Categories
ತೀರ್ಥಹಳ್ಳಿ

ತುಂಬಿದ ತುಂಗೆಗೆ ಬಾಗಿನ!

ಟಾಪ್ 5 ನ್ಯೂಸ್ ತೀರ್ಥಹಳ್ಳಿ

ತುಂಬಿದ ತುಂಗೆಗೆ ಬಾಗಿನ!
– ಶಾಸಕರು, ನಾಯಕರಿಂದ ಬಾಗಿನ ಅರ್ಪಣೆ
– ರಾಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಿಂದಲೂ ಅರ್ಪಣೆ

– ರಾಜಧಾನಿಯಲ್ಲಿ ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆ ಆಚರಣೆ: ಕಿಮ್ಮನೆ ಹಾಜರ್
– ಆ.25ಕ್ಕೆ ಮ್ಯಾಮ್‌ಕೋಸ್ ಅಲ್ಲಿ ಆರೋಗ್ಯ ಶಿಬಿರ
– ಆಗುಂಬೆ ಶಾಲೆ ಬಾಲಕ ಕಾಣೆಯಾಗಿದ್ದಾನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತುಂಗೆ ತುಂಬಿ ಹರಿಯುತ್ತಿದ್ದಾಳೆ. ಈ ಬಾರಿ 2 ಸಲ ರಾಮ ಮಂಟಪ ಮುಳುಗಿ ಉತ್ತಮ ಮಳೆಯಾಗಿದೆ. ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಕಾಂಗ್ರೆಸ್ ನಾಯಕ ಆರ್.ಎಂ ಮಂಜುನಾಥ ಗೌಡ ಮತ್ತು ಎಲ್ಲಾ ಪ್ರಮುಖರು ಸೇರಿ ಬಾಗಿನ ಅರ್ಪಣೆ ಮಾಡಿದ್ದಾರೆ.

ರಾಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಿಂದಲೂ ಅರ್ಪಣೆ

ತುಂಗಾ ನದಿಯ ಮಧ್ಯದಲ್ಲಿ ಇರುವ ಪುರಾಣ ಪ್ರಸಿದ್ಧ ರಾಮಮಂಟಪ ಮುಳುಗಿದ್ದು, ಶ್ರೀರಾಮೇಶ್ವರ ದೇವರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಶ್ವನಾಥ ಶೆಟ್ಟಿ ನೇತೃತ್ವದಲ್ಲಿ ಸಮಿತಿ ಸದಸ್ಯರು ತುಂಗೆಗೆ ಭಾಗಿನ ಅರ್ಪಿಸಿದರು.
ಶುಕ್ರವಾರ ತುಂಗಾ ನದಿಯ ದಡದಲ್ಲಿ ಶ್ರೀರಾಮೇಶ್ವರ ದೇವರ ವ್ಯವಸ್ಥಾಪನ ಸಮಿತಿ ಸದಸ್ಯರು ಭಕ್ತರ ಜೊತೆಗೆ ಆಗಮಿಸಿ ಬಾಗಿನ ಸಮರ್ಪಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ ನಿರ್ದೇಶಕರಾದ ವರಲಕ್ಷ್ಮಿ, ನಾಗಭೂಷಣ್, ರಾಮೇಶ್ವರ ದೇವಸ್ಥಾನದ ಅರ್ಚಕರಾದ ರಾಜಶೇಖರ್ ಭಟ್, ಮಹಾಬಲರಾವ್, ತ್ರಿವೇಣಿ ಸುರೇಶ, ಜ್ಯೋತಿ, ಹಾಲಿಗೆ ನಾಗರಾಜ್, ಪೂರ್ಣೇಶ್, ಪ್ರದೀಪ್‌ ಸೇರಿ ಹಲವರು ಇದ್ದರು.

ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆ ಆಚರಣೆ

ಭಾರತದ ಡಿಜಿಟಲ್ ಕ್ರಾಂತಿಯ ಹರಿಕಾರ, ಭಾರತ ರತ್ನ , ಮಾಜಿ ಪ್ರಧಾನಮಂತ್ರಿಗಳಾದ ಶ್ರೀಯುತ ದಿ. ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಮಲ್ಲೇಶ್ವರಂ ನಾ ಸೆಂಟ್ರಲ್ ಸರ್ಕಲ್ ನ ರಾಜೀವ್ ಗಾಂಧಿ ಪುತ್ಥಳಿಗೆ ಆರೋಗ್ಯ ಇಲಾಖೆಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರೊಂದಿಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು.

ಆ. 25ಕ್ಕೆ ಮ್ಯಾಮ್‌ಕೋಸ್ ಅಲ್ಲಿ ಆರೋಗ್ಯ ಶಿಬಿರ

ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದ (ಮ್ಯಾಮ್‌ಕೋಸ್) ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು 25.08.25 ರಂದು ತೀರ್ಥಹಳ್ಳಿ ಮ್ಯಾಮ್‌ಕೋಸ್ ಆವರಣದಲ್ಲಿ ಆಯೋಜನೆ ಆಗಿದೆ. ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಆಗುಂಬೆ ಶಾಲೆ ಬಾಲಕ ಕಾಣೆಯಾಗಿದ್ದಾನೆ

ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕನೊಬ್ಬ ಕಾಣೆಯಾಗಿದ್ದು ಎ ವಿ ಎಂ ಶಾಲೆಯ ವಿದ್ಯಾರ್ಥಿ ದರ್ಶನ್ 15 ವರ್ಷ ಇವನು ಮೂಲತಃ ಶಿವಮೊಗ್ಗದವರಾಗಿದ್ದು ಓದುವ ಸಲುವಾಗಿ ಎ ವಿ ಎಂ ಹಾಸ್ಟೇಲ್ ನಲ್ಲಿದ್ದನು. ಈತನ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಆಗುಂಬೆ ಪೊಲೀಸ್ ಠಾಣೆಗೆ ಸಂಪರ್ಕಿಸಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.