ಆಯುಧ ಪೂಜೆ ತೀರ್ಥಹಳ್ಳಿ ರಂಗು!
– ಬೆಳಕಿನ ಅಲಂಕಾರ, ಸಿಂಗಾರದಲ್ಲಿ ಮಿಂದೆದ್ದ ತೀರ್ಥಹಳ್ಳಿ
– ಆಟೋ ನಿಲ್ದಾಣಗಳಿಗೆ ಆರಗ ಜ್ಞಾನೇಂದ್ರ ಭೇಟಿ
NAMMUR EXPRESS NEWS
ತೀರ್ಥಹಳ್ಳಿಯ ಪಟ್ಟಣ ಮತ್ತು ತಾಲೂಕಿನ ಎಲ್ಲಾ ಕಡೆ ಆಯುಧ ಪೂಜೆ ಸಂಭ್ರಮದಿಂದ ನಡೆಯಿತು. ಅಂಗಡಿ ಮಳಿಗೆಗಳು ಅಲಂಕಾರ ಮಾಡಿದ್ದು, ಬಸ್, ಕಾರು, ಲಾರಿಗಳಿಗೂ ಪೂಜೆ ಮಾಡಲಾಯಿತು. ಆಟೋ ನಿಲ್ದಾಣ, ಕಾರು ನಿಲ್ದಾಣ, ಬಸ್ ನಿಲ್ದಾಣ, ವಾಹನಗಳ ಸಿಂಗಾರ ಮಾಡಿದ್ದು ವಿದ್ಯುತ್ ಅಲಂಕಾರ ಮಾಡಿದ್ದು ಗಮನ ಸೆಳೆಯಿತು ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ, ಆಸ್ಪತ್ರೆ ಎದುರು, ಕೊಪ್ಪ ಸರ್ಕಲ್, ತಾಲೂಕು ಆಫೀಸ್, ಗಾಂಧಿ ಚೌಕ, ಆಗುಂಬೆ ನಿಲ್ದಾಣ, ಸಾಗರ ರಸ್ತೆ ಆಟೋ ನಿಲ್ದಾಣ, ಬಸ್ ನಿಲ್ದಾಣ, ಕಾರು ನಿಲ್ದಾಣ, ಕಚೇರಿಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಎಲ್ಲೆಡೆ ಅಂಗಡಿಗಳು, ವಾಹನಗಳಿಗೆ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಕೊಪ್ಪ ಸರ್ಕಲ್ ಮತ್ತು ಆಸ್ಪತ್ರೆ ಆಟೋ ನಿಲ್ದಾಣಕ್ಕೆ ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಶುಭ ಹಾರೈಸಿದರು.