Categories
ತೀರ್ಥಹಳ್ಳಿ

ಧರ್ಮಸ್ಥಳ ಯೋಜನೆಯ ವಾತ್ಸಲ್ಯ ಮನೆ ಭಾಗ್ಯ!

ಧರ್ಮಸ್ಥಳ ಯೋಜನೆಯ ವಾತ್ಸಲ್ಯ ಮನೆ ಭಾಗ್ಯ!
– ಮನೆ ಪ್ರವೇಶಿಸುವುದರ ಮೂಲಕ ತಹಶೀಲ್ದಾರ್ ರಂಜಿತ್ ಉದ್ಘಾಟನೆ
– ಅಸಹಾಯಕ ಮಹಿಳೆಯರಿಗೆ ನೂತನ ಮನೆ ನಿರ್ಮಾಣ.
– ರಾಜ್ಯದಾದ್ಯಂತ 778 ಮನೆಗಳು ಮಂಜೂರು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಶೆಟ್ಟಿಗಳ ಕೊಪ್ಪ ಗ್ರಾಮದ ನಿರ್ಗತಿಕರಾದ ಶ್ರೀಮತಿ ಚೆನ್ನಮ್ಮ ಹೆಗ್ಡೆ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ತಾಲೂಕಿನ ತಹಶೀಲ್ದಾರ್ ರಂಜಿತ್ ಮನೆಯ ಒಳ ಪ್ರವೇಶಿಸುವುದರ ಮೂಲಕ ಉದ್ಘಾಟನೆ ಮಾಡಿ ಹಸ್ತಾಂತರ ಮಾಡಿದರು.
ಕಾರ್ಯಕ್ರಮವನ್ನು ನೆರವೇರಿಸಿ ಗ್ರಾಮಾಭಿವೃದ್ಧಿ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳ ಜೊತೆ ಈ ಒಂದು ಕಾರ್ಯಕ್ರಮದ ಮೂಲಕ ನಿರ್ಗತಿಕ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿ ಅವರ ಜೀವನಕ್ಕೆ ಭದ್ರತೆಯನ್ನು ನೀಡುವ ಉತ್ತಮ ಕೆಲಸದ ಬಗ್ಗೆ ಶ್ಲಾಘಿಸಿ ಫಲಾನುಭವಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಕಛೇರಿಯ ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ಶ್ರೀ ವಿಠಲ್ ಪೂಜಾರಿರವರು ಭಾಗವಹಿಸಿ ವಾತ್ಸಲ್ಯ ಕಾರ್ಯಕ್ರಮಗಳ ಮೂಲ ಉದ್ದೇಶ ಮತ್ತು ಮಹತ್ವಗಳ ಜೊತೆಗೆ ಮಾಸಾಶನ, ವಾತ್ಸಲ್ಯ ಕಿಟ್, ವಾತ್ಸಲ್ಯ ಮಿಕ್ಸ್, ವಾತ್ಸಲ್ಯ ಮನೆಗಳನ್ನು ಗ್ರಾಮ ಮಟ್ಟದಲ್ಲಿ ಅನುಷ್ಠಾನ ಮಾಡುವ ವಿಧಾನಗಳ ಬಗ್ಗೆ ತಿಳಿಸಿದರು, ಈ ಸಂದರ್ಭದಲ್ಲಿ ಪೂಜ್ಯವಾದ ಚಿಕಿತ್ಸಾಲಯದ ವೈದ್ಯರಾದ ಶ್ರೀ ಜೀವಂಧರ್ ಜೈನ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರಾಘವೇಂದ್ರ ಸೊಪ್ಪುಗುಡ್ಡೆ, ತಾಲೂಕು ಯೋಜನಾಧಿಕಾರಿಗಳಾದ ಶ್ರೀಮತಿ ಮಾಲತಿ ದಿನೇಶ್, ಕೇಂದ್ರ ಕಛೇರಿಯ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿಗಳಾದ ಶ್ರೀಮತಿ ಸಂಗೀತಾ, ಚಿತ್ರದುರ್ಗ ಪ್ರಾದೇಶಿಕ ಕಛೇರಿಯ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿಗಳಾದ ಶ್ರೀಮತಿ ರತ್ನಾ ಮೈಪಾಲ್, ಒಕ್ಕೂಟದ ಅಧ್ಯಕ್ಷರಾದ ಶ್ರೀ ನರೇಶ್, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಶ್ರೀಮತಿ ಲಲಿತಾ, ವಲಯದ ಮೇಲ್ವಿಚಾರಕರಾದ ಶ್ರೀಮತಿ ಹೇಮಾ ಮತ್ತು ಸೇವಾಪ್ರತಿನಿಧಿ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ರಾಜ್ಯದಲ್ಲಿ 778 ಮನೆಗಳು ಮಂಜೂರು

ರಾಜ್ಯದಾದ್ಯಂತ 778 ಮನೆಗಳು ಮಂಜೂರಾಗಿದ್ದು ಇದುವರೆಗೆ 650 ಮನೆ ನಿರ್ಮಾಣಗೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಸಹಾಯಕ ಮಹಿಳೆಯರಿಗೆ ನೂತನ ಮನೆ ನಿರ್ಮಾಣ. ಒಂದು ಮನೆ ನಿರ್ಮಾಣ ಮಾಡಲು 94,000 ವೆಚ್ಚದಲ್ಲಿ ನಿರ್ಮಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.