Categories
ತೀರ್ಥಹಳ್ಳಿ

ಮೇ 24ಕ್ಕೆ ಸ್ತನ ಕ್ಯಾನ್ಸ‌ರ್ ತಪಾಸಣಾ ಶಿಬಿರ

ಮೇ 24ಕ್ಕೆ ಸ್ತನ ಕ್ಯಾನ್ಸ‌ರ್ ತಪಾಸಣಾ ಶಿಬಿರ
– ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳಬಹುದು
– ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿ ಶಿಬಿರ
– ಮಲೆನಾಡು ಮಹಿಳಾ ಟ್ರಸ್ಟ್, ನಾರಾಯಣ ಹೆಲ್ತ್ ಆಯೋಜನೆ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಮಹಿಳಾ ಟ್ರಸ್ಟ್ (ರಿ.), ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಉಚಿತ ಮ್ಯಾಮೊಗ್ರಫಿ, ಸ್ತನ ಕ್ಯಾನ್ಸ‌ರ್ (ಬ್ರೆಸ್ಟ್ ಕ್ಯಾನ್ಸರ್) ತಪಾಸಣಾ ಶಿಬಿರ 24ನೇ ಮೇ 2024 (ಶುಕ್ರವಾರ) ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1 ರವರೆಗೆ ಸರ್ಕಾರಿ ಶಾಲೆ, ಬೆಟ್ಟಮಕ್ಕಿ, ತೀರ್ಥಹಳ್ಳಿಯಲ್ಲಿ ಆಯೋಜನೆ ಮಾಡಲಾಗಿದೆ.

ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಉಚಿತ ತಪಾಸಣೆ ಮಾಡಿಸಿಕೊಳ್ಳಿ

ನಿಮ್ಮ ವಯಸ್ಸು 40 ದಾಟಿದ್ದರೆ ಸ್ತನ ಕ್ಯಾನ್ಸರ್‌ನ ಮೊದಲ ಹಂತದ ಸಂಬಂಧವನ್ನು ಹೊಂದಿದ್ದರೆ ಸ್ತನ ಭಾಗದಲ್ಲಿ ಗಟ್ಟಿಯಾಗುವಿಕೆ ಅಥವಾ ಗಂಟು ಇದ್ದರೆ, ಸ್ತನದ ಆಕಾರದಲ್ಲಿ ಅಥವಾ ಗಾತ್ರದಲ್ಲಿ ಬದಲಾವಣೆ ನಿರ್ದಿಷ್ಟವಾಗಿ ಒಳಹೋದಂತೆ ಆಗುವುದು ಅಥವಾ ಅನಿಯಮಿತ ಆಕಾರ ಹೊಂದಿದ್ದರೆ ಸ್ತನದಿಂದ ರಕ್ತಸ್ರಾವ ಕಂಡುಬಂದರೆ ಸ್ತನ ತೊಟ್ಟುಗಳಲ್ಲಿ ಅಥವಾ ಅದರ ಸುತ್ತ ಬಿರುಕುಗಳು ಇದ್ದರೆ ಕಂಕುಳಿನ ಭಾಗದಲ್ಲಿ ಊತ ಅಥವಾ ಗಂಟು ಕಂಡುಬಂದರೆತಪಾಸಣೆ ಮಾಡಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ : 9986759486

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.