Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಬಸ್, ಲಾರಿ ನಡುವೆ ಅಪಘಾತ!

ತೀರ್ಥಹಳ್ಳಿಯಲ್ಲಿ ಬಸ್, ಲಾರಿ ನಡುವೆ ಅಪಘಾತ!
– ಮುಂಜಾನೆ ಮಂಜಿಗೆ ರಸ್ತೆ ಕಾಣದೆ ಅಪಘಾತ
– ಬಿಗ್​ ಬಾಸ್ ಕಾರ್ಯಕ್ರಮದ ವಿರುದ್ಧ ಡಿಜಿಪಿಗೆ ಪತ್ರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಿನ ನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದೆ. ಇದೀಗ ಸರ್ಕಾರಿ ಬಸ್ ಹಾಗೂ ಹತ್ತು ಚಕ್ರದ ಲಾರಿಯ ನಡುವೆ ಸೋಮವಾರ ಬೆಳ್ಳಂ ಬೆಳಗ್ಗೆ ಆರಗದಲ್ಲಿ ಅಪಘಾತವಾಗಿದೆ. ಬೆಂಗಳೂರಿನಿಂದ ತೀರ್ಥಹಳ್ಳಿ ಮಾರ್ಗವಾಗಿ ಹುಂಚಕ್ಕೆ ಹೋಗುತ್ತಿದ್ದ ಕೆಎಸ್‌ಆರ್ಟಿಸಿ ಬಸ್‌ ಹಾಗೂ ಲಾರಿಯೊಂದರ ನಡುವೆ ಅಪಘಾತವಾಗಿದ್ದು ಬಸ್‌ ಜಖಮ್ ಗೊಂಡಿದೆ. ಮಂಜಿನ ವಾತಾವರಣ ಇದ್ದ ಕಾರಣಕ್ಕೆ ಎದುರಿಂದ ಬಂದ ವಾಹನ ಕಾಣಿಸದೆ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಡಿಜಿಪಿಗೆ ಪತ್ರ

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರ ತಾಲ್ಲೂಕು ಚಾಮರಾಜಪೇಟೆಯ ವಕೀಲರು ಕೆ.ವಿ. ಪ್ರವೀಣ್​ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಖಾಸಗಿ ಕನ್ನಡ ಮನರಂಜನಾ ಚಾನಲ್‌ನಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್ ಕಾರ್ಯಕ್ರಮವು ಅಶ್ಲೀಲ ಮತ್ತು ಆವಾಚ್ಯ ಪದಗಳ ಬಳಕೆ ಹಾಗೂ ಅತೀರೇಕದ ವರ್ತನೆಯನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ” ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಮನರಂಜನಾ ಚಾನಲ್‌ನಲ್ಲಿ ಕಾರ್ಯಕ್ರಮವು ಬಿತ್ತರಗೊಳ್ಳುತ್ತಿದ್ದು ಇದು ಸ್ಪರ್ದಿಗಳ ನಡುವೆ ಅಶ್ಲೀಲ ಸಂಭಾಷಣೆ ಮತ್ತು ಅವಾಚ್ಯ ಪದಗಳ ಬಳಕೆ ಹಾಗೂ ಆತೀರೇಕದ ವರ್ತನೆ ನಡೆಯುತ್ತಿದೆ.

ಅಲ್ಲದೇ ಸ್ಪರ್ದಿಗಳು ಚಪ್ಪಲಿಯಲ್ಲಿ ಹೊಡೆದುಕೊಳ್ಳುವ ದೃಶ್ಯಗಳು ಸಹ ಅತಿ ರೋಚಕವಾಗಿ ಬಿತ್ತರಗೊಳ್ಳುತ್ತಿವೆ. ಈ ಮೂಲಕ ಕುಟುಂಬ, ಸಮಾಜದಲ್ಲಿ ಕೆಟ್ಟ ಪರಿಣಾಮವನ್ನು ಬೀರುವ ಕಾರ್ಯಕ್ರಮವಾಗಿದೆ. ಅಲ್ಲದೆ ಈ ಕಾರ್ಯಕ್ರಮವು ನೈತಿಕ ಮಟ್ಟವು ಕುಸಿಯುವಂತಹ ಕಾರ್ಯಕ್ರಮವಾಗಿದೆ. ಇದರ ಚಿತ್ರೀಕರಣವು ಬಿಡದಿಯಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ತಾವುಗಳು ಕಲ್ಲರ್ಸ್ ಕನ್ನಡ ಮನರಂಜನಾ ಚಾನಲ್‌ನಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್ ಕಾರ್ಯಕ್ರಮವು ಅಶ್ಲೀಲ ಮತ್ತು ಅವಾಚ್ಯ ಪದಗಳ ಬಳಕೆ ಹಾಗೂ ಆತೀರೇಕದ ವರ್ತನೆಯನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸಿ ಈ ಕಾರ್ಯಕ್ರಮವನ್ನು ತಡೆಗಟ್ಟುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.