Categories
ತೀರ್ಥಹಳ್ಳಿ

ಆನ್ಲೈನ್ ಆಟದ ಚಟಕ್ಕೆ ಗ್ರಾಹಕರ ಕೋಟಿ ಕೋಟಿ ಹಣ ಸ್ವಾಹ ಮಾಡಿದ ಬ್ಯಾಂಕ್ ಸಿಬ್ಬಂದಿ!

ಆನ್ಲೈನ್ ಆಟದ ಚಟಕ್ಕೆ ಗ್ರಾಹಕರ ಕೋಟಿ ಕೋಟಿ ಹಣ ಸ್ವಾಹ ಮಾಡಿದ ಬ್ಯಾಂಕ್ ಸಿಬ್ಬಂದಿ!
– ತೀರ್ಥಹಳ್ಳಿಯಲ್ಲಿ ನಡೆದ ಘಟನೆ: ಆತ್ಮಹತ್ಯೆ ಯತ್ನ
– ಗೇಮ್ ಆಡಲು ಬ್ಯಾಂಕ್ ಅನ್ನೇ ಬಳಸಿಕೊಂಡ!

NAMMUR EXPRESS NEWS
ಸಾಗರ/ತೀರ್ಥಹಳ್ಳಿ: ಸಾಗರದಲ್ಲಿ ಶುಕ್ರವಾರ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿ ಕತ್ತು ಕೈ ಕೊಯ್ದುಕೊಂಡ ವ್ಯಕ್ತಿ ತೀರ್ಥಹಳ್ಳಿ ಮೂಲದ ಆರಗದವರು ಎನ್ನಲಾಗಿದೆ. ಇನ್ನೊಂದು ಅಚ್ಚರಿ ಎಂದರೆ ಈತ ಬ್ಯಾಂಕ್ ಉದ್ಯೋಗಿಯಾಗಿದ್ದು ತನ್ನ ಆನ್ಲೈನ್ ಗೇಮ್ ಚಟಕ್ಕೆ ಗ್ರಾಹಕರ ಕೋಟಿ ಕೋಟಿ ಹಣ ಬಳಸಿಕೊಂಡು ಆತನ ಎಲ್ಲಾ ಗೋಲ್ಮಾಲ್ ಈಗ ಬೆಳಕಿಗೆ ಬರುತ್ತಿದೆ. ಈ ಬಗ್ಗೆ ಎಲ್ಲೆಡೆ ಚರ್ಚೆ ಕೇಳಿಸುತ್ತಿದೆ. ಸುನಿಲ್ ಎಂಬುವವರು ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕ್ ಉದ್ಯೋಗಿಯಾಗಿದ್ದು, ಬ್ಯಾಂಕ್ ನಲ್ಲಿ ಕೋಟ್ಯಾಂತರ ರೂ ಹಣವನ್ನ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ವರದಿ ಈಗ ಬರುತ್ತಿದೆ. ತಮ್ಮ ಆನ್ಲೈನ್ ಆಟದ ಹುಚ್ಚಿಗೆ ಸುಮಾರು ಗ್ರಾಹಕರ ಕೋಟಿ ಕೋಟಿ ಹಣ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತ ಸಾಗರದ ಖಾಸಗಿ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಪರಿಸ್ಥಿತಿ ಗಂಭೀರವಾಗಿದೆ.

ಈತ ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಹಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಕೋಣಂದೂರು, ಯಡೂರು, ತೀರ್ಥಹಳ್ಳಿ ಸೇರಿದಂತೆ ಅನೇಕ ಶಾಖೆಗಳಲ್ಲಿ ತಮ್ಮ ಬ್ರಾಂಚ್ ಗ್ರಾಹಕರ ಹಣವನ್ನು ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ. ಈತ ರಮ್ಮಿ ಸೇರಿದಂತೆ ಆನ್ಲೈನ್ ಆಟಗಳಿಗೆ ಈ ಹಣವನ್ನು ಬಳಕೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಹೊರಬರುತ್ತಿದೆ. ಪೊಲೀಸ್ ರಿಂದ ಇನ್ನಷ್ಟು ಮಾಹಿತಿ ಹೊರಬರಲಿದೆ.

ತೀರ್ಥಹಳ್ಳಿಗೆ ಬಂದ ಬ್ಯಾಂಕ್ ಹಾಗೂ ಸಿಐಡಿ ಟೀಮ್!?

ಸುನೀಲ್ ಅವ್ಯವಹಾರ ಹಾಗೂ ಗ್ರಾಹಕರ ಸುಮಾರು 10 ಕೋಟಿ ಹಣ ವಂಚನೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ. ಈ ನಡುವೆ ಬ್ಯಾಂಕ್ ಉನ್ನತ ಅಧಿಕಾರಿಗಳು ಹಾಗೂ ಪೊಲೀಸ್ ತಂಡ ತೀರ್ಥಹಳ್ಳಿಗೆ ಆಗಮಿಸಿ ತನಿಖೆ ನಡೆಸುತ್ತಿದೆ.

ಆನ್ಲೈನ್ ಗೇಮ್ ಚಟಕ್ಕೆ ಅನೇಕರ ಬದುಕು ಬಲಿ!

ರಾಜ್ಯದಲ್ಲಿ ಅನೇಕರು ಈಗಾಗಲೇ ಈ ರಮ್ಮಿ ಹಾಗೂ ಆನ್ಲೈನ್ ಆಟಗಳ ವ್ಯಾಮೋಹಕ್ಕೆ ಬಿದ್ದು ಚಟವನ್ನು ಅಂಟಿಸಿಕೊಂಡು ಅನೇಕ ಜನರ ಬದುಕನ್ನ ಹಾಳು ಮಾಡುತ್ತಿರುವ ನಡುವೆ ಈ ಪ್ರಕರಣ ಮಹತ್ವ ಪಡೆದುಕೊಂಡಿದೆ. ಇನ್ನು ಆನ್ಲೈನ್ ಆಟಗಳನ್ನು ಸರ್ಕಾರ ನಿಷೇಧ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಈ ಬಗ್ಗೆ ಗಮನ ವಹಿಸಬೇಕೆಂದು ಇಲ್ಲವಾದರೆ ಅನೇಕ ದುರಂತಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.