Categories
ತೀರ್ಥಹಳ್ಳಿ

ವಿಧಾತ ಅನಿಲ್ ಅವರಿಗೆ ಮಹತ್ವದ ಹುದ್ದೆ!

ವಿಧಾತ ಅನಿಲ್ ಅವರಿಗೆ ಮಹತ್ವದ ಹುದ್ದೆ!
– ತೀರ್ಥಹಳ್ಳಿ ತಾಲೂಕು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ
– -ಉಪಾಧ್ಯಕ್ಷರಾಗಿ ಬಂಡೆ ವೆಂಕಟೇಶ್-ಪ್ರಧಾನ ಕಾರ್ಯದರ್ಶಿಯಾಗಿ ನಂಬಳ ಮುರುಳಿ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷರಾಗಿ ಅನಿಲ್ ವಿಧಾತ -ಉಪಾಧ್ಯಕ್ಷರಾಗಿ ಬಂಡೆ ವೆಂಕಟೇಶ್-ಪ್ರಧಾನ ಕಾರ್ಯದರ್ಶಿಯಾಗಿ ನಂಬಳ ಮುರುಳಿ ಆಯ್ಕೆಯಾಗಿದ್ದಾರೆ.
ತೀರ್ಥಹಳ್ಳಿ ತಾಲೂಕು ಗ್ರಾಮಪಂಚಾಯತಿ ಅಧ್ಯಕ್ಷ/ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷರಾಗಿ ತ್ರಿಯಂಬಕಪುರ ಗ್ರಾಮಪಂಚಾಯತಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಅನಿಲ್ ವಿಧಾತ ಆಯ್ಕೆಯಾಗಿದ್ದಾರೆ. ಸೆ.5 ರಂದು ಪಟ್ಟಣದ ವಿದ್ಯಾದಿರಾಜ ಸಭಾ ಭವನದಲ್ಲಿ ಒಕ್ಕೂಟದ ಪದಾಧಿಕಾರಿಗಳ ಆಯ್ಜೆ ಪ್ರಕ್ರಿಯೆ ನಡೆದಿದ್ದು ಉಪಾಧ್ಯಕ್ಷರುಗಳಾಗಿ ಕುರುವಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷರಾದ ಬಂಡೆ ವೆಂಕಟೇಶ್,ಹಾದಿಗಲ್ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರವಿ ಹೊಸ್ಕೆರಿ,ಕನ್ನಂಗಿ ಗ್ರಾಮ ಪಂಚಾಯತಿಯ ಸುಪ್ರೀತ,ಮಂಡಗದ್ದೆ ಗ್ರಾಮಪಂಚಾಯತಿಯ ಜ್ಯೋತಿ ಆಯ್ಕೆಯಾಗಿದ್ದರೆ ಪ್ರಧಾನ ಕಾರ್ಯದರ್ಶಿಯಾಗಿ ನಂಬಳ ಮುರುಳಿ ಮುಂದುವರೆದಿದ್ದಾರೆ.

ಗ್ರಾಮಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಒಕ್ಕೂಟ ಪಕ್ಷಾತೀತವಾದ ಸಂಘಟನೆಯಾಗಿದ್ದು ತಾಲೂಕಿನ 38 ಗ್ರಾಮಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರುಗಳ ಶ್ರೇಯೋಭಿಲಾಷೆ, ಸಮಸ್ಯೆಗಳ ಜೊತೆಗೆ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಹಾಗೂ ಗ್ರಾಮಪಂಚಾಯತಿಗಳ ಸಮಗ್ರ ಏಳಿಗೆಯ ದೃಷ್ಟಿಯಿಂದ ಒಕ್ಕೂಟ ಕಾರ್ಯನಿರ್ವಹಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.