ಬೇಗುವಳ್ಳಿ ಸತೀಶ್ ನೇತೃತ್ವದಲ್ಲಿ ಸಾಧಕ ಮಕ್ಕಳಿಗೆ ಪುರಸ್ಕಾರ
– ಮಾತಾ-ಪಿತೃರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ: ಬೇಗುವಳ್ಳಿ ಸತೀಶ್ ಅವರ ಕುಟುಂಬದಿಂದ ಆಯೋಜನೆ
– ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ!
– ಜ.7ರ ಮಧ್ಯಾಹ್ನ 2ಕ್ಕೆ ಕಾರ್ಯಕ್ರಮ ಶುರು
NAMMUR EXPRESS NEWS
ತೀರ್ಥಹಳ್ಳಿ: ಮಾತಾ-ಪಿತೃಗಳ ಸ್ಮರಣಾರ್ಥ ಬಿಜೆಪಿ ಹಾಗೂ ಈಡಿಗ ಸಮುದಾಯದ ನಾಯಕ ಬೇಗುವಳ್ಳಿ ಸತೀಶ್ ಅವರು ಜ.7ರಂದು ತೀರ್ಥಹಳ್ಳಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಬೇಗುವಳ್ಳಿ ಸತೀಶ್ ಅವರ ಮಾತಾ ಪಿತೃರಾದ ಶ್ರೀಮತಿ ರುಕ್ಮಿಣಿ ಮತ್ತು ಶ್ರೀ ಹೆಚ್ ಕೆ ರಮಾನಂದ ಅವರ ಸ್ಮರಣಾರ್ಥ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಈಡಿಗ ಹಾಗೂ ಇತರೆ ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರುಗಳಿಗೆ ಮತ್ತು ಸಾಧಕರಿಗೆ ಸನ್ಮಾನವನ್ನು ಏರ್ಪಡಿಸಿದ್ದು, ದಿನಾಂಕ :07-01-2024ರ ಭಾನುವಾರ, ಮಧ್ಯಾಹ್ನ 2-00 ಗಂಟೆಗೆ, ಸುವರ್ಣ ಸಹಕಾರ ಭವನ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ವಿಶೇಷ ಕಾರ್ಯಕ್ರಮವು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕಿನ, ಸಾಗರದ ಶ್ರೀ ಕಾರ್ತಿಕೇಯ ಕ್ಷೇತ್ರದ, ಶ್ರೀ ಶ್ರೀ ಯೋಗೇಂದ್ರ ಅವಧೂತರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಮಾಜಿ ಶಾಸಕರಾದ ಜಿ. ಸ್ವಾಮಿರಾವ್ ಹೊಸನಗರ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೇಗುವಳ್ಳಿ ಸತೀಶ್ ವಹಿಸಲಿದ್ದು, ಪ್ರತಿಭಾ ಪುರಸ್ಕಾರವನ್ನು ಮಾಜಿ ಗೃಹ ಸಚಿವರು,ತೀರ್ಥಹಳ್ಳಿ ಕ್ಷೇತ್ರದ ಹಾಲಿ ವಿಧಾನಸಭಾ ಸದಸ್ಯರೂ ಆದ ಆರಗ ಜ್ಞಾನೇಂದ್ರ ನಡೆಸಿಕೊಡಲಿದ್ದಾರೆ.
ಮೆಗ್ಗಾನ್ ಜಿಲ್ಲಾ ಬೋಧನೆ ಆಸ್ಪತ್ರೆ ನಿಮ್ಸ್ ಶಿವಮೊಗ್ಗದ ವೈದ್ಯಕೀಯ ಅಧಿಧಕ್ಷಕರಾದ ಡಾ.ಬಿ.ಡಿ ತಿಮ್ಮಪ್ಪ ಪ್ರತಿಭಾ ಪುರಸ್ಕೃತರಿಗೆ ಹಿತವಚನ ನುಡಿಯಲಿದ್ದು, ಮುಖ್ಯ ಅತಿಥಿಗಳಾಗಿ, ಮಾಜಿ ಜಿಲ್ಲಾ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಎಸ್.ಪುರುಷೋತ್ತಮ, ತೀರ್ಥಹಳ್ಳಿಯ ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷರೂ, ಸಹಕಾರಿ ರತ್ನ ಪುರಸ್ಕೃತರೂ ಆದ ನಾಗರಾಜ್ ಶೆಟ್ಟಿ ಉಪಸ್ಥಿತರಿರುತ್ತಾರೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಕುಲ, ಒಂದೇ ಮತ, ಒಂದೇ ದೇವರು ಎಂಬ ಸಮಾನತೆಯ ಸಂದೇಶವನ್ನು ಸ್ಮರಿಸುತ್ತಾ, ಬನ್ನಿ ನಿಮ್ಮೂರಿನ ಪ್ರತಿಭಾವಂತ ಮಕ್ಕಳು ಉನ್ನತ ಮಟ್ಟಕ್ಕೇರಲು ಹಾಗೂ ಉತ್ತಮ ನಾಗರೀಕರಾಗಲು ಸಹಕರಿಸೋಣ ಎಂದು ತೀರ್ಥಹಳ್ಳಿ ತಾಲೂಕಿನ ಸಹೃದಯ ನಾಗರೀಕರು, ಬಂದು ಮಿತ್ರರಿಗೆ ತುಂಬು ಹೃದಯದಿಂದ ಬೇಗುವಳ್ಳಿ ಸತೀಶ್, ಹೆಚ್. ಆರ್. ವೆಂಕಟೇಶ್, ಹೆಚ್. ಆರ್. ದಿನೇಶ್, ಮತ್ತು ಕುಟುಂಬ ವರ್ಗದವರು ಆಮಂತ್ರಿಸಿದ್ದಾರೆ.