Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಬಾಂಧವ್ಯ ಕ್ರಿಕೆಟ್ ಟ್ರೋಫಿ!

ತೀರ್ಥಹಳ್ಳಿಯಲ್ಲಿ ಬಾಂಧವ್ಯ ಕ್ರಿಕೆಟ್ ಟ್ರೋಫಿ!
– ಮಾ.1ರಿಂದ 3ರವರೆಗೆ ಲೀಗ್ ಮಾದರಿಯ ಕ್ರಿಕೆಟ್
– ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ : ಪೈವ್ ಒ ಕ್ಲಾಕ್ ಕ್ರಿಕೆಟರ್ಸ್ ತೀರ್ಥಹಳ್ಳಿ ಇವರ ವತಿಯಿಂದ ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಮಾರ್ಚ್ 1ರಿಂದ 3ರವರೆಗೆ ಮಲೆನಾಡಿನ ಅಹ್ವಾನಿತ ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 1ಲಕ್ಷ ರೂ. ಹಾಗೂ ದ್ವಿತೀಯ ಬಹುಮಾನ 75000 ರೂ ನಗದು ಬಹುಮಾನ ಕೊಡಲಾಗುವುದು. ಆಯೋಜಕರಾದ ರವಿ ಕಡ್ತೂರು ಅವರು ಮಾತನಾಡಿ, ನಾವೆಲ್ಲರೂ ಆಟದ ಮೈದಾನದಲ್ಲಿ ಜಾತಿ, ಧರ್ಮ, ವರ್ಗಗಳನ್ನೆಲ್ಲ ಬಿಟ್ಟು ಬಾಂಧವ್ಯದಿಂದ ಇರುತ್ತೇವೆ. ಆದರೆ ಮೈದಾನದ ಹೊರಗೆ ಬಂದ ಮೇಲೆ ಮತ್ತೆ ಪರಸ್ಪರ ಗೋಡೆ ನಿರ್ಮಾಣ ಮಾಡಿಕೊಳ್ಳುತ್ತೇವೆ. ಸಮಾಜದಲ್ಲಿ ಹೀಗೆ ಆಗಬಾರದು ಮೈದಾನದ ಹೊರಗೂ ನಾವೆಲ್ಲ ಬಾಂಧವ್ಯದಿಂದ ಇರಬೇಕೆಂದು ಆಶಿಸಿ ಈ ಟ್ರೋಫಿಗೆ ಬಾಂಧವ್ಯ ಟ್ರೋಫಿ ಎಂದು ಹೆಸರಿಟ್ಟಿದ್ದೇವೆ ಎಂದರು.

ಸರ್ವರಲ್ಲೂ ಭಾಂದವ್ಯ ಮೂಡಿಸುವ ಸಲುವಾಗಿ ದಿನದ ಆಟ ಮುಗಿದು ನಂತರ ಸಾಂಸ್ಕೃತಿಕ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 1 ರಂದು ಬೆಳಗ್ಗೆ 9 ಗಂಟೆಗೆ ಟೂರ್ನಿ ಆರಂಭವಾಗಿ ಮಾರ್ಚ್ 2ರಂದು 6:30ಕ್ಕೆ ಸರ್ವ ಧರ್ಮ ಗುರುಗಳಿಂದ ಉಪನ್ಯಾಸ ಏರ್ಪಡಿಸಲಾಗಿದೆ. ಶ್ರೀ ಅಭಿನವ ಚನ್ನಬಸವ ಸ್ವಾಮೀಜಿಗಳು, ಶ್ರೀ ಶಂಸುದ್ದಿನ್ ಸಾಖಫಿ ಎಂ ಆರ್, ಎಂಡಿಎಹೆಚ್ ಇಸಿ ಫೌಂಡೇಶನ್ ಇಂಡಿಯಾ, ಶ್ರೀ ಪೌಲ್ ಕ್ರಾಸ್ತ ಸಹಾಯಕ ಗುರುಗಳು, ಲೂರ್ದು ಮಾತೆ ದೇವಾಲಯ ತೀರ್ಥಹಳ್ಳಿ ಇವರು ಉಪನ್ಯಾಸ ನೀಡುವರು. ಶಿವಮೊಗ್ಗ ಜಿಲ್ಲೆ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕ್ರಿಕೆಟ್ ಜತೆಗೆ ಸಮಾಜ ಸೇವೆ!

ಮಾ.2ರಂದು ಸಂಜೆ ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ತಂಡದಿಂದ ಗಿರಾಕಿಯೇ ಇಲ್ಲ ಮಾರಾಯ ಎಂಬ ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ. ಮತ್ತು ರಾಜ್ಯ ಪ್ರಶಸ್ತಿ ವಿಜೇತೆ ಎದೆ ತುಂಬಿ ಹಾಡುವೆನು ಖ್ಯಾತಿಯ ಉಷಾ ಬಾಳೆಬೈಲು ಅವರಿಂದ ಸಂಗೀತ ಗಾಯನ. ಸೆಕ್ಷನ್ ಬಿ ಹರ್ಷಿತ ಸೆಕ್ಷನ್ 8 ಡ್ಯಾನ್ಸ್ ಶಾಲೆ ಇವರಿಂದ ನೃತ್ಯ ಹಾಗೂ ಭಾಂದವ್ಯ ತಂಡದಿಂದ ಸಾಮಾಜಿಕ ಕಾರ್ಯಕ್ರಮಗಳಾದ ಮಾಜಿ ಯೋಧರಿಗೆ ಗೌರವ ಸಮರ್ಪಣೆ, ಸರ್ಕಾರಿ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಸಾಮಾಜಿಕ ಸೇವೆಯಲ್ಲಿ ಕೊಡುಗೆ ನೀಡಿದವರಿಗೆ ಗೌರವ ಸಮರ್ಪಣೆ, ಕ್ರೀಡಾ ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹಾಗೂ ಮಾರ್ಚ್ 3ರ ಸಂಜೆ ಸಮರೂಪ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸರ್ಫರಾಜ್ ಅಹಮದ್, ತನ್ವೀರ್ ಅಹಮದ್, ಸುಜಿತ್ ಸಾಲಿಯಾನ್, ಶರತ್ ಸಾಲೂರು, ಇಲಿಯಾಜ್, ವಿನಯ್, ಮಣಿಕಂಠ, ಸುಭಾಷ್, ಸುಬೇದ್, ಹಲೀಂ, ಸಲೀಂ, ಅಕ್ಷಯ್, ಹೆಗ್ಗಾರ್ ಮಣಿಕಂಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.