ಲೋಕ ಸಮರಕ್ಕೆ ತೀರ್ಥಹಳ್ಳಿಯಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿ!
– 28 ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು: ಶಾಸಕ ಜ್ಞಾನೇಂದ್ರ
– ಹೈಕಮಾಂಡ್ ಸಂದೇಶವನ್ನು ಚಾಚು ತಪ್ಪದೇ ಪ್ರಾಮಾಣಿಕವಾಗಿ ದುಡಿಯುತ್ತೇವೆ: ಜೆಡಿಎಸ್ ಅಧ್ಯಕ್ಷ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಲಿದೆ.
ತೀರ್ಥಹಳ್ಳಿಯ ನೂತನ ಬಿಜೆಪಿ ಕಚೇರಿಯಲ್ಲಿ ಗುರುವಾರ ಬಿಜೆಪಿ ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಲು ಸಿದ್ಧವಾಗಿದ್ದು ಶಾಸಕ ಆರಗ ಜ್ಞಾನೇಂದ್ರ ಹಾಗೂ ಎಲ್ಲಾ ಬಿಜೆಪಿ ನಾಯಕರು, ಜೆಡಿಎಸ್ ಅಧ್ಯಕ್ಷರಾದ ಕುಣಜೆ ಕಿರಣ್ ಪ್ರಭಾಕರ್ ಸೇರಿ ಎರಡು ಪಕ್ಷದ ಗಣ್ಯರು ಹಾಜರಿದ್ದರು. ಪತ್ರಿಕಾಗೋಷ್ಠಿಯಲ್ಲಿ ಆರಗ ಜ್ಞಾನೇಂದ್ರ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ನಾಯಕರು ಪ್ರೆಸ್ ಮೀಟ್ ನಡೆಯುತ್ತಿದೆ. ಈ ಚುನಾವಣೆ ಮೋದಿಯವರ ಚುನಾವಣೆ 28 ಕ್ಷೇತ್ರಕ್ಕೆ 28 ಕ್ಷೇತ್ರವನ್ನು ಗೆಲ್ಲಿಸಲೇಬೇಕು. ಜಿಲ್ಲೆ ಹಾಗೂ ತಾಲೂಕು ಹಾಗೂ ಬೂತ್ ಮಟ್ಟದಲ್ಲಿ ಎರಡು ಪಕ್ಷದ ಕಾರ್ಯಕರ್ತರ ಸಮನ್ವಯತೆ ಹಾಗೂ ವಿಶ್ವಾಸದಿಂದ ಈ ಚುನಾವಣೆಯನ್ನು ನಡೆಸುವಂತ ಸಂಕಲ್ಪವನ್ನು ನಾವು ತೊಟ್ಟಿದ್ದೇವೆ ಎಂದರು.
ಹತ್ತು ವರ್ಷಗಳ ಮೋದಿಯ ಆಡಳಿತದಲ್ಲಿ ಈ ದೇಶ ಜನರಿಗೆ ಸುರಕ್ಷತೆಯನ್ನು ಕೊಟ್ಟಿದೆ. ಜಗತ್ತಿನ ಮೂರನೇ ಅತಿ ದೊಡ್ಡ ಬಲಶಾಲಿಯಾದಂತ ಸೈನ್ಯವನ್ನು ಕಟ್ಟಿದ್ದೇವೆ. ರೈಲ್ವೆ, ವಿಮಾನ ನಿಲ್ದಾಣಗಳು, ಕೋವಿಡ್ ನಲ್ಲೂ ಕೂಡ ಜನರಿಗೆ ವ್ಯಾಕ್ಸಿನ್ ಅನ್ನು ಉಚಿತವಾಗಿ ಕೊಟ್ಟು ರಕ್ಷಣೆಯನ್ನು ಕೊಟ್ಟಿರುವುದು ಹೀಗೆ ಅನೇಕ ಜನಪರ ಕೆಲಸವನ್ನು ಬಿಜೆಪಿ ಮಾಡಿದೆ ಎಂದರು.
ರಾಜ್ಯದಲ್ಲಿ ಕಳೆದ ಬಾರಿ ಜನರಿಗೆ ಆಮಿಷ ಒಡ್ಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಅದರಲ್ಲಿ ಸಾಧನೆ ಏನಿಲ್ಲ, ಬಿಜೆಪಿ ವಿರೋಧ ಪಕ್ಷದಲ್ಲಿ ಇದೆ. ಅಭಿವೃದ್ಧಿಯನ್ನು ಬಲಿ ಕೊಟ್ಟು ಅಧಿಕಾರದಲ್ಲಿ ಕಾಂಗ್ರೆಸ್ ಕೂತಿದೆ, ಕಳೆದ ಒಂಬತ್ತು ತಿಂಗಳಲ್ಲಿ ಒಂಬತ್ತು ಪೈಸೆಯೂ ಕೂಡ ಬಂದಿಲ್ಲ. ಕುತಂತ್ರ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಆರ್ಥಿಕ ಸ್ಥಿತಿ ದಿವಾಳಿ ಎದ್ದು ಹೋಗಿದೆ. ಕರ್ನಾಟದಲ್ಲಿ ಬರದಲ್ಲಿ ನೀರು ಕೊಡಲು ಆಗದೇ ಕೇಂದ್ರ ಸರಕಾರದ ವಿರುದ್ಧ ಮಾತಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರವನ್ನು ಗೆಲ್ಲುತ್ತೇವೆ. ಕಳೆದ ಬಾರಿ 26 ಕ್ಷೇತ್ರವನ್ನು ಗೆದ್ದಿದ್ದೆವು. ಈ ಬಾರಿ 28 ಕ್ಷೇತ್ರವನ್ನು ಗೆಲ್ಲಿಸಿ ಮೋದಿ ಕೈ ಬಲಪಡಿಸೋಕೆ ತಯಾರಾಗಿದ್ದೇವೆ. ಜಿಲ್ಲೆಗೆ ಸಾವಿರಾರು ಕೋಟಿ ತಂದು ಬಿ ವೈ ರಾಘವೇಂದ್ರ ಅಭಿವೃದ್ಧಿ ಮಾಡಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸೋಣ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್ ಮಾತನಾಡಿ, ಪ್ರಧಾನ ಮಂತ್ರಿಗಳು ಹಾಗೂ ಮಾಜಿ ಪ್ರಧಾನ ಮಂತ್ರಿಗಳು ಸೇರಿ ತೆಗೆದುಕೊಂಡ ನಿರ್ಣಯ ಇದಾಗಿದೆ. ದೇಶಕ್ಕೆ ಬಿಜೆಪಿಯಿಂದ ಸಾಕಷ್ಟು ಒಳ್ಳೆಯ ಅಭಿವೃದ್ಧಿ ಕಾರ್ಯಗಳು ಆಗಿದೆ. ಒಂದು ಒಳ್ಳೆಯ ನಾಯಕತ್ವವನ್ನು ಬಿಜೆಪಿ ದೇಶಕ್ಕೆ ಕೊಡುಗೆಯಾಗಿ ನೀಡಿರುವುದರಿಂದ ಬಿಜೆಪಿಯನ್ನು ಪ್ರಬಲವಾಗಿದೆ. ನಾವೆಲ್ಲರೂ ಈ ಬಾರಿ ಬಿಜೆಪಿಯ ನಾಯಕತ್ವವನ್ನು ನೋಡಿ, ರಾಘವೇಂದ್ರ ಅವರಿಗೆ ಮತ ನೀಡೋಣ. ಹೈಕಮಾಂಡ್ ಸಂದೇಶವನ್ನು ಚಾಚು ತಪ್ಪದೇ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ಅಧ್ಯಕ್ಷರಾದ ನವೀನ್ ಹೆದ್ದೂರು, ಜೆಡಿಎಸ್ ನಾಯಕರಾದ ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿಯಾದ ಗುರುದತ್ತ್, ಜೆಡಿಎಸ್ ಮಹಿಳಾ ವಿಭಾಗದ ಅಧ್ಯಕ್ಷರಾದ ಶೈಲಾ ನಾಗರಾಜ್, ಪಕ್ಷದ ಮುಖಂಡರಾದ ಸಾಲೆಕೊಪ್ಪ ರಾಮಚಂದ್ರ, ಚಂದುವಳ್ಳಿ ಸೋಮಶೇಖರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ್, ಬಿಜೆಪಿ ಹಿಂದುಳಿದ ಮೋರ್ಚಾದ ನಾಯಕರಾದ ಬೇಗುವಳ್ಳಿ ಸತೀಶ್, ಶಿವಮೊಗ್ಗ ಗ್ರಾಮಾಂತರ ಮಾಜಿ ಬಿಜೆಪಿ ಅಧ್ಯಕ್ಷರಾದ ರತ್ನಾಕರ್ ಸೇರಿದಂತೆ ಪ್ರಮುಖರು ಹಾಜರಿದ್ದರು.
