Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ದಸರಾ ಗೊಂಬೆ ಬೆರಗು!

ತೀರ್ಥಹಳ್ಳಿಯಲ್ಲಿ ದಸರಾ ಗೊಂಬೆ ಬೆರಗು!
– ಸೇವಾಭಾರತಿ ಶಿಶು ಮಂದಿರದಲ್ಲಿ 42ನೇ ವರ್ಷದ ಬೊಂಬೆ ಪ್ರದರ್ಶನ
– ನೀವು ನೋಡ ಬನ್ನಿ ದಸರಾ ಗೊಂಬೆ..!

NAMMUR EXPRESS NEWS
ತೀರ್ಥಹಳ್ಳಿ: ದಸರಾ ಹಬ್ಬ ಎಂದರೆ ಗೊಂಬೆಗಳ ಹಬ್ಬ. ದಸರಾದಲ್ಲಿ ಗೊಂಬೆ ಪ್ರದರ್ಶನ ತೀರ್ಥಹಳ್ಳಿಯಲ್ಲೂ ಗಮನ ಸೆಳೆದಿದೆ. ತೀರ್ಥಹಳ್ಳಿ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಸೇವಾಭಾರತಿಯ ಅಂಗ ಸಂಸ್ಥೆಯಾದ ಭಾರತಿ ಶಿಶು ಮಂದಿರದಲ್ಲಿ 42ನೇ ವರ್ಷದ ಬೊಂಬೆ ಪ್ರದರ್ಶನ ನಡೆಯುತ್ತಿದೆ. ಪ್ರತಿ ದಿನ ಗೊಂಬೆ ಪ್ರದರ್ಶನ ನಡೆಯುತ್ತಿದೆ. ಕೊಪ್ಪ ಸರ್ಕಲ್ ಕೆ ಸಿ ರಸ್ತೆಯಲ್ಲಿರುವ ಸೇವಾ ಭಾರತಿ ಶಿಶು ವಿಹಾರದಲ್ಲಿ ಗತಕಾಲದ ವೈಭವವನ್ನು ಸಾರುವ ಮೈಸೂರು ರಾಜರ ಕಾಲದ ಪರಂಪರೆಯ ದಸರಾ ಸಂಸ್ಕೃತಿಯನ್ನು ಈ ಬೊಂಬೆ ಪ್ರದರ್ಶನದಲ್ಲಿ ಕಾಣಬಹುದು. ನವರಾತ್ರಿ ಪ್ರಾರಂಭವಾಗುತ್ತಿದ್ದಂತೆ ಶಿಶು ಮಂದಿರದಲ್ಲಿ ಇದ್ದ ಬೊಂಬೆಗಳನ್ನು ಸ್ವಚ್ಛಗೊಳಿಸಿ ಸಿಂಗರಿಸಲಾಗಿದೆ. ಅ.20ರ ಶುಕ್ರವಾರದಿಂದ ಮಂಗಳವಾರದವರೆಗೆ ಈ ಬೊಂಬೆ ಉತ್ಸವ ನಡೆಯಲಿದೆ.

ತ್ರಿಪುರಾಸುರ ವಧೆ ಕಥೆ ಹೇಳಿದ ಗೊಂಬೆಗಳು!

ತ್ರಿಪುರಾಸುರ ವಧೆ ಎಂಬ ಪುರಾಣ ಕಥೆಗೆ ಬೊಂಬೆಗಳಿಗೆ ಅಲಂಕಾರ ಮಾಡಿ ಜೋಡಿಸಲಾಗಿದೆ. ನವರಾತ್ರಿಯಲ್ಲಿ ನಾಲ್ಕು ದಿನ ಮಾತ್ರ ಈ ಆಚರಣೆ ನಡೆಯುತ್ತದೆ. ಮೂಲ ನಕ್ಷತ್ರದ ಶಾರದಾ ಪೂಜೆ ದಿನ ಬೊಂಬೆಯನ್ನಿಟ್ಟು ನವರಾತ್ರಿ ಮುಗಿದ ಮಾರನೇ ದಿನ ಎಲ್ಲಾ ಬೊಂಬೆಗಳನ್ನು ತೆಗೆದು, ಮುಂದಿನ ವರ್ಷದ ಬೊಂಬೆ ಪ್ರದರ್ಶನಕ್ಕಾಗಿ ಸುರಕ್ಷತೆಯಿಂದ ಎತ್ತಿಡಲಾಗುತ್ತದೆ.ಈ ಬೊಂಬೆ ಪ್ರದರ್ಶನ ಪಟ್ಟಣದ ಜನರಿಗೆ ಮುದ ನೀಡುತ್ತದೆ. ಚಿಕ್ಕ-ಚಿಕ್ಕ ಮಕ್ಕಳಾದಿಯಾಗಿ ಎಲ್ಲರೂ ಬೊಂಬೆಗಳನ್ನು ವೀಕ್ಷಿಸಿ ಸಂತಸ ಪಡುತ್ತಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.