ಪುತ್ರಿ.