ತೀರ್ಥಹಳ್ಳಿ ಸಹಕಾರಿ ದಿಗ್ಗಜ ಬಿ. ಎಸ್.ವಿಶ್ವನಾಥ್ ಇನ್ನಿಲ್ಲ!
– ಅನಾರೋಗ್ಯದಿಂದ ಬೆಂಗಳೂರಲ್ಲಿ ವಿಧಿವಶ :ನಾಳೆ ಅಂತ್ಯಕ್ರಿಯೆ:
– ಸಹಕಾರಿ ನಾಯಕ ಮಂಜುನಾಥ ಗೌಡ, ವಿಜಯದೇವ ಸೇರಿ ಅನೇಕ ಗಣ್ಯರ ಸಂತಾಪ
NAMMUR EXPRESS NEWS
ತೀರ್ಥಹಳ್ಳಿ/ಬೆಂಗಳೂರು: ಹಿರಿಯ ಸಹಕಾರಿ ನಾಯಕ, ತೀರ್ಥಹಳ್ಳಿ ಮೂಲದ ಬಿ. ಎಸ್. ವಿಶ್ವನಾಥ್ ಬೆಂಗಳೂರಲ್ಲಿ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ಅವರು ಭಾನುವಾರ ವಿಧಿವಶರಾಗಿದ್ದಾರೆ. ತೀರ್ಥಹಳ್ಳಿ ಕಟ್ಟೆಹಕ್ಕಲು ಬಳಿಯ ಬಸರವಳ್ಳಿ ಮೂಲದ ವಿಶ್ವನಾಥ್ ತಮ್ಮ ಮಕ್ಕಳ ಜತೆ ಬೆಂಗಳೂರಲ್ಲಿ ನೆಲೆಸಿದ್ದರು. ಸಹಕಾರ ಕ್ಷೇತ್ರದಲ್ಲಿ ದೇಶದಲ್ಲೇ ತೀರ್ಥಹಳ್ಳಿ ಹೆಸರನ್ನು ಮೂಡಿಸಿದ್ದರು. ತೀರ್ಥಹಳ್ಳಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿ, ಜಿಲ್ಲಾ ಸಹಕಾರ, ರಾಜ್ಯ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಸೇವೆ ನೀಡಿದ್ದರು.
ತೀರ್ಥಹಳ್ಳಿಯಿಂದ ರಾಷ್ಟ್ರ ಮಟ್ಟಕ್ಕೆ..
1978ರಲ್ಲಿ ರಾಷ್ಟ್ರೀಯ ಸಹಕಾರ ಮಹಾ ಮಂಡಲ ಅಧ್ಯಕ್ಷರಾಗಿ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ರಾಜ್ಯ ಸಹಕಾರ ಮಹಾ ಮಂಡಲ ಅಧ್ಯಕ್ಷರು ಸೇರಿ ಅನೇಕ ಸಹಕಾರ ಹುದ್ದೆ ಅಲಂಕರಿಸಿದ್ದರು.
ಮಂಜುನಾಥ ಗೌಡ ಸಂತಾಪ
ರಾಜ್ಯ ಸಹಕಾರ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ನಮಗೆಲ್ಲ ಮಾರ್ಗದರ್ಶಕರಾಗಿದ್ದ ವಿಶ್ವನಾಥ್ ಅವರ ಸಾವು ತೀರ್ಥಹಳ್ಳಿ, ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಸಂತಾಪ ಸೂಚಿಸಿದ್ದಾರೆ.
ತೀರ್ಥಹಳ್ಳಿ ಟಿಎಪಿಸಿಎಂಎಸ್ ಸೇರಿ ಎಲ್ಲರಿಗೂ ಸಹಕಾರ
ತೀರ್ಥಹಳ್ಳಿ ಟಿಎಪಿಸಿಎಂಎಸ್ ಸಮುದಾಯ ಭವನದ ನಿರ್ಮಾಣಕ್ಕೆ ಎಲ್ಲಾ ಮಾರ್ಗದರ್ಶನ, ಸಾಲ ಸೌಲಭ್ಯವನ್ನು ಕೊಡಿಸುವಲ್ಲಿ ವಿಶ್ವನಾಥ ಅವರ ಸೇವೆ ಅಪಾರ. ತೀರ್ಥಹಳ್ಳಿ ದೊಡ್ಡ ಸಾಧಕನನ್ನು ಕಳೆದುಕೊಂಡಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಆರಗ ಸೇರಿ ಗಣ್ಯರ ಸಂತಾಪ
ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ವಿಜಯದೇವ್ ಸೇರಿದಂತೆ ಎಲ್ಲಾ ಸಹಕಾರಿಗಳು ಸಂತಾಪ ಸೂಚಿಸಿದ್ದಾರೆ.