Categories
ತೀರ್ಥಹಳ್ಳಿ

ತೀರ್ಥಹಳ್ಳಿ ಸಿದ್ದೇಶ್ವರ ಬೆಟ್ಟದಲ್ಲಿ ಇಂದು ದೀಪೋತ್ಸವ!

ತೀರ್ಥಹಳ್ಳಿ ಸಿದ್ದೇಶ್ವರ ಬೆಟ್ಟದಲ್ಲಿ ಇಂದು ದೀಪೋತ್ಸವ!
– ಸಿದ್ದೇಶ್ವರ ಗುಡ್ಡದಲ್ಲಿ ದೀಪೋತ್ಸವಕ್ಕೆ ಭರ್ಜರಿ ಸಿದ್ಧತೆ
– ಧಾರ್ಮಿಕ ಕಾರ್ಯಕ್ರಮ: ಅನ್ನ ಸಂತರ್ಪಣೆ, ಸರ್ವರಿಗೂ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಬಾಳೆಬೈಲಿನಲ್ಲಿ ಅತೀ ಎತ್ತರದ ಅಂದರೆ ಸುಮಾರು ಇನ್ನೂರು ಅಡಿಗಳಷ್ಟು ಎತ್ತರವಿರುವ ಸಿದ್ದೇಶ್ವರ ಗುಡ್ಡದಲ್ಲಿ ನೆಲೆಸಿರುವ ಸಿದ್ದೇಶ್ವರ ದೇವರಿಗೆ ಡಿಸೇಂಬರ್ 24ರಂದು ದೀಪೋತ್ಸವ ನಡೆಯಲಿದೆ.
ತೀರ್ಥಹಳ್ಳಿಯ ಅತೀ ದೊಡ್ಡ ದೀಪೋತ್ಸವ ಎಂದೇ ಖ್ಯಾತಿ ಪಡೆದಿರುವ ಸಿದ್ದೇಶ್ವರ ಗುಡ್ಡದಲ್ಲಿ ಸಿದ್ದೇಶ್ವರ ಸ್ವಾಮಿ ಸಮಿತಿ ಇವರ ಆಶ್ರಯದಲ್ಲಿ ಡಿ.24 ರ ಭಾನುವಾರ ಏಕಾದಶಾರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ದೀಪೋತ್ಸವ ನಡೆಯಲಿದೆ. ನಂತರ ಸಾಮೂಹಿಕ ಅನ್ನ ಸಂತರ್ಪಣೆ ಇರಲಿದೆ. ಈಗಾಗಲೇ ಇಡೀ ಬೆಟ್ಟ ಹಾಗೂ ಬಾಳೆಬೈಲಿನ ಮುಖ್ಯ ರಸ್ತೆಯಿಂದ ಗುಡ್ಡದವರೆಗೆ ವಿದ್ಯುತ್ ಅಲಂಕಾರಕ್ಕೆ ಸಿದ್ಧತೆ ನಡೆದಿದೆ.

ಡಿ.25ರಂದು ಸಂಜೆ ಸಿದ್ದೇಶ್ವರ ಸಭಾಭವನ ಉದ್ಘಾಟನೆ ಹಾಗೂ ಸನ್ನಿಧಿ ಕಲಾವಿದರು ಉಡುಪಿ ಇವರಿಂದ ಅಪ್ಪೆ ಮಂತ್ರ ದೇವತೆ ಎಂಬ ತುಳು / ಕನ್ನಡ ಭಕ್ತಿ ಪ್ರಧಾನ ನಾಟಕ ನಡೆಯಲಿದೆ. ಸಾವಿರಾರು ಜನ ಬೆಟ್ಟದಲ್ಲಿ ನಡೆದು ದೀಪೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.