Categories
ತೀರ್ಥಹಳ್ಳಿ

ಹಣ ಕದ್ದವರು ಶೃಂಗೇರಿಯಲ್ಲಿ ಸಿಕ್ಕಿಬಿದ್ದರು!

ಹಣ ಕದ್ದವರು ಶೃಂಗೇರಿಯಲ್ಲಿ ಸಿಕ್ಕಿಬಿದ್ದರು!
– ತೀರ್ಥಹಳ್ಳಿ ಪೊಲೀಸರ ಮಿಂಚಿನ ಕಾರ್ಯಾಚರಣೆ
– ಶೃಂಗೇರಿ ಬಳಿ ಅಡಿಕೆ ಮಂಡಿಯ ಹಣ ಕದ್ದ ಕಳ್ಳರ ಬಂಧನ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಕುರುವಳ್ಳಿಯ ಅಡಿಕೆ ಮಂಡಿಯಲ್ಲಿ 2.75 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿ ಮೂರು ಜನ ಆರೋಪಿಗಳು ಆಲ್ಟೋ ಕಾರಿನಲ್ಲಿ ಕದ್ದು ಹೋಗುತ್ತಿರುವಾಗ ಶೃಂಗೇರಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಕದ್ದು ಪರಾರಿಯಾದ ಕಳ್ಳರನ್ನು ಪೊಲೀಸರು ಮಿಂಚಿನ ಕಾರ್ಯಾಚರಣೆಯ ಮೂಲಕ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಶೃಂಗೇರಿಯ ಕುರುಬನ ಕೇರಿಯಲ್ಲಿ ಸ್ಥಳೀಯರು ಮತ್ತು ಪೊಲೀಸರು ಬೆನ್ನತ್ತಿ ಹಿಡಿದಿದ್ದಾರೆ. ಮೂಡಿಗೆರೆ ಮೂಲದ ಮಹಮ್ಮದ್ ಶಾದು(24), ಜೆಶಾನ್ (17), ಜಮ್ಮಿದ್ (23) ಬಂಧಿತರು.

ಸಂತೆಗೆ ಬಂದು ಕಳ್ಳತನಕ್ಕೆ ಪ್ಲಾನ್ ಹಾಕಿದರು!

ತೀರ್ಥಹಳ್ಳಿಯ ಸಂತೆಗೆ ಬಂದಿದ್ದ ಕಳ್ಳರು ಇಲ್ಲಿಯೇ ಕದಿಯಲು ಪ್ಲಾನ್ ಹಾಕಿದ್ದರು. ಅಂತೆಯೆ ಬೆಳಿಗ್ಗೆ ಸುಮಾರು 11:30ಕ್ಕೆ ಮಂಡಿ ಯಾರೂ ಇಲ್ಲದನ್ನು ನೋಡಿ ಹಣ ಕದ್ದು ಪರಾರಿ ಆಗಿದ್ದಾರೆ. ಕಾರಿನ ನಂಬರ್ ಪ್ಲೇಟ್ ತೆಗೆದು ಶೃಂಗೇರಿಗೆ ಬಂದಿದ್ದಾರೆ. ಬಂಧಿತರಿಂದ 2.75 ಲಕ್ಷ ಹಣ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ತೀರ್ಥಹಳ್ಳಿಯ ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರ ಮಾರ್ಗದರ್ಶನದಲ್ಲಿ ದಫೆದಾರ್ ಪುನೀತ್, ದೀಪಕ್ ಗೌಡ ಮತ್ತು ತಂಡದವರು ಕೆಲವೇ ಗಂಟೆಗಳಲ್ಲಿ ಶೃಂಗೇರಿಯ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಇಲಾಖೆಯ ಮಿಂಚಿನ ಕಾರ್ಯಾಚರಣೆಗೆ ಇದೀಗ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊನ್ನೆ ಮೊನ್ನೆ ತಾನೇ ಗಾಂಜಾ ಮಾರಾಟಗಾರರ ಸೆದೆಬಡಿದಿದ್ದ ಪೊಲೀಸರು ಈಗ ಮತ್ತೊಂದು ಪ್ರಕರಣ ಬೇಧಿಸಿದ್ದಾರೆ.

ಅಂಗಡಿಯಲ್ಲಿ ಕದ್ದಿದ್ದು ಹೇಗೆ..?

ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿಯ ಅಡಿಕೆ ಮಂಡಿಯಲ್ಲಿ ಸುಮಾರು 250000 ರೂ. ನಗದು ಹಣ ಮಂಡಿಯ ಕ್ಯಾಶ್ ಟೇಬಲ್ ಅಲ್ಲಿ ಇಡಲಾಗಿತ್ತು. ಮಾಲೀಕರ ಗಮನ ಬೇರೆಡೆ ಸೆಳೆದ ಮೂರು ಜನ ಕಳ್ಳರು ಅಡಿಕೆ ಮಂಡಿಯಲ್ಲಿ ಹಣವನ್ನು ಕದ್ದೋಯ್ದಿದ್ದಾರೆ ಕಾರಿನ ಹಿಂದೆ AINU ಅಥವಾ AJNU ಎಂದು ಬರೆದಿರುತ್ತದೆ ಎಂದು ನಮ್ಮೂರ್ ಎಕ್ಸ್ ಪ್ರೆಸ್ ಮೊದಲು ವರದಿ ಮಾಡಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.