Categories
ತೀರ್ಥಹಳ್ಳಿ

ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣ ಆದ್ರೂ ನೆಟ್ವರ್ಕ್ ಕೊಡಲಿಲ್ಲ!

ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣ ಆದ್ರೂ ನೆಟ್ವರ್ಕ್ ಕೊಡಲಿಲ್ಲ!
– ಜನರು, ವಿದ್ಯಾರ್ಥಿಗಳ ಪರದಾಟ: ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಅಲ್ಲಿ ಘಟನೆ
– ತಕ್ಷಣ ಟವರ್ ಸೇವೆ ಶುರು ಮಾಡುವಂತೆ ಜನರ ಪಟ್ಟು!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಗ್ರಾಮದಲ್ಲಿ ಬಿಎಸ್ ಎನ್ ಎಲ್ ನೂತನ ಟವರ್ ನಿರ್ಮಾಣಗೊಂಡಿದ್ದರೂ ಇದೀಗ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ಇದರಿಂದ ಈ ಭಾಗದ ವಿದ್ಯಾರ್ಥಿಗಳು, ಜನತೆಗೆ ತೀವ್ರ ತೊಂದರೆ ಆಗುತ್ತಿದೆ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ. ಹೊಸದಾಗಿ ಬಿಎಸ್ ಎನ್ ಎಲ್ ಟವರ್ ನಿರ್ಮಾಣ ಆದ್ರೂ ಕೂಡ ನೆಟವರ್ಕ್ ಇಲ್ಲದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಮೊಬೈಲ್‌ ಟವರ್‌ನಿಂದ ಬಿಎಸ್‌ಎನ್‌ಎಲ್ ನೆಟವರ್ಕ್ ನಂಬಿರುವ ಗ್ರಾಮಸ್ಥರು ನೆಟವರ್ಕ್ ಇಲ್ಲದಿರುವುದರಿಂದ ತುಂಬಾ ತೊಂದರೆ ಅನುಭವಿಸುಬೇಕಾಗುತ್ತಿದೆ. ಸಮಸ್ಯೆ ಬಗೆಹರಿಸಲು ಟವರ್ ಹಾಕಿಸಿದರು ಕೂಡ ಏನೂ ಪ್ರಯೋಜನ ಇಲ್ಲ.

ಎಲ್ಲಾ ಕಾಮಗಾರಿ ಮುಗಿದರೂ ಕನೆಕ್ಷನ್ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈಗ ನ್ಯಾಯ ಬೆಲೆ ಅಂಗಡಿಯ ಪಡಿತರ ವಿತರಣೆಯಲ್ಲಿ ಒಟಿಪಿ ವ್ಯವಸ್ಥೆ ಇರುವುದರಿಂದ ನೆಟ್‌ವರ್ಕ್ ಸಮಸ್ಯೆಯಿಂದ ಇಲ್ಲಿನ ಜನರಿಗೆ ಸರಿಯಾದ ಸಮಯದಲ್ಲಿ ವಿತರಿಸುವ ಕಾರ್ಯ ಸಾಧ್ಯವಾಗುತ್ತಿಲ್ಲ. ಆಕಸ್ಮಾತ್ ಏನಾದರೂ ಘಟನೆಯಾದರೆ ಇಲ್ಲವೇ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಅಂಬ್ಯುಲೆನ್ಸ್ ಕಾಲ್ ಮಾಡಲು ಸಹ ನೆಟ್ವರ್ಕ್‌ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ನೆಟ್ ವರ್ಕ್ ಸರಿಪಡಿಸಬೇಕು ಎಂದು ಅಗ್ರಹಿಸಿದ್ದಾರೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಸಾವಿರಾರು ಮಂದಿ ಇದರಿಂದ ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ ಸ್ಥಳೀಯರು ತಕ್ಷಣ ಸೇವೆ ನೀಡುವಂತೆ ಪ್ರತಿಭಟನೆಗೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.