Categories
ತೀರ್ಥಹಳ್ಳಿ

ಇಂದು ನಾಳೆ ಸೇವಾ ಭಾರತಿ ವಿದ್ಯಾಕೇಂದ್ರದಲ್ಲಿ ಚೆಲಿಪಿಲಿ-ಸವಿಜೇನ ಸಂಜೆ’ ಕಾರ್ಯಕ್ರಮ

ಎಲ್ಲೆಲ್ಲಿ ಏನೇನು..?
ಇಂದು ನಾಳೆ ಸೇವಾ ಭಾರತಿ ವಿದ್ಯಾಕೇಂದ್ರದಲ್ಲಿ ಚೆಲಿಪಿಲಿ-ಸವಿಜೇನ ಸಂಜೆ’ ಕಾರ್ಯಕ್ರಮ
– ಜ.21 ರಂದು ತುಂಗಾಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಮಹಾಸಭೆ
– ಫೆ.12ರಿಂದ 19ಶ್ರೀ ತೀರ್ಥಹಳ್ಳಿ ಮಾರಿಕಾಂಬ ಜಾತ್ರೆ

NAMMUR EXPRESS NEWS
ತೀರ್ಥಹಳ್ಳಿ: ಜನವರಿ 5ರ ಇಂದು ಮತ್ತು ನಾಳೆ ಸೇವಾ ಭಾರತಿ ವಿದ್ಯಾಕೇಂದ್ರದ ಶಿಶುಮಂದಿರ ಹಾಗೂ 1,2,3 ನೇ ತರಗತಿ ಪುಟಾಣಿ ಮಕ್ಕಳ ಚಿಲಿಪಿಲಿ ಮತ್ತು 4 ರಿಂದ 7 ನೇ ತರಗತಿ ಮಕ್ಕಳ ಸವಿಜೇನ ಸಂಜೆ ಕಾರ್ಯಕ್ರಮವು ಸೊಪ್ಪುಗುಡ್ಡೆ ಶಾಂತವೇರಿ ಗೋಪಾಲಗೌಡ ರಂಗಮಂದಿರ ದಲ್ಲಿ ಜರುಗಲಿದೆ. ಸಂಜೆ 6ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸೇವಾಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಎಂ.ಜಿ. ವೆಂಕಟರಮಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪ.ಪಂ.ಅಧ್ಯಕ್ಷೆ ಗೀತಾ ರಮೇಶ್‌, ಕೊಪ್ಪ ಸ.ಪ್ರ.ದ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಉಮಾ ಶಂಕರ ಓ.ಎಂ., ಬೆಜ್ಜವಳ್ಳಿ ಮಲೆನಾಡು ಸಂಯುಕ್ತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಅರ್ಪಿತ ಟಿ.ಎಸ್. ಪಾಲ್ಗೊಳ್ಳುವರು. ಜ.6ರಂದು ಸಂಜೆ 4ರಿಂದ 7ನೇ ತರಗತಿ ಮಕ್ಕಳ ಸವಿಜೇನ ಸಂಜೆ ಕಾರ್ಯಕ್ರಮ ಜರುಗಲಿದೆ.

ಅಧ್ಯಕ್ಷತೆಯನ್ನು ಸೇವಾ ಭಾರತಿ ಟ್ರಸ್ಟ್‌ನ ನಿರ್ವಾಹಕ ವಿಶ್ವಸ್ಥರಾದ ದಿನೇಶ್ ಭಾರತೀ ಪುರ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಆರಗ ಜ್ಞಾನೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್, ನ್ಯಾಯವಾದಿ ರಾಮಸ್ವಾಮಿ ಎಂ.ಹೆಚ್.ಮೋದೊಳಿಗೆ, ಪೋಲೀಸ್ ಇನ್ಸ್ ಪೆಕ್ಟರ್ ದೀಪಕ್ ಎಂ.ಎಸ್.ಪಾಲ್ಗೊಳ್ಳುವರು.

ಜ.21 ರಂದು ತುಂಗಾಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಮಹಾಸಭೆ

ತೀರ್ಥಹಳ್ಳಿ: ಜನವರಿ 21ರ ಭಾನುವಾರ ಮಧ್ಯಾಹ್ನ 2ಗಂಟೆಗೆ ತುಂಗಾಮಹಾವಿದ್ಯಾಲಯದ ಸಮ್ಮೇಳನ ಸಭಾಂಗಣದಲ್ಲಿ ತುಂಗಾ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಸರ್ವ ಸದಸ್ಯರ ಮಹಾಸಭೆಯನ್ನು ನೆಂಪೆ ದೇವರಾಜ್ ಇವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರೆಲ್ಲರೂ ಪಾಲ್ಗೊಳ್ಳುವಂತೆ ಖಜಾಂಚಿ ಶ್ರೀಕಾಂತ್ ಭಟ್, ಕಾರ್ಯದರ್ಶಿ ಪ್ರೊ.ಕೆ.ಟಿ.ರಮೇಶ್ ಕೋರಿದ್ದಾರೆ.

ಮಾರ್ಚ್ 12ರಿಂದ 19ಶ್ರೀ ಮಾರಿಕಾಂಬ ಜಾತ್ರೆ

ತೀರ್ಥಹಳ್ಳಿಯ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವವು ನಡೆಯಲಿದ್ದು, ದಿನಾಂಕ: 12-03-2024 ರ ಮಂಗಳವಾರ ಜಾತ್ರೆ ಸಾರುವುದು. ದಿನಾಂಕ: 19-03-2024 ಮತ್ತು 20-03-2024 ರಂದು ವೈಭವದ ಜಾತ್ರೆ ನಡೆಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.