Categories
ತೀರ್ಥಹಳ್ಳಿ

ಈಡಿಗರ ಸಂಘದ ವಿದ್ಯಾರ್ಥಿ ನಿಲಯದ ಕಟ್ಟಡ ಉದ್ಘಾಟನೆಗೆ ಕ್ಷಣಗಣನೆ!

ಈಡಿಗರ ಸಂಘದ ವಿದ್ಯಾರ್ಥಿ ನಿಲಯದ ಕಟ್ಟಡ ಉದ್ಘಾಟನೆಗೆ ಕ್ಷಣಗಣನೆ!
– ಎಸ್ ಬಂಗಾರಪ್ಪ ಮತ್ತು ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ
– ನೂತನ ಕಟ್ಟಡ ಉದ್ಘಾಟನೆ: ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ : ಆರ್ಯ ಈಡಿಗರ ಸಂಘದ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆ.17ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಎಸ್ ಬಂಗಾರಪ್ಪ ಮತ್ತು ದಿ.ಡಾ.ಪುನೀತ್ ರಾಜ್ ಕುಮಾರ್ ಅವರ ಪುತ್ತಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ. ಈಡಿಗರ ಸಂಘದ ಅಧ್ಯಕ್ಷರಾದ ಮಟ್ಟಿನಮನೆ ರಾಮಚಂದ್ರ ಸಮುದಾಯದ ಸರ್ವರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಕೋಳಿಕಾಲು ಗುಡ್ಡದಲ್ಲಿ ಈಗಾಗಲೇ ಈಡಿಗ ಸಮುದಾಯ ಭವನ ಇದೆ. ಇದೀಗ 2 ಕೋಟಿ ರೂ ಮೊತ್ತದ ವೆಚ್ಚದಲ್ಲಿ ನೂತನ ವಿದ್ಯಾರ್ಥಿ ನಿಲಯ, ಕಚೇರಿ, ಅಂಗಡಿ ಮಳಿಗೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ಉದ್ಘಾಟನೆ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬ್ರಹ್ಮಶ್ರೀ ನಾರಾಯಣ ಗುರು ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿ ವಹಿಸಲಿದ್ದಾರೆ. ನೂತನ ಕಟ್ಟಡದ ಉದ್ಘಾಟನೆಯನ್ನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಮಾಡಲಿದ್ದು ಕಾರ್ಯಕ್ರಮ ಉದ್ಘಾಟನೆಯನ್ನು ಸಂಸದ ಬಿ. ವೈ ರಾಘವೇಂದ್ರ ಮಾಡಲಿದ್ದಾರೆ. ನೂತನ ಕಚೇರಿ ಉದ್ಘಾಟನೆಯನ್ನು ಶಾಸಕರಾದ ಆರಗ ಜ್ಞಾನೇಂದ್ರರವರು ಮಾಡಲಿದ್ದಾರೆ. ಇನ್ನು ಎಸ್ ಬಂಗಾರಪ್ಪ ಮತ್ತು ಪುನೀತ್ ರಾಜ್ ಕುಮಾರ್ ಅವರ ಪುತ್ತಳಿಯನ್ನು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಎಸ್ ರಾಮಪ್ಪನವರು ಹಾಗೂ ಮಾಜಿ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪನವರು ಅನಾವರಣಗೊಳಿಸಲಿದ್ದಾರೆ.

ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯಕ್, ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷರಾದ ಡಾ. ತಿಮ್ಮೇಗೌಡ ಹಾಗೂ ನಾರಾಯಣ ಸ್ವಾಮಿ ಗ್ರೂಪ್ ಚೇರ್ಮನ್ ಸುಧಾಕ‌ ಅವರನ್ನು ಸನ್ಮಾನಿಸಲಾಗುತ್ತದೆ ಹಾಗೂ ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ್ ಗೌಡ್ರು ಮತ್ತು ನಿವೃತ್ತ ಪೊಲೀಸ್ ಅಧಿಕ್ಷಕರಾದ ಎಂ.ಜಿ ಸುಬ್ರಮಣ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ತೀರ್ಥಹಳ್ಳಿ ತಾಲೂಕಿನಲ್ಲಿ ಮಾದರಿ!

ಈಡಿಗ ಸಮುದಾಯ ತೀರ್ಥಹಳ್ಳಿಯಲ್ಲೇ ಮಾದರಿ ಆಗಿದ್ದು ಸಮುದಾಯದ ವಿದ್ಯಾರ್ಥಿಗಳಿಗೆ ಈ ಹಿಂದೆಯೇ ಹಾಸ್ಟೆಲ್ ವ್ಯವಸ್ಥೆ ಮಾಡಿತ್ತು. ಇದೀಗ ನೂತನ 10 ಕೊಠಡಿ ಹಾಸ್ಟೆಲ್ ನಿರ್ಮಾಣ ಆಗಿದೆ. ಇನ್ನು ನೂತನ ಕಚೇರಿ, 2 ಮಳಿಗೆ, 3 ಗೆಸ್ಟ್ ರೂಮ್, ಅಡುಗೆ ಮನೆ, ಸ್ಟೋರ್ ರೂಮ್ ಹೊಸ ಕಟ್ಟಡದಲ್ಲಿದೆ. ಈ ಮೂಲಕ ಸಮುದಾಯದ ವಿದ್ಯಾರ್ಥಿಗಳಿಗೆ ತಾಲೂಕಿನಲ್ಲೇ ಮೊದಲ ಬಾರಿಗೆ ಹಾಸ್ಟೆಲ್ ಸೌಲಭ್ಯ ಈಡಿಗ ಸಂಘ ನೀಡುತ್ತಿದೆ.

ಸಮುದಾಯದ ಹೆಮ್ಮೆಯ ಕಾರ್ಯಕ್ರಮಕ್ಕೆ ಈಡಿಗ ಸಂಘದ ಅಧ್ಯಕ್ಷ ಮಟ್ಟಿನಮನೆ ರಾಮಚಂದ್ರ ಸೇರಿದಂತೆ ಎಲ್ಲಾ ನಿರ್ದೇಶಕರು, ಪ್ರಮುಖರು ಸ್ವಾಗತಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.