Categories
ತೀರ್ಥಹಳ್ಳಿ

ಭೀಮನಕಟ್ಟೆಯಲ್ಲಿ ಭೀಮನ ಅಮಾವಾಸ್ಯೆ ರಂಗು!

ಭೀಮನಕಟ್ಟೆಯಲ್ಲಿ ಭೀಮನ ಅಮಾವಾಸ್ಯೆ ರಂಗು!
* ನೂರಾರು ದಂಪತಿಗಳಿಂದ ಭೀಮೇಶ್ವರನಿಗೆ ಪೂಜೆ
* ಜಿಟಿ ಜಿಟಿ ಮಳೆಯಲ್ಲಿ ದಂಪತಿಗಳ ಪ್ರದಕ್ಷಣೆ
* ಗಂಡನ ಪಾದ ತೊಳೆದು ವಿಶೇಷ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಪುರಾಣ ಪ್ರಸಿದ್ಧ ಭೀಮನ ಕಟ್ಟೆಯಲ್ಲಿ ಭೀಮೇಶ್ವರ ಪೂಜೆ ಅದ್ದೂರಿಯಾಗಿ ನಡೆಯುತ್ತಿದೆ. ಈ ಭೀಮನ ಅಮಾವಾಸ್ಯೆಯು ಆಷಾಢ ಮಾಸದ ಕೊನೆಯ ಅಮಾವಾಸ್ಯೆ ದಿನ ದಂದು ಬರುತ್ತದೆ. ಇದಕ್ಕೆ ಕೊಡೆ ಅಮಾವಾಸ್ಯೆ ಎಂದು ಸಹ ಕರೆಯಲಾಗುತ್ತದೆ.
ಈ ಬಾರಿ ಭೀಮನ ಕಟ್ಟೆಯಲ್ಲಿ ನವ ದಂಪತಿಗಳು ಹೆಚ್ಚಾಗಿ ಕಂಡು ಬಂದರು. ಭೀಮನ ಅಮಾವಾಸ್ಯೆ ದಿನ ದಂಪತಿಗಳು ಶಿವ ಪಾರ್ವತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅರ್ಧಾಂಗಿಯು ತನ್ನ ಪತಿಗೆ ಸದ ಕಾಲ ವಿಶ್ವಾಸಿಯಾಗಿ ಶ್ರೇಯೋಭಿಲಾಶಿಯಾಗಿ ಬಾಳುತ್ತೇನೆ ಎಂದು ಮಾತುಕೊಡುತ್ತಾಳೆ.
ಜೀವನ ಪರ್ಯಂತ ನಿನ್ನ ನೆರಳಾಗಿ ನೀನು ಅಭಿವೃದ್ಧಿ ಹೊಂದುವಾಗ ನಿನ್ನ ಹಿಂದೆ ನೆರಳಾಗಿ, ಕಷ್ಟದ ಕಾಲದಲ್ಲಿ ಜೊತೆಗೆ ಹೆಜ್ಜೆಯಾಗಿ, ವಯಸ್ಸಾದಾಗ ತಾಯಿ ಹಾಗೆ ಮುಂದೆ ನಿಂತು ನಡೆಯುತ್ತೇನೆ ಎಂದು ಭಾಷೆ ಕೊಡುತ್ತಾಳೆ. ಪತಿಯು ತನ್ನ ಪತ್ನಿಗೆ ದೀರ್ಘ ಸುಮಂಗಲಿ ಭವ ಎಂದು ಆಶೀರ್ವಾದ ಹಾಗೂ ಸದಾಕಾಲ ನಿನ್ನನ್ನು ಕಾಪಾಡುತ್ತೇನೆ ಎಂದು ಅಭಯವನ್ನು ನೀಡುತ್ತಾನೆ. ಹಾಗೆಯೇ ಇಲ್ಲಿಯೂ ಆಚರಣೆ ನಡೆಯಿತು. ಮನೆ ಮನೆಯಲ್ಲೂ ವಿಶೇಷ ಪೂಜೆ ನಡೆಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.