ತೀರ್ಥಹಳ್ಳಿಯಲ್ಲಿಂದು ಸಿನಿ ತಾರೆಯರ ರೋಡ್ ಶೋ!
– ಇಂದು ಸಂಜೆ 6.30ಕ್ಕೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ರೋಡ್ ಶೋ
– ಶಿವಣ್ಣ, ಡಾಲಿ ಧನಂಜಯ್, ದುನಿಯಾ ವಿಜಯ್, ಪ್ರೇಮ್, ವಿಜಯ ರಾಘವೇಂದ್ರ ,ಚಿಕ್ಕಣ್ಣ, ನಿಶ್ವಿಕಾ ನಾಯ್ಡು , ಚಂದನ್ ಶೆಟ್ಟಿ , ಅನುಶ್ರೀ , ಅಕುಲ್ ಸೇರಿ ಅನೇಕರ ಆಗಮನ
– ಸಚಿವ ಸಂತೋಷ್ ಲಾಡ್ ಕೂಡ ಹಾಜರ್
NAMMUR EXPRESS NEWS
ತೀರ್ಥಹಳ್ಳಿ: ಲೋಕ ಸಭಾ ಚುನಾವಣೆ ಕಣ ರಂಗೇರುತ್ತಿದೆ. ದಿನೇ ದಿನೇ ಪ್ರಚಾರ ಸಭೆಗಳು, ತಾರೆಯರು ಮತ ಕೇಳುತ್ತಿದ್ದಾರೆ. ಇದೀಗ ಸೋಮವಾರ ತೀರ್ಥಹಳ್ಳಿಗೆ ನಟ ನಟಿಯರ ದಂಡೇ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಮತ ಪ್ರಚಾರ ಮಾಡಲಿದ್ದಾರೆ. ಏ.29ರ ಸೋಮವಾರ ಸಂಜೆ 6.30ಕ್ಕೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ರೋಡ್ ಶೋ ಹಮ್ಮಿಕೊಂಡಿದ್ದು, ಈ ರೋಡ್ ಶೋನಲ್ಲಿ ಲೋಕಸಭಾ ಅಭ್ಯರ್ಥಿಯಾದ ಗೀತಾ ಶಿವರಾಜಕುಮಾರ್ , ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಸಚಿವ ಸಂತೋಷ್ ಲಾಡ್ , ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್ ಮತ್ತು ಆರ್ .ಎಂ ಮಂಜುನಾಥ್ ಗೌಡ ಸೇರಿ ಅನೇಕ ನಾಯಕರು ಆಗಮಿಸಲಿದ್ದಾರೆ.
ಖ್ಯಾತ ಚಲನ ಚಿತ್ರ ನಟರಾದ ಡಾಲಿ ಧನಂಜಯ್, ದುನಿಯಾ ವಿಜಯ್, ಪ್ರೇಮ್, ವಿಜಯ ರಾಘವೇಂದ್ರ ,ಚಿಕ್ಕಣ್ಣ, ನಿಶ್ವಿಕಾ ನಾಯ್ಡು , ಚಂದನ್ ಶೆಟ್ಟಿ , ಅನುಶ್ರೀ , ಅಕುಲ್ ಬಾಲಾಜಿ ಹಾಗೂ ಅನೇಕ ಚಿತ್ರನಟರು ಈ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ತೀರ್ಥಹಳ್ಳಿಗೆ ಇದೇ ಮೊದಲ ಬಾರಿಗೆ ಇಷ್ಟು ಮಂದಿ ನಟ ನಟಿಯರು ಆಗಮಿಸಲಿದ್ದಾರೆ.
ಯಾರ್ಯಾರು ಬರ್ತಾರೆ?
ಶಿವಣ್ಣ, ಡಾಲಿ ಧನಂಜಯ್, ದುನಿಯಾ ವಿಜಯ್, ಪ್ರೇಮ್, ವಿಜಯ ರಾಘವೇಂದ್ರ ,ಚಿಕ್ಕಣ್ಣ, ನಿಶ್ವಿಕಾ ನಾಯ್ಡು , ಚಂದನ್ ಶೆಟ್ಟಿ , ಅನುಶ್ರೀ , ಅಕುಲ್ ಸೇರಿ ಅನೇಕರ ಆಗಮನ. ಸಚಿವ ಸಂತೋಷ್ ಲಾಡ್ ಕೂಡ ಹಾಜರಿದ್ದು ತೀರ್ಥಹಳ್ಳಿ ಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ.