ಹಿರೇಸರದ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು
– ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ ಆರಗ ಜ್ಞಾನೇಂದ್ರ
– ಶಾಸಕರು ಅಪಘಾತವಾದ ಸಂದರ್ಭದಲ್ಲಿ ಮಾನವೀಯತೆ ಮೆರೆದಿದ್ದಾರೆ.
NAMMUR EXPRESS NEWS
ತೀರ್ಥಹಳ್ಳಿ : ಹಿರೇಸರದ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು ಗುಡ್ಡೆಕೊಪ್ಪದಿಂದ ಆರಗ ಮಾರ್ಗವಾಗಿ ತೀರ್ಥಹಳ್ಳಿ ಬರುವಾಗ ಹಿರೇಸರ ಸಮೀಪ ಶಿಕಾರಿಪುರ ಮೂಲದ ಕಾರಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಾರಿನಲ್ಲಿದ್ದ 4 ಜನರಿಗೆ ಗಾಯಗಳಾದ ಘಟನೆ ನಡೆದಿದೆ.
ಈ ವೇಳೆ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರು ಇದೇ ರಸ್ತೆಯಲ್ಲಿ ಬಂದಿದ್ದಾರೆ. ಸ್ಥಳಕ್ಕಾಗಮಿಸಿದ ಶಾಸಕರು ತಮ್ಮ ಕಾರಿನಲ್ಲಿ ಗಾಯಳುಗಳನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ತಿಳಿಸಿ ಗಾಯಾಳುಗಳಿಗೆ ಸಂತೈಸಿದ್ದಾರೆ. ಅನೇಕ ಬಾರಿ ಅಪಘಾತವಾದ ಸಂದರ್ಭದಲ್ಲಿ ಆರಗ ಜ್ಞಾನೇಂದ್ರ ಅವರು ಮಾನವೀಯತೆ ಮೆರೆದಿದ್ದಾರೆ.
