ಬಸವಾನಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸೇವೆ ಹೆಜ್ಜೆ!
– ಸಂಘದಿಂದ ಹಲವಾರು ಸಮಾಜಮುಖಿ ಸೇವಾ ಕಾರ್ಯ: ತಂಡದ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ
– ಒಂದಲ್ಲ ಒಂದು ಕಡೆ ಸಮಸ್ಯೆಗೆ ಸ್ಪಂದನೆ
NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬಿ. ಸಿ. ಟ್ರಸ್ಟ್ ತೀರ್ಥಹಳ್ಳಿ ತಾಲೂಕು ಇವರ ಸಹಬಾಗಿತ್ವದಲ್ಲಿ ಬಸವಾನಿ ಶೌರ್ಯ ವಿಪತ್ತು ನಿರ್ವಹಣಾ ತಂಡ ತಾಲೂಕಿನಲ್ಲೇ ತಮ್ಮ ಅಮೂಲ್ಯ ಸೇವೆ ಮೂಲಕ ಮಾದರಿಯಾಗಿದೆ. ಅಧ್ಯಕ್ಷರಾದ ಹೊಳೆಗದ್ದೆ ಮಂಜುನಾಥ, ಸದಸ್ಯರುಗಳಾದ ನಾಗರಾಜ, ಶಂಕರ, ಆದಿತ್ಯ, ಅಶ್ವತ, ಸುಧಾಕರ, ಗಿರೀಶ, ಉದಯ, ನಾರಾಯಣ, ಭರತ, ಚಂದ್ರಶೇಖರ, ಕಿರಣ, ರಾಘವೇಂದ್ರ, ಸುನಿಲರವರ ತುಂಬಾ ಉತ್ಸಾಹಿ ಯುವಕರ ತಂಡವು ಕಳೆದ 4 ತಿಂಗಳಿನಿಂದ ಪ್ರಾರಂಭಗೊಂಡಿದ್ದು, ಈಗ ಸುತ್ತಮುತ್ತಲಿನ ಊರಿಗೆ ಸಹಾಯ ಮಾಡುತ್ತಿದೆ.
ಸಾರ್ವಜನಿಕ ಕೆಲಸ ದೇವರ ಕೆಲಸ!
ಹಾರೋಗೋಳಿಗೆ, ಹೊಸ ಅಗ್ರಹಾರ, ಹರಳಿಮಠ, ಸುತ್ತಮುತ್ತಲಿನ ಗ್ರಾಮಗಳಲ್ಲಿ, ಮಳೆಗೆ ಹಾನಿ ಆದವರಿಗೆ ಸಹಾಯ ಮಾಡುವುದು, ಸಾರ್ವಜನಿಕ ರಸ್ತೆಗಳ ದುರಸ್ತಿ ಮಾಡುವುದು, ವಿಶೇಷವಾಗಿ ಶಾಲಾಮಕ್ಕಳಿಗೆ, ಅಂಗನವಾಡಿ ಮಕ್ಕಳಿಗೆ ನೋಟ್ಸ್ ಬುಕ್ಸ್ ವಿತರಣೆ, ಪೆನ್, ಪೆನ್ಸಿಲ್ ವಿತರಣೆ, ಕಲಿಕಾ ಸಾಮಾಗ್ರಿಗಳ ವಿತರಣೆ, ಶಾಲಾ ಸ್ವಚ್ಛತೆ, ಅಂಗನವಾಡಿಗಳ ಸ್ವಚ್ಛತೆ, ದೇವಸ್ಥಾನಗಳ ಸ್ವಚ್ಛತೆ, ಶಾಲಾ ಆವರದಲ್ಲಿ, ಅಂಗನವಾಡಿ ಆವರಣದಲ್ಲಿ, ದೇವಸ್ಥಾನದ ಆವರಣದಲ್ಲಿ, ಗಿಡಗಳನ್ನು ನೆಡುವುದು, ಗ್ರಾಮಪಂಚಾಯ್ತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಮದ್ಯವ್ಯಸನಿಗಳಿಗೆ ಹಣ್ಣು ಹಂಪಲುಗಳನ್ನು ಹಂಚುವುದು, ಸಾರ್ವಜನಿಕ ಕಾರ್ಯಕ್ರಮದ ಅನ್ನಸಂತರ್ಪಣೆಗೆ ಸಿಹಿ ಹಂಚುವುದು, ಹೀಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಹೊಸ ಅಗ್ರಹಾರ, ಹರಳಿಮಠ, ಹಾರೋಗೋಳಿಗೆಯ ಸುತ್ತಮುತ್ತಲಿನ ಭಾಗದಲ್ಲಿ ಮಾದರಿ ಸೇವಾಸಂಸ್ಥೆಯಾಗಿ ಬಸವಾನಿ ಶೌರ್ಯ ವಿಪತ್ತು ನಿರ್ವಹಣಾ ತಂಡ ಹೊರಹೊಮ್ಮಿದೆ. ತಂಡದ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.