ತೀರ್ಥಹಳ್ಳಿ ವಾಗ್ದೇವಿ ವಿದ್ಯಾರ್ಥಿನಿಯರ ಸಾಧನೆ
– ಮಿನಿ ಒಲಂಪಿಕ್ ಕಬಡ್ಡಿ ತಂಡಕ್ಕೆ ಇಬ್ಬರು ಆಯ್ಕೆ
– ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದ ಆಡಳಿತ ಮಂಡಳಿ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ವಾಗ್ದೇವಿ ಶಾಲೆಯ ವಿದ್ಯಾರ್ಥಿನಿಯರಾದ ಹೊರಬೈಲು ಗ್ರಾಮದ ಅನಿಲ್ ಶೆಟ್ಟಿ ಮತ್ತು ದೀಪ ಶೆಟ್ಟಿ ದಂಪತಿಗಳ ಪುತ್ರಿ ಎಂಟನೇ ತರಗತಿ ಅವನಿ ಹಾಗೂ ಮೇಲಿನ ಕುರುವಳ್ಳಿ ನಿವಾಸಿಯಾದ ರಾಜ ಹಾಗೂ ಅನಿತಾ ದಂಪತಿಗಳ ಪುತ್ರಿ ಏಳನೇ ತರಗತಿಯಲ್ಲಿ ಓದುತ್ತಿರುವ ವರ್ಷಿತ ಇವರು 14 ವರ್ಷದ ಒಳಗಿನ ಕಬಡ್ಡಿ ಒಲಂಪಿಕ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.
ದಿನಾಂಕ : 24-08-2024 ರಿಂದ 30-08-2024 ರ ವರೆಗೆ ಡಿಪಾರ್ಟ್ಮೆಂಟ್ ಆಫ್ ಯೂತ್ ಎಂಪೈರ್ಮೆಂಟ್ ಅಂಡ್ ಸ್ಪೋರ್ಟ್ಸ್ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೂರನೇ ಮಿನಿ ಒಲಂಪಿಕ್ ಕಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದ್ದು, ಈ ಒಲಂಪಿಕ್ ಗೆ ತೀರ್ಥಹಳ್ಳಿಯ ವಾಗ್ದೇವಿ ಶಾಲೆಯ ವಿದ್ಯಾರ್ಥಿನಿಯರಾದ ಅವನಿ ಹಾಗೂ ವರ್ಷಿತ ಆಯ್ಕೆಯಾಗಿದ್ದಾರೆ. ಇವರಿಗೆ ವಾಗ್ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಮತ್ತು ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಶುಭ ಹಾರೈಸಿದ್ದಾರೆ.
