Categories
ತೀರ್ಥಹಳ್ಳಿ

ರಾಮಕೊಂಡದಲ್ಲಿ ತೀರ್ಥ ಸ್ನಾನ ಮಾಡಿದ ಭಕ್ತರು!

ರಾಮಕೊಂಡದಲ್ಲಿ ತೀರ್ಥ ಸ್ನಾನ ಮಾಡಿದ ಭಕ್ತರು!
– ಕೊರೆಯುವ ಚಳಿಯಲ್ಲೂ ಮುಂಜಾನೆ ಸ್ನಾನ
– ರಾಮೇಶ್ವರನ ದರ್ಶನಕ್ಕೆ ಸರದಿ ಸಾಲು: ಎಳ್ಳಮಾವಾಸ್ಯೆ ಸಡಗರ ಆರಂಭ

NAMMUR EXPRESS NEWS
ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಪ್ರಮುಖ ಘಟ್ಟ ಇದೀಗ ತೀರ್ಥ ಸ್ನಾನದೊಂದಿಗೆ ಶುರುವಾಗಿದೆ. ತುಂಗಾನದಿಯಲ್ಲಿರುವ ಪರಶುರಾಮ ಕೊಂಡದಲ್ಲಿ ಸಾವಿರಾರು ಭಕ್ತರು ಗುರುವಾರ ಮುಂಜಾನೆಯಿಂದಲೇ ಕ್ಯೂ ನಿಂತು ತೀರ್ಥ ಸ್ನಾನ ಮಾಡಿದರು. ಇಡೀ ತುಂಗಾ ನದಿ ಸುತ್ತ ಭಕ್ತರು ಕಂಡು ಬಂದರು. ಗುರುವಾರ ಇಡೀ ದಿನ ತೀರ್ಥ ಸ್ನಾನ ನಡೆಯಲಿದೆ. ಗುರುವಾರ ಮುಂಜಾನೆ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವ ನದಿ ದಡಕ್ಕೆ ಆಗಮಿಸಿ ಕೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ನದಿಯಲ್ಲಿ ಮಿಂದು ಶ್ರೀ ದೇವರ ದರ್ಶನ ಪಡೆದರು. ಪೊಲೀಸ್ ಇಲಾಖೆ ಭದ್ರತೆ ಒದಗಿಸಿದೆ. ಸ್ನಾನ ಬಳಿಕ ದೇಗುಲದಲ್ಲಿ ಭಕ್ತರಿಗೆ ದೇವರ ದರ್ಶನ ಸಿಗಲಿದೆ. ಈಗಾಗಲೇ ಸಾವಿರಾರು ಭಕ್ತರು ದೇವರ ದರ್ಶನ ಪಡೆದಿದ್ದಾರೆ. ತಹಸೀಲ್ದಾ‌ರ್ ಜಕ್ಕಣ್ಣ ಗೌಡರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ತೆಪ್ಪೋತ್ಸವ ಸಮಿತಿಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಸುಶೀಲ ಶೆಟ್ಟಿ ಸೇರಿ ಸಾವಿರಾರು ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.