ಡಾ.ಗಣೇಶ್ ನಾಯಕ್ ಅವರಿಗೆ ಪಿತೃ ವಿಯೋಗ
– ಹಿರಿಯ ವೈದ್ಯ ಮಂಜುನಾಥ್ ರಾವ್ ವಿಧಿವಶ
– ಇಂದು ತೀರ್ಥಹಳ್ಳಿಯಲ್ಲಿ ಅಂತ್ಯಕ್ರಿಯೆ
NAMMUR EXPRESS NEWS
ತೀರ್ಥಹಳ್ಳಿ ವಿಶ್ರಾಂತ ವೈದ್ಯರೂ ಜಿ.ಎಸ್.ಬಿ ಸಮಾಜದ ಹಿರಿಯರೂ, ಕಿರಣ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಗಣೇಶ್ ನಾಯಕ್ ಅವರ ತಂದೆಯವರಾದ ಡಾ.ಮಂಜುನಾಥ್ ರಾವ್ ಅವರು ಬುಧವಾರ ಬೆಳಿಗ್ಗೆ 3:30ಕ್ಕೆ ತೀರ್ಥಹಳ್ಳಿಯಲ್ಲಿರುವ ಕಿರಣ್ ಆಸ್ಪತ್ರೆಯ ಅವರ ನಿವಾಸದಲ್ಲಿ ದೈವಾಧೀನರಾಗಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 3:00 ಘಂಟೆಗೆ ತೀರ್ಥಹಳ್ಳಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದ ಮೂಲದವರು ತಿಳಿಸಿದ್ದಾರೆ.