Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಬಿಂಬ ಬಿಂಬನ ಪುಸ್ತಕದ ಸಂವಾದ

ತೀರ್ಥಹಳ್ಳಿಯಲ್ಲಿ ಬಿಂಬ ಬಿಂಬನ ಪುಸ್ತಕದ ಸಂವಾದ

– ಜೂನ್ 17ರ ಸಂಜೆ 6 ಗಂಟೆಗೆ ಕಾರ್ಯಕ್ರಮ: ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ

– ನಮ್ಮೂರ್ ಸಾಧಕ ಕಾಸರವಳ್ಳಿ ಗಿರೀಶ್ ಚಿತ್ರಗಳ ಸಂಕಥನ ʼಬಿಂಬ ಬಿಂಬನʼ

NAMMUR EXPRESS NEWS
ತೀರ್ಥಹಳ್ಳಿ : ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಕಾಸರವಳ್ಳಿ ಗಿರೀಶ್ ಚಿತ್ರಗಳ ಸಂಕಥನ ʼಬಿಂಬ ಬಿಂಬನʼ ಪುಸ್ತಕದ ಸಂವಾದ ಕಾರ್ಯಕ್ರಮವು ಜೂನ್ 17ರ ಸಂಜೆ 6 ಗಂಟೆಗೆ ತೀರ್ಥಹಳ್ಳಿಯ ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವಮಿತ್ರರು ತಂಡದ ಅಧ್ಯಕ್ಷ ಟಿ.ವಿ.ಶ್ರೀಪಾದ ತಿಳಿಸಿದ್ದಾರೆ.
ಕಾಸರವಳ್ಳಿ ಗಿರೀಶ್ ಅವರ ಎಲ್ಲಾ ಚಲನಚಿತ್ರಗಳ ಕುರಿತು ಪುಸ್ತಕ ಬೆಳಕು ಚೆಲ್ಲುತ್ತದೆ. ಕ್ರೀಯಾತ್ಮಕ ಚಿತ್ರೀಕರಣ, ತಯಾರಿ, ಓದು, ಸ್ಥಳ ಆಯ್ಕೆ ಸೇರಿದಂತೆ ಅನೇಕ ವಿಚಾರಗಳನ್ನು ಒಳಗೊಂಡಿದೆ. ಯುವಮಿತ್ರರು, ನಟಮಿತ್ರರು ಹವ್ಯಾಸಿ ಕಲಾ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಯಕ್ಷಭೂಮಿ, ಬ್ರಾಹ್ಮಣ ಸಂಘದ ಸಹಕಾರದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಆರಗ ಜ್ಞಾನೇಂದ್ರ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಧ್ಯಾಪಕ ಜಯಪ್ರಕಾಶ ಮಾವಿನಕುಳಿ, ಉಪನ್ಯಾಸಕಿ ದೀಪಾ ಹಿರೇಗುತ್ತಿ ಆಗಮಿಸಲಿದ್ದಾರೆ. ಖ್ಯಾತ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ, ಗಿರೀಶ್ ಕಾಸರವಳ್ಳಿ, ಲೇಖಕ ಗೋಪಾಲಕೃಷ್ಣ ಪೈ, ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಸಾಹಿತಿ ಬಿ.ಗಣಪತಿ, ಚಿತ್ರ ಸಂಸ್ಥೆಯ ಕೆ.ಟಿ. ನಾಗರಾಜ್ ಉಪಸ್ಥಿತಿ ಇದೆ ಎಂದು ತಿಳಿಸಿದರು.
ಸಂಯೋಜಕ ಚೇತನ್ ಜಿ. ಮಾತನಾಡಿ, ತೀರ್ಥಹಳ್ಳಿಯ ಕಲಾವಿದರೇ ಅನ್ವೇಷಣೆ ಚಿತ್ರ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಸ್ಥಳೀಯ ಕಲಾವಿದರನ್ನು ಸೇರಿಸಿಕೊಂಡು ಚಿತ್ರ ನಿರ್ಮಿಸುವ ಉದ್ದೇಶ ಹೊಂದಿದೆ. ಸಾಹಿತ್ಯದ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಮಲೆನಾಡು ಪ್ರಚಲಿತಕ್ಕೆ ತರುವ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಯುವಮಿತ್ರರು ತಂಡದ ಉಪಾಧ್ಯಕ್ಷ ನಿರಂಜನ ಪವಾರ್, ಕಾರ್ಯದರ್ಶಿ ನಿರಂಜನ ವಿ, ಸಂಘಟಕ ಶಿವಕುಮಾರ್ ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.