ದೀಪಾವಳಿ ಹಬ್ಬದ ಸಂಭ್ರಮಕ್ಕೆ ಬ್ಯಾಂಕ್ ಕಿರಿಕಿರಿ..!
– ಎಟಿಎಂನಲ್ಲಿ ಹಣ ಇಲ್ಲ.. ಬ್ಯಾಂಕ್ ಓಪನ್ ಇಲ್ಲ
– ಬ್ಯಾಂಕ್ ಬಂದ್ ಹಿನ್ನೆಲೆ: ಏಟಿಎಂ ಮುಂದೆ ಗ್ರಾಹಕರ ಪರದಾಟ
NAMMUR EXPRESS NEWS
ತೀರ್ಥಹಳ್ಳಿ: ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಜನರು ಸಿದ್ಧಗೊಳ್ಳುತ್ತಿದ್ದು, ತಮ್ಮ ಅಗತ್ಯ ವಸ್ತುಗಳನ್ನು ಖರೀದಿಸಲು ಸಿದ್ದರಾಗಿದ್ದಾರೆ. ಆದರೆ ಬ್ಯಾಂಕ್ ನಿರ್ಲಕ್ಷ್ಯ ಕೆಲವರ ಹಬ್ಬದ ಸಂಭ್ರಮಕ್ಕೆ ತಣ್ಣೀರು ಎರಚಿದೆ. ತೀರ್ಥಹಳ್ಳಿ ಸೇರಿ ತಾಲೂಕಿನ ಹಲವೆಡೆ ಏಟಿಎಂ ಮುಂದೆ ಬಂದರೆ ಎಟಿಎಂ ನಲ್ಲಿ ಹಣವಿಲ್ಲದೆ ಇದೀಗ ಹಬ್ಬಕ್ಕೆ ಜನರಿಗೆ ಕಿರಿಕಿರಿ ಉಂಟಾಗಿದೆ. ಎರಡನೇ ಶನಿವಾರವಾಗಿರುವುದರಿಂದ ಬ್ಯಾಂಕ್ ಕೂಡ ಬಂದ್ ಆಗಿದ್ದು, ಇದೀಗ ಹಬ್ಬಕ್ಕೆ ಗ್ರಾಹಕರಿಗೆ ಬ್ಯಾಂಕ್ ಕೂಡ ಇಲ್ಲ ಏಟಿಎಂನಲ್ಲಿ ಹಣ ಕೂಡ ಇಲ್ಲವಾಗಿದ್ದು ಎಟಿಎಂ ಮುಂದೆ ಗ್ರಾಹಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಬಂದ ಗ್ರಾಹಕರಿಗೆ ಎಟಿಎಂ ನಲ್ಲಿ ಹಣವಿಲ್ಲದೆ ಬ್ಯಾಂಕ್ ಕೂಡ ಓಪನ್ ಇಲ್ಲದೆ ಇರುವುದು ಬೇಸರ ಉಂಟು ಮಾಡಿದೆ.
ಪ್ರತಿ ಸಲವು ಇದೇ ಗೋಳು!
ತೀರ್ಥಹಳ್ಳಿ ಸೇರಿ ಬಹುತೇಕ ತಾಲೂಕಲ್ಲಿ ಬ್ಯಾಂಕ್ ನಿರ್ಲಕ್ಷ್ಯದಿಂದ ಗ್ರಾಹಕರು ಹಣ ಇಲ್ಲದೆ ಹಬ್ಬ ಕಳೆಯಬೇಕಿದೆ. ಬೆಂಗಳೂರು ಸೇರಿ ದೂರದ ಊರಿಂದ ಬಂದ ಜನ ಏಟಿಎಂ ನಂಬಿ ಬಂದಿದ್ದಾರೆ. ಆದರೆ ಪಟ್ಟಣದ ಕೆಲವು ಏಟಿಎಂ ಕೆಲಸ ಮಾಡುತ್ತಿಲ್ಲ. ಬ್ಯಾಂಕ್ ರಜೆ ಇದೆ.
