Categories
ತೀರ್ಥಹಳ್ಳಿ

ತಾಮ್ರ ಹಂಡೆ, ಅಡಿಕೆ, ಪಾತ್ರೆ, ಗ್ಯಾಸ್ ಕಳ್ಳರಿದ್ದಾರೆ ಹುಷಾರ್!

ತಾಮ್ರ ಹಂಡೆ, ಅಡಿಕೆ, ಪಾತ್ರೆ, ಗ್ಯಾಸ್ ಕಳ್ಳರಿದ್ದಾರೆ ಹುಷಾರ್!

– ತೀರ್ಥಹಳ್ಳಿ, ಹೊಸನಗರ ತಾಲೂಕಲ್ಲಿ ಪುಡಿ ಕಳ್ಳರ ಕಾಟ
– ದೇವಂಗಿ ಬಳಿ ಅಂಗನವಾಡಿಯಲ್ಲಿ ಸಿಲಿಂಡರ್ ಕಳ್ಳತನ..!
– ಮನೆ ಬಿಟ್ಟು ಹೋಗುವಾಗ ಹುಷಾರ್… ಹುಷಾರ್..!

NAMMUR EXPRESS NEWS

ಹೊಸನಗರ/ತೀರ್ಥಹಳ್ಳಿ: ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನ ಹಲವೆಡೆ ಇತ್ತೀಚಿಗೆ ಪುಡಿ ಕಳ್ಳರ ಹಾವಳಿ ಹೆಚ್ಚಾಗಿದೆ.

ಹೊಸನಗರ ತಾಲೂಕು ಕಟ್ಟೆ ಕೊಪ್ಪ ಗ್ರಾಮದ ಹಾಲಿಗೆಯ ಕೆಪಿಸಿ ಇಂಜಿನಿಯರ್ ಆಗಿರುವ ಬಾಪು ಸಾಹೇಬ್ ಅವರ ಮನೆಯಲ್ಲಿ ಸೋಮವಾರ ರಾತ್ರಿ ಕಳ್ಳತನವಾಗಿದೆ. ಅಚ್ಚರಿ ಎಂದರೆ ಕಳ್ಳರು ಮನೆಯಲ್ಲಿದ್ದ ಎಲ್ಲಾ ಸಣ್ಣಪುಟ್ಟ ವಸ್ತುಗಳನ್ನು ಕೂಡ ಕದ್ದಿದ್ದಾರೆ.

15 ಕೆಜಿ ಗೋಟ್ ಅಡಿಕೆ, ಹತ್ತು ಕೆಜಿ ತಾಮ್ರದ ಹಂಡೆ, ಅಡುಗೆ ಪಾತ್ರೆಗಳು, ಗ್ಯಾಸ್ ಸ್ಟವ್ ಸೇರಿ ಎಲ್ಲಾ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರಿಂದ ಸ್ಥಳ ಪರಿಶೀಲನೆ ಆಗಿದ್ದು, ಮನೆಯ ಹಂಚು ತೆಗೆದು ಕಳ್ಳತನ ಮಾಡಲಾಗಿದೆ.

ದೇವಂಗಿ ಬಳಿ ಅಂಗನವಾಡಿಯಲ್ಲಿ ಸಿಲಿಂಡರ್ ಕಳ್ಳತನ..!

ತೀರ್ಥಹಳ್ಳಿ ತಾಲೂಕು ದೇವಂಗಿ ಬಳಿ ಅಂಗನವಾಡಿಯಲ್ಲಿ ಇತ್ತೀಚಿಗೆ ಕಳ್ಳರು ಸಿಲಿಂಡರ್ ಕಳವು ಮಾಡಿದ್ದಾರೆ. ತೀರ್ಥಹಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.