ಮಕ್ಕಳಿಗೆ ಪುಸ್ತಕ ಹಂಚಿ ಬಂಗಾರಪ್ಪ ಜನ್ಮ ದಿನ!
– ಶ್ರೀ ನಾರಾಯಣಗುರು ವಿಚಾರ ವೇದಿಕೆ ಮತ್ತು ಬಂಗಾರಪ್ಪ ಅಭಿಮಾನಿ ಬಳಗದಿಂದ ಸಾಮಾಜಿಕ ಕೆಲಸ
NAMMUR EXPRESS NEWS
ತೀರ್ಥಹಳ್ಳಿ: ನಾಡು ಕಂಡ ಧೀಮಂತ ನಾಯಕ,ಅಕ್ಷಯ, ಆರಾಧನಾ, ಗ್ರಾಮೀಣಾ ಕೃಪಾಂಕ, ಅಕ್ಷರ ತುಂಗಾದಂತಹ ಕಾರ್ಯಕ್ರಮಗಳ ಮುಖಾಂತರ ಜನರ ಹೃದಯದಲ್ಲಿ ಉಳಿದಿರುವ ಮಾಜಿ ಮುಖ್ಯಮಂತ್ರಿ ದಿ.ಎಸ್ ಬಂಗಾರಪ್ಪನವರ 90ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ನಾರಾಯಣಗುರು ವಿಚಾರ ವೇದಿಕೆ ಮತ್ತು ಬಂಗಾರಪ್ಪ ಅಭಿಮಾನಿ ಬಳಗದಿಂದ ತೀರ್ಥಹಳ್ಳಿ ತಾಲೂಕಿನ ಹೊದಲ ಸುತ್ತ ಮುತ್ತ ಸೇರಿ ಹಲವು ಶಾಲೆಗಳ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎನ್.ಜಿ.ವಿ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ, ಮುಖಂಡರಾದ ಹುಂಚದಕಟ್ಟೆ ಆದರ್ಶ, ಎಸ್ ಎನ್ ಜಿ ವಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊದಲ ಶಿವು,ಪಂಚಾಯ್ತಿ ಸದಸ್ಯರಾದ ಡಿ ಮಂಜುನಾಥ್.ಕುಸುಮ ಕುಮಾರ್, ಸುಜಯ ಕಾಂತರಾಜ್, ಕಾಂತರಾಜ್, ನಾಗರಾಜ್, ರಾಘವೇಂದ್ರ, ಕಾರ್ತಿಕ್,ಗಂಗಾಧರ್,ಪ್ರಜ್ವಲ್ ಮುಂತಾದವರು ಇದ್ದರು.